ಸ್ನೇಹಿತರ ಅಕೌಂಟ್ನಿಂದ ನೆಟ್ಫ್ಲಿಕ್ಸ್ ನೋಡುತ್ತಿರುವವರಿಗೆ ಕಹಿ ಸುದ್ದಿ; ಶೀಘ್ರದಲ್ಲೇ ಬರಲಿದೆ ಹೊಸ ನಿಯಮ
ನೆಟ್ಫ್ಲಿಕ್ಸ್ ನೀಡಿರುವ ಮಾಹಿತಿ ಪ್ರಕಾರ ಅತಿ ಶೀಘ್ರದಲ್ಲೇ ಇನ್ನೊಬ್ಬರ ಅಕೌಂಡ್ ಬಳಸುವ ಪದ್ಧತಿಗೆ ಕಡಿವಾಣ ಬೀಳಲಿದೆ. ದೂರದಲ್ಲೆಲ್ಲೋ ಇರುವ ಸ್ನೇಹಿತರ ನೆಟ್ಫ್ಲಿಕ್ಸ್ ಖಾತೆ ಬಳಸುವುದನ್ನು ತಡೆಯಲು ಈಗಾಗಲೇ ಪರೀಕ್ಷಾರ್ಥ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೆಲವೊಂದಷ್ಟು ನಿಯಮಗಳ ಮೂಲಕ ಅದನ್ನು ಆದಷ್ಟು ಬೇಗ ಜಾರಿಗೊಳಿಸುವ ಚಿಂತನೆಯಲ್ಲಿ ಸಂಸ್ಥೆ ಇದೆ.

ದೇಶದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾದಂತೆ, ಇಂಟರ್ನೆಟ್ ಕ್ರಾಂತಿಯಾದಂತೆ ಮನರಂಜನೆಯ ವ್ಯಾಖ್ಯಾನ ಬದಲಾಗಿದೆ. ಮನರಂಜನೆಗಾಗಿ ಟಿವಿ, ರೇಡಿಯೋ, ಚಿತ್ರಮಂದಿರಗಳತ್ತ ಹೊರಳುತ್ತಿದ್ದ ಕಣ್ಣುಗಳನ್ನು ಅಂಗೈಯಷ್ಟು ಅಗಲದ ಮೊಬೈಲುಗಳು ಹಿಡಿದಿಟ್ಟುಕೊಂಡಿವೆ. ಕಳೆದ ವರ್ಷದ ಕೊರೊನಾ ಲಾಕ್ಡೌನ್ ಅವಧಿಯಲ್ಲಂತೂ ಜನರು ಇನ್ನಷ್ಟು ಪರಿಣಾಮಕಾರಿಯಾಗಿ ಇವುಗಳ ಬಳಕೆ ಆರಂಭಿಸಿದ್ದಾರೆ. ನೆಟ್ಫ್ಲಿಕ್ಸ್, ಅಮೇಜಾನ್ ಪ್ರೈಂ, ಡಿಸ್ನಿ ಹಾಟ್ಸ್ಟಾರ್ನಂತಹ ಅಪ್ಲಿಕೇಶನ್ಗಳಿಗೆ ಒಗ್ಗಿಕೊಂಡಿದ್ದಾರೆ. ಆದರೆ, ಆ ಪೈಕಿ ಅನೇಕ ಜನರು ಹಣ ಕೊಟ್ಟು ಸ್ವಂತ ಖಾತೆಯಲ್ಲಿ ವೀಕ್ಷಿಸುವುದಕ್ಕಿಂತ ಹೆಚ್ಚಾಗಿ ಸ್ನೇಹಿತರ ಖಾತೆಯನ್ನೇ ಬಳಸುತ್ತಾರೆ. ಇದೀಗ ಹೀಗೆ ಇನ್ನೊಬ್ಬರ ಅಕೌಂಟ್ ಮೇಲೆ ಅವಲಂಬಿತರಾದವರಿಗೆ ಶಾಕ್ ಕೊಡಲು ನೆಟ್ಫ್ಲಿಕ್ಸ್ ಸಿದ್ಧವಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.
ನೆಟ್ಫ್ಲಿಕ್ಸ್ ನೀಡಿರುವ ಮಾಹಿತಿ ಪ್ರಕಾರ ಅತಿ ಶೀಘ್ರದಲ್ಲೇ ಇನ್ನೊಬ್ಬರ ಅಕೌಂಟ್ ಬಳಸುವ ಪದ್ಧತಿಗೆ ಕಡಿವಾಣ ಬೀಳಲಿದೆ. ದೂರದಲ್ಲೆಲ್ಲೋ ಇರುವ ಸ್ನೇಹಿತರ ನೆಟ್ಫ್ಲಿಕ್ಸ್ ಖಾತೆ ಬಳಸುವುದನ್ನು ತಡೆಯಲು ಈಗಾಗಲೇ ಪರೀಕ್ಷಾರ್ಥ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೆಲವೊಂದಷ್ಟು ನಿಯಮಗಳ ಮೂಲಕ ಅದನ್ನು ಆದಷ್ಟು ಬೇಗ ಜಾರಿಗೊಳಿಸುವ ಚಿಂತನೆಯಲ್ಲಿ ಸಂಸ್ಥೆ ಇದೆ. ಆದರೆ, ಇಲ್ಲಿಯ ತನಕ ಈ ನಿಯಮವನ್ನು ನೆಟ್ಫ್ಲಿಕ್ಸ್ ನಿರ್ದಿಷ್ಟವಾಗಿ ಹೇಗೆ ರೂಪಿಸಲಿದೆ. ಅದಕ್ಕಾಗಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ನೆಟ್ಫ್ಲಿಕ್ಸ್ ಸಂಸ್ಥೆಯ ಲೆಕ್ಕಾಚಾರದ ಪ್ರಕಾರ ಅಮೆರಿಕಾ ದೇಶವೊಂದರಲ್ಲೇ ಸುಮಾರು ಶೇ.40ರಷ್ಟು ಜನರು ತಮ್ಮದಲ್ಲದ ನೆಟ್ಫ್ಲಿಕ್ಸ್ ಖಾತೆಯನ್ನು ಬಳಸಿ ಮನರಂಜನೆ ಪಡೆಯುತ್ತಿದ್ದಾರೆ. ಅಂತೆಯೇ ನೆಟ್ಫ್ಲಿಕ್ಸ್ ಖಾತೆ ಹೊಂದಿರುವವರ ಪೈಕಿ ಶೇ.72 ಮಂದಿ ತಮ್ಮ ಖಾತೆಯ ಪಾಸ್ವರ್ಡ್ ಮತ್ತು ಲಾಗಿನ್ ಐಡಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಯಾವುದೇ ಅಭ್ಯಂತರ ತೋರಿಲ್ಲ. ಹೀಗಾಗಿ ಜನರ ಇಂತಹ ಮನಸ್ಥಿತಿ ಸಂಸ್ಥೆಗೆ ಕೊಂಚ ಮಟ್ಟಿಗೆ ಹೊಡೆತವನ್ನೇ ನೀಡುತ್ತಿದ್ದು, ಅದನ್ನು ತಪ್ಪಿಸಿಕೊಳ್ಳಲು ನೆಟ್ಫ್ಲಿಕ್ಸ್ ಹೆಣಗಾಡುತ್ತಿದೆ ಎನ್ನಲಾಗುತ್ತಿದೆ.
ನೆಟ್ಫ್ಲಿಕ್ಸ್ ಪರಿಚಯಿಸುತ್ತಿದೆ ಹೊಸ ಪ್ಲ್ಯಾನ್ ನೆಟ್ಫ್ಲಿಕ್ಸ್ನಿಂದ ಮೊಬೈಲ್+ ಪ್ಲಾನ್ ಅನ್ನು ರೂ. 299ಕ್ಕೆ ಪರೀಕ್ಷೆ ನಡೆಸುತ್ತಿದೆ. ಕಿರು ತೆರೆಯ ಮೇಲೆ ಕಂಟೆಂಟ್ ನೋಡಬಯಸುವ ಗ್ರಾಹಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಹೊಸ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಮೂಲಕ ಬಳಕೆದಾರರು ನೆಟ್ಫ್ಲಿಕ್ಸ್ ಸಿನಿಮಾಗಳು ಮತ್ತು ಶೋಗಳನ್ನು ಸ್ಮಾರ್ಟ್ಫೋನ್ನಲ್ಲಿ ಮಾತ್ರ ನೋಡಲು ಅವಕಾಶ ನೀಡುವುದು ಮಾತ್ರ ಅಲ್ಲ. ಜತೆಗೆ ಟ್ಯಾಬ್ಲೆಟ್, ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ಗಳಲ್ಲೂ ವೀಕ್ಷಿಸಬಹುದು. ವರದಿಯ ಪ್ರಕಾರ, ಕೆಲವೇ ಗ್ರಾಹಕರೊಂದಿಗೆ ಈ ಮೊಬೈಲ್ ಯೋಜನೆಯನ್ನು ಪರೀಕ್ಷಾರ್ಥವಾಗಿ ಬಳಸುತ್ತದೆ. ಸದ್ಯಕ್ಕೆ ನೆಟ್ಫ್ಲಿಕ್ಸ್ನಿಂದ ರೂ. 199ರ ಮೊಬೈಲ್ ಪ್ಲಾನ್ ಇದೆ. ಅದು ಮೊಬೈಲ್ ಸಾಧನಗಳಿಗೆ ಮಾತ್ರ ಕಂಟೆಂಟ್ ಒದಗಿಸುತ್ತದೆ. ಹೊಸ ಮೊಬೈಲ್+ ರೂ. 299ರ ಪ್ಲಾನ್ ಮೂಲಕವಾಗಿ ಬಳಕೆದಾರರು ಹೆಚ್ಚು ಕಂಟೆಂಟ್ ಲೈಬ್ರರಿಯನ್ನು ನೋಡಬಹುದು ಎಂದು ತಿಳಿಸಿದೆ. ಹೊಸ ಪ್ಲಾನ್ನಲ್ಲಿ ಎಚ್ಡಿ ರೆಸಲ್ಯೂಷನ್ (720p) ಕಂಟೆಂಟ್ ಒದಗಿಸಲಾಗುತ್ತದೆ. 199ರ ಪ್ಲಾನ್ ಎಸ್ಡಿ ರೆಸಲ್ಯೂಷನ್ನಲ್ಲಿ ಇರುತ್ತವೆ. ಹೊಸ ಮೊಬೈಲ್+ ಪ್ಲಾನ್ ರೂ. 299ರ ಮೌಲ್ಯದ್ದು ಮ್ಯಾಕ್, ಪಿ.ಸಿ.ಗಳು ಹಾಗೂ ಕ್ರೋಮೋಬುಕ್ಗಳನ್ನು ಸಪೋರ್ಟ್ ಮಾಡುತ್ತದೆ.
ಇದನ್ನೂ ಓದಿ: Netflix Mobile+ 299 Plan: ನೆಟ್ಫ್ಲಿಕ್ಸ್ನಿಂದ ಮೊಬೈಲ್+ ಪ್ಲಾನ್ ರೂ. 299ಕ್ಕೆ: ಏನಿದು ಪ್ಲಾನ್, ಯಾರಿಗೆ? ಆನ್ಲೈನ್ ಕ್ಲಾಸ್ ತಂದ ಅವಾಂತರ: ವಿದ್ಯಾರ್ಥಿಗಳ ಆರೋಗ್ಯಕ್ಕೆ ಮಾರಕವಾಗ್ತಿದ್ಯಾ ಆನ್ಲೈನ್ ಪಾಠ?