ತಮಿಳಿನ ಖ್ಯಾತ ನಿರ್ದೇಶಕ ಶಂಕರ್​ಗೆ ಅವಮಾನ?

Indian 3: ‘ಇಂಡಿಯನ್ 2’ ಸಿನಿಮಾ ಫ್ಲಾಪ್ ಆದ ಬಳಿಕ ‘ಇಂಡಿಯನ್ 3’ ಸಿನಿಮಾ ಬರುವುದೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಅನುಮಾನ ದೂರವಾಗಿದ್ದು, ‘ಇಂಡಿಯನ್ 3’ ಸಿನಿಮಾ ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಂ ಆಗಲಿದೆ.

ತಮಿಳಿನ ಖ್ಯಾತ ನಿರ್ದೇಶಕ ಶಂಕರ್​ಗೆ ಅವಮಾನ?
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Oct 04, 2024 | 6:55 PM

ಸಿನಿಮಾನ ಥಿಯೇಟರ್​ನಲ್ಲಿ ರಿಲೀಸ್ ಮಾಡೋಕೆ ಸಾಧ್ಯವೇ ಇಲ್ಲ ಎಂದಾಗ ಅಂಥ ಸಿನಿಮಾಗಳನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕೆಲವೊಮ್ಮೆ ಒಟಿಟಿಯವರು ಕೂಡ ಸಿನಿಮಾನ ಖರೀದಿಸುವುದಿಲ್ಲ. ಆದರೆ, ಖ್ಯಾತ ನಿರ್ದೇಶಕನ ಚಿತ್ರ ನೇರವಾಗಿ ಒಟಿಟಿಗೆ ಬರುತ್ತದೆ ಎಂದರೆ ಅದು ದೊಡ್ಡ ಅವಮಾನವೇ ಸರಿ. ಈಗ ಶಂಕರ್ ಅವರಿಗೆ ಹೀಗೊಂದು ಆಫರ್ ಬಂದಿದೆಯಂತೆ. ‘ಇಂಡಿಯನ್ 2’ ಸೋಲಿನ ಬಳಿಕ ‘ಇಂಡಿಯನ್ 3’ ಚಿತ್ರವನ್ನು ಥಿಯೇಟರ್​ಲ್ಲಿ ರಿಲೀಸ್ ಮಾಡದೆ ಒಟಿಟಿಯಲ್ಲಿ ಬಿಡುಗಡೆ ಮಾಡುವ ನಿರ್ಣಯ ಕೈಗೊಂಡಿದೆ.

ನಿರ್ದೇಶಕ ಶಂಕರ್ ಅವರಿಗೆ ಸಾಕಷ್ಟು ಖ್ಯಾತಿ ಇತ್ತು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದರು. ಅವರು ‘ಇಂಡಿಯನ್ 2’ ಸಿನಿಮಾ ಮೂಲಕ ದೊಡ್ಡ ಫ್ಲಾಪ್ ಕಂಡರು. ಅವರು ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಈ ಸಿನಿಮಾ ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಯಿತು. ‘ಇಂಡಿಯನ್’ ಸಿನಿಮಾ ದೊಡ್ಡ ಗೆಲುವು ಕಂಡಿತ್ತು. ಅದಕ್ಕೆ ವಿರುದ್ಧವಾಗಿ ‘ಇಂಡಿಯನ್ 2’ ಚಿತ್ರ ಇತ್ತು. ಈಗ ‘ಇಂಡಿಯನ್ 3’ ನೇರವಾಗಿ ಒಟಿಟಿಗೆ ಲಗ್ಗೆ ಇಡುತ್ತಿದೆ.

ಸದ್ಯ ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ‘ಇಂಡಿಯನ್ 3’ ಸಿನಿಮಾ ಬರುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಕೆಲವರಿಗೆ ಅನುಮಾನ ಮೂಡಿದೆ. ಈ ವಿಚಾರದಲ್ಲಿ ಸೋಶಿಯಲ್ ಮೀಡಿಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿತ್ತು, ಆದರೆ ಈಗ ಅನುಮಾನಕ್ಕೆ ತೆರೆ ಬಿದ್ದಿದ್ದು, ‘ಇಂಡಿಯನ್ 3’ ನೇರ ಒಟಿಟಿಗೆ ಬರುವುದು ಖಾತ್ರಿಯಾಗಿದೆ.

ಇದನ್ನೂ ಓದಿ:70ರ ವಯಸ್ಸಲ್ಲೂ ಕಲಿಯುವ ಉತ್ಸಾಹ, ಅಮೆರಿಕದಲ್ಲಿ ಕೋರ್ಸ್ ಸೇರಿಕೊಂಡ ಕಮಲ್ ಹಾಸನ್

ಶಂಕರ್ ಅವರು ದೊಡ್ಡ ಗೆಲುವು ಕಂಡಿದ್ದು 2010ರಲ್ಲಿ. ಅವರ ನಿರ್ದೇಶನದ ‘ಎಂದಿರನ್’ ಯಶಸ್ಸು ಕಂಡಿತ್ತು. ಇದಾದ ಬಳಿಕ ಶಂಕರ್ ಅವರು ನಿಧಾನವಾಗಿ ಚಾರ್ಮ್ ಕಳೆದುಕೊಳ್ಳೋಕೆ ಆರಂಭಿಸಿದರು. ಶಂಕರ್ ಮ್ಯಾಜಿಕ್ ಮೊದಲಿನ ರೀತಿ ಇಲ್ಲ. ಕಮಲ್ ಹಾಸನ್ ಅವರು ಸದ್ಯ ಬೇರೆ ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ‘ಇಂಡಿಯನ್ 3’ ಚಿತ್ರಕ್ಕೆ ಡೇಟ್ ಕೊಡಲು ಮನಸ್ಸು ಮಾಡುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಶಂಕರ್ ಅವರು ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ರಾಮ್ ಚರಣ್ ಹಾಗೂ ಕಿಯಾರಾ ಅಡ್ವಾಣಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ಗೆ ಆತಂಕ ಇದೆ. ಈ ಸಿನಿಮಾ ಸೆಟ್ಟೇರಿ ಬಹಳ ಸಮಯವೇ ಕಳೆದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Fri, 4 October 24

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್