ಪಾಕಿಸ್ತಾನದ ಈ ಬ್ಯೂಟಿಫುಲ್ ಹೀರೋಯಿನ್ಗಳ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತದ ಸಿನಿಮಾಗಳು ಪಾಕಿಸ್ತಾನದಲ್ಲಿ ಬ್ಯಾನ್ ಆಗಿವೆ. ಅಲ್ಲಿ ನಮ್ಮ ಸಿನಿಮಾಗಳು ರಿಲೀಸ್ ಆಗಲ್ಲ. ಪಾಕಿಸ್ತಾನದಲ್ಲೂ ಚಿತ್ರರಂಗ ಇದೆ. ಅಲ್ಲಿಯೂ ಸಾಕಷ್ಟು ಬ್ಯೂಟಿಫುಲ್ ಹೀರೋಯಿನ್ಗಳಿದ್ದಾರೆ. ಅವರು ಪಾಕ್ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿದ್ದಾರೆ.
ಭಾರತದ ಚಿತ್ರರಂಗದ ಬಗ್ಗೆ ಇಡೀ ವಿಶ್ವಕ್ಕೆ ತಿಳಿದಿದೆ. ಭಾರತದ ಸ್ಟಾರ್ ಕಲಾವಿದರಾದ ಯಶ್, ಮಹೇಶ್ ಬಾಬು, ಅಲ್ಲು ಅರ್ಜುನ್ (AlluArjun), ರಜನಿಕಾಂತ್, ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯಾ ರೈ ಸೇರಿ ಅನೇಕರ ಬಗ್ಗೆ ವಿಶ್ವದ ಜನರಿಗೆ ತಿಳಿದಿದೆ. ಭಾರತದ ಸಿನಿಮಾಗಳು ಪಾಕಿಸ್ತಾನದಲ್ಲಿ ಬ್ಯಾನ್ ಆಗಿವೆ. ಅಲ್ಲಿ ನಮ್ಮ ಸಿನಿಮಾಗಳು ರಿಲೀಸ್ ಆಗಲ್ಲ. ಪಾಕಿಸ್ತಾನದಲ್ಲೂ ಚಿತ್ರರಂಗ ಇದೆ. ಅಲ್ಲಿಯೂ ಸಾಕಷ್ಟು ಬ್ಯೂಟಿಫುಲ್ ಹೀರೋಯಿನ್ಗಳಿದ್ದಾರೆ. ಅವರು ಪಾಕ್ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಹನಿಯಾ ಆಮಿರ್
ಹಾನಿಯಾ ಆಮಿರ್ ಅವರು ಬ್ಯೂಟಿಫುಲ್ ನಾಯಕಿಯರಲ್ಲಿ ಒಬ್ಬರು. ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಮಿಡಿ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು. ಅವರು ಸಖತ್ ಸ್ಟ್ರಗಲ್ ಮಾಡಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಅವರಿಗೆ ಈಗ 26 ವರ್ಷ ವಯಸ್ಸು.
ಆಯೇಜ್ ಖಾನ್
ಆಯೇಜ್ ಖಾನ್ ಅವರು ಬಣ್ಣದ ಬದುಕು ಆರಂಭಿಸಿದ್ದರು 2009ರಲ್ಲಿ. ‘ತುಮ್ ಜೋ ಮಿಲೆ’ ಧಾರಾವಾಹಿ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. ನ್ಯಾಚುರಲ್ ಬ್ಯೂಟಿ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಈವರೆಗೆ 35ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರಿಗೆ ಈಗ 32 ವರ್ಷ ವಯಸ್ಸು.
ಸಬಾ ಕಮರ್
‘ಹಿಂದಿ ಮೀಡಿಯಮ್’ ಸಿನಿಮಾದಲ್ಲಿ ಇರ್ಫಾನ್ ಖಾನ್ ಜೊತೆ ಸಬಾ ಕಮರ್ ಅವರು ನಟಿಸಿದ್ದರು. ಅವರು ಸಾಕಷ್ಟು ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದಾರೆ. ಕೆಲವು ಪಾಕಿಸ್ತಾನಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.
ಕಿಂಜಾ ಹಷ್ಮಿ
ಕಿಂಜಾ ಹಷ್ಮಿ ಅವರು 2014ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಪಾಕಿಸ್ತಾನ ಬಣ್ಣದ ಇಂಡಸ್ಟ್ರಿಯಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಗ್ಲಾಮರಸ್ ನಾಯಕಿಯರಲ್ಲಿ ಕಿಂಜಾ ಹಷ್ಮಿ ಕೂಡ ಒಬ್ಬರು. ಮಿನಾಲ್ ಖಾನ್
ಮಿನಾಲ್ ಖಾನ್ ಅವರು ಈ ಮೊದಲು ಸಾಕಷ್ಟು ದಪ್ಪ ಇದ್ದರು. ಆದರೆ, ವರ್ಷ ಕಳೆದಂತೆ ಅವರು ದೇಹದ ತೂಕ ಇಳಿಸಿಕೊಳ್ಳುತ್ತಾ ಬಂದರು. ಅವರು ನ್ಯಾಚುರಲ್ ಬ್ಯೂಟಿ ಎನಿಸಿಕೊಂಡಿದ್ದಾರೆ.
ಉರ್ವಾ ಹೊಕೇನ್
ಉರ್ವಾ ಹೊಕೇನ್ ಅವರು ಹಲವು ವರ್ಷಗಳಿಂದ ಬಣ್ಣದ ಲೋಕದ ಜೊತೆಗೆ ನಂಟು ಹೊಂದಿದ್ದಾರೆ. ಅವರು ವಿಜೆ ಆಗಿದ್ದರು. ಆ ಬಳಿಕ ನಟನೆಗೆ ಕಾಲಿಟ್ಟರು. ಸಾಕಷ್ಟು ಶ್ರಮ ಹಾಕಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಸನಮ್ ಚೌಧರಿ
ಸನಮ್ ಚೌಧರಿ ಅವರು 2013ರಲ್ಲಿ ಇಂಡಸ್ಟ್ರಿಗೆ ಕಾಲಿಟ್ಟರು. ಇವರು ಎಲ್ಲ ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಅವರು ಅತ್ಯುತ್ತಮ ನಟಿ ಎನಿಸಿಕೊಂಡಿದ್ದಾರೆ. ಸ್ಟೈಲ್ ಹಾಗೂ ಲುಕ್ಸ್ ಮೂಲಕ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ನಿಯಮ ಮೀರಿ ಹೊರ ಬರ್ತೀನಿ ಎಂದರೆ ದುಬಾರಿ ದಂಡ? ಇಲ್ಲಿದೆ ವಿವರ
ಸನಮ್ ಜಂಗ್
‘ದಿಲ್ ಎ ಮಜ್ತಾರ್’ ಮೂಲಕ ರಾತ್ರೋರಾತ್ರಿ ಫೇಮಸ್ ಆದರು ಸನಮ್ ಜಂಗ್. ಅವರು ತೂಕ ಇಳಿಸಿಕೊಂಡು ಎಲ್ಲರಿಗೂ ಮಾದರಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:58 am, Mon, 13 November 23