AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ವಿಡಿಯೋ ಲೀಕ್, ದೂರು ಕೊಟ್ಟ ‘ಕಿರಾತಕ’ ನಟಿ

ಯಶ್ ಜೊತೆಗೆ ‘ಕಿರಾತಕ’ ಸಿನಿಮಾದಲ್ಲಿ ನಟಿಸಿದ್ದ ಒವಿಯಾರದ್ದು ಎನ್ನಲಾದ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ನಟಿ ಒವಿಯಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಖಾಸಗಿ ವಿಡಿಯೋ ಲೀಕ್, ದೂರು ಕೊಟ್ಟ ‘ಕಿರಾತಕ’ ನಟಿ
ಮಂಜುನಾಥ ಸಿ.
|

Updated on:Oct 24, 2024 | 12:45 PM

Share

ಯಶ್ ನಟಿಸಿದ್ದ ಸೂಪರ್ ಹಿಟ್ ‘ಕಿರಾತಕ’ ಸಿನಿಮಾದ ನಾಯಕಿ ಒವಿಯಾ ಕಳೆದ ಕೆಲ ದಿನಗಳಿಂದಲೂ ಸಖತ್ ಸುದ್ದಿಯಲ್ಲಿದ್ದಾರೆ. ಒವಿಯಾರದ್ದು ಎನ್ನಲಾದ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ಅದಾಗಿದ್ದು, ವಿಡಿಯೋದಲ್ಲಿರುವ ಯುವತಿ ನಟಿ ಒವಿಯಾ ಎನ್ನಲಾಗುತ್ತಿದೆ. ಒವಿಯಾ ಬಲಗೈ ಭುಜದ ಮೇಲಿರುವ ಟ್ಯಾಟೂ, ವಿಡಿಯೋದಲ್ಲಿರುವ ಯುವತಿಯ ಭುಜದ ಮೇಲೆಯೂ ಇದ್ದು, ನೆಟ್ಟಿಗರು, ‘ಇದು ಒವಿಯಾರದ್ದೇ ವಿಡಿಯೋ’ ಎನ್ನುತ್ತಿದ್ದಾರೆ. ಇದೀಗ ನಟಿ ಒವಿಯಾ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಕೇರಳದ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ನಟಿ ಒವಿಯಾ ಈ ಬಗ್ಗೆ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಒವಿಯಾರ ಮ್ಯಾನೇಜರ್, ‘ಒವಿಯಾರ ಘನತೆಗೆ ಧಕ್ಕೆ ತರುವ ಪ್ರಯತ್ನ ಇದಾಗಿದ್ದು, ಉದ್ದೇಶಪೂರ್ವಕವಾಗಿ ನಕಲಿ ವಿಡಿಯೋ ಅನ್ನು ಒವಿಯಾ ಹೆಸರಿನಲ್ಲಿ ವೈರಲ್ ಮಾಡಲಾಗಿದೆ’ ಎಂದಿದ್ದಾರೆ. ಈ ಬಗ್ಗೆ ತ್ರಿಶೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಡಿಯೋ ವೈರಲ್ ಆದ ಬಳಿಕ ಇನ್​ಸ್ಟಾಗ್ರಾಂನಲ್ಲಿ ತಮ್ಮ ಸೆಲ್ಫಿಯೊಂದನ್ನು ಒವಿಯಾ ಹಂಚಿಕೊಂಡಿದ್ದರು. ‘ಪೂರ್ತಿ ವಿಡಿಯೋ ಹಾಕಿ’, ‘ವಿಡಿಯೋ ಬ್ಲರ್ ಇದೆ’ ಎಂದೆಲ್ಲ ಆ ಚಿತ್ರಕ್ಕೆ ಕಮೆಂಟ್ ಕೆಲವರು ಕಮೆಂಟ್ ಮಾಡಿದ್ದರು. ಕಮೆಂಟ್ ಮಾಡಿದ ಕೆಲವರಿಗೆ ತಮಾಷೆಯಾಗಿ ಉತ್ತರಿಸಿದ್ದ ಒವಿಯಾ, ‘ಮುಂದಿನ ಸಾರಿ ಹಾಕುತ್ತೇನೆ’, ‘ವಿಡಿಯೋ ಎಂಜಾಯ್ ಮಾಡಿ’ ಎಂದೆಲ್ಲ ಹೇಳಿದ್ದರು. ಒವಿಯಾರ ಈ ಕಮೆಂಟ್​ಗಳು ಅದು ಒವಿಯಾರದ್ದೇ ವಿಡಿಯೋ ಇರಬಹುದಾ ಎಂಬ ಅನುಮಾನವನ್ನು ಇನ್ನಷ್ಟು ಬಲಗೊಳ್ಳುವಂತೆ ಮಾಡಿತ್ತು.

ಇದನ್ನೂ ಓದಿ:‘ಈ ಸಿನಿಮಾದಿಂದ ಎಷ್ಟು ಹಣ ಬರುತ್ತದೆ ಎಂದು ರಾಧಿಕಾ ಎಂದಿಗೂ ಕೇಳಿಲ್ಲ’; ಯಶ್

ಕೆಲವು ವರದಿಗಳ ಪ್ರಕಾರ, ಒವಿಯಾರ ಮಾಜಿ ಬಾಯ್​ಫ್ರೆಂಡ್ ಒಬ್ಬಾತ ಅವರ ಖಾಸಗಿ ವಿಡಿಯೋವನ್ನು ಲೀಕ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಇದೀಗ ಒವಿಯಾ, ತಮ್ಮ ಮಾಜಿ ಬಾಯ್​ಫ್ರೆಂಡ್ ವಿರುದ್ಧವೇ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷ ತೆಲುಗಿನ ಯೂಟ್ಯೂಬರ್ ಒಬ್ಬಾತ, ಒವಿಯಾರ ಬಗ್ಗೆ ಕೀಳಾಗಿ ಕಮೆಂಟ್ ಮಾಡಿದ್ದ, ಹೈದರಾಬಾದ್​ನ ಹಲವು ಹೋಟೆಲ್​ ರೂಂಗಳಲ್ಲಿ ಒವಿಯಾ ತಂಗಿದ್ದಾಳೆ ಎಂದಿದ್ದ. ಆ ಯೂಟ್ಯೂಬರ್ ವಿರುದ್ಧ ಒವಿಯಾ ಆಗ ಕಿಡಿ ಕಾರಿದ್ದರು. ದೂರು ಸಹ ದಾಖಲಿಸಿದ್ದರು. ಆ ಯೂಟ್ಯೂಬರ್ ನಟಿ ಸಮಂತಾ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದ.

ಮಲಯಾಳಂ ಮೂಲದ ಒವಿಯಾ, ಕನ್ನಡ, ಮಲಯಾಳಂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಯಶ್ ನಟನೆಯ ‘ಕಿರಾತಕ’ ಹಾಗೂ ‘ಮಿಸ್ಟರ್ ಮೊಮ್ಮಗ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಬಿಗ್​ಬಾಸ್​ನಲ್ಲಿಯೂ ಭಾಗವಹಿಸಿದ್ದ ಒವಿಯಾ, ಈಗ ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Thu, 24 October 24