ರಜನಿಕಾಂತ್ ಬೆಸ್ಟ್ ಫ್ರೆಂಡ್ ಬಗ್ಗೆ ನಿಮಗೆಷ್ಟು ಗೊತ್ತು? ಚಿತ್ರರಂಗಕ್ಕೆ ಬರಲು ಅವರೇ ಕಾರಣರು
ರಜನಿಕಾಂತ್ ಅವರ 50 ವರ್ಷಗಳ ಚಲನಚಿತ್ರ ಪ್ರಯಾಣದಲ್ಲಿ ರಾಜ್ ಬಹದ್ದೂರ್ ಅವರ ಪ್ರಮುಖ ಪಾತ್ರ ವಹಿಸಿದ್ದಾರೆ. ಬೆಂಗಳೂರಿನ ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಅವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ್ದು ಮತ್ತು ಅವರ ವೃತ್ತಿಜೀವನದಲ್ಲಿ ನಿರಂತರ ಬೆಂಬಲ ನೀಡಿದ್ದು ರಾಜ್. ಅವರ ಸ್ನೇಹ ಮತ್ತು ಬೆಂಬಲದ ಕಥೆ ಇಲ್ಲಿ ವಿವರಿಸಲಾಗಿದೆ.

ರಜನಿಕಾಂತ್ (Rajinikanth) ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳು ಕಳೆದಿವೆ. ಅವರು ತಮಿಳು ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕೇವಲ ತಮಿಳು ಮಾತ್ರವಲ್ಲದೆ, ರಜನಿಕಾಂತ್ ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. ರಜನಿಕಾಂತ್ ಅವರ ವೃತ್ತಿ ಜೀವನಕ್ಕೆ ಯಾವಾಗಲೂ ಬೆಂಬಲವಾಗಿ ನಿಂತಿದ್ದು ರಾಜ ಬಹದ್ದೂರ್. ಅವರು ಬೆಂಗಳೂರಿನವರು. ರಜನಿ ಎಲ್ಲೇ ಹೋದರೂ ರಾಜ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಆ ಬಗ್ಗೆ ಇಲ್ಲಿದೆ ವಿವರ.
ಕೆ. ಬಾಲಚಂದರ್ ಅವರ ‘ಅಪೂರ್ವ ರಾಗಂಗಳ್’ ರಜನಿಕಾಂತ್ ನಟಿಸಿದ ಮೊದಲ ಸಿನಿಮಾ. ಈ ಸಿನಿಮಾ 1975ರಲ್ಲಿ ರಿಲೀಸ್ ಆಯಿತು. ಇಲ್ಲಿಗೆ ಬರೋದಕ್ಕೂ ಮೊದಲು ಬೆಂಗಳೂರು ಟ್ರಾನ್ಸ್ಪೋರ್ಟ್ ಸರ್ವಿಸ್ನಲ್ಲಿ ರಜನಿಕಾಂತ್ ಅವರು ಕಂಡಕ್ಟರ್ ಆಗಿದ್ದರು. ಶಿವಾಜಿ ರಾವ್ ಅನ್ನೋದು ಅವರ ಹೆಸರಾಗಿತ್ತು. ಆ ಬಳಿಕ ರಜನಿಕಾಂತ್ ಎಂದು ಅವರ ಹೆಸರನ್ನು ಬದಲಾಯಿಸಲಾಯಿತು.
‘ರಜನಿಕಾಂತ್ ನಾಟಕವೊಂದರಲ್ಲಿ ನಟಿಸುತ್ತಿದ್ದಾಗ ಅವರನ್ನು ತಮಿಳು ನಿರ್ದೇಶಕ ಬಾಲಚಂದರ್ ಗಮನಿಸಿದರು. ರಜನಿ ನಟನೆಯಿಂದ ಪ್ರಭಾವಿತರಾದ ಅವರು ತಮಿಳು ಕಲಿಯಲು ಸಲಹೆ ನೀಡಿದರು. ರಜನಿ ಆಗ ಕನ್ನಡದಲ್ಲಿ ಮಾತ್ರ ನಿರರ್ಗಳವಾಗಿ ಮಾತನಾಡುತ್ತಿದ್ದರು. ರಜನಿ ನನ್ನ ಬಳಿ ಬಂದು ಇಡೀ ಘಟನೆಯನ್ನು ವಿವರಿಸಿದರು. ಇಂತಹ ನಿರ್ದೇಶಕರು ನಿನಗೆ ತಮಿಳು ಕಲಿಯಲು ಕೇಳಿದ್ದಾರೆ ಎಂದರೆ ಮುಂದೆ ಏನೋ ವಿಶೇಷ ಇರಬೇಕು ಎಂದೆ. ನನಗೆ ತಮಿಳು ಗೊತ್ತಿದ್ದರಿಂದ, ಆ ಕ್ಷಣದಿಂದ ಅವರು ನನ್ನೊಂದಿಗೆ ತಮಿಳಿನಲ್ಲಿ ಮಾತ್ರ ಮಾತನಾಡಬೇಕು ಎಂಬ ಷರತ್ತಿನ ಮೇಲೆ ನಾನು ಅವನಿಗೆ ಕಲಿಸಲು ಮುಂದಾದೆ. ಎರಡು ತಿಂಗಳೊಳಗೆ, ರಜನಿ ಭಾಷೆಯನ್ನು ಕಲಿತು ನಿರರ್ಗಳವಾಗಿ ಮಾತನಾಡಲು ಪ್ರಾರಂಭಿಸಿದ’ ಎಂದಿದ್ದರು ರಾಜ್.
ಇದನ್ನೂ ಓದಿ: ರಜನಿಕಾಂತ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್; ‘ಕೂಲಿ’ ಮೊದಲ ದಿನದ ಗಳಿಕೆ ಎಷ್ಟು?
‘ಅಪೂರ್ವ ರಾಗಂಗಳ್’ ಚಿತ್ರದ ಪಾತ್ರಗಳ ಆಯ್ಕೆಯ ಸಮಯದಲ್ಲಿ ಶಿವಾಜಿ ಬಾಲಚಂದರ್ ಅವರನ್ನು ರಜನಿ ಭೇಟಿ ಆದರು. ತಮಿಳು ತಿಳಿಯದ ವ್ಯಕ್ತಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಬಾಲಚಂದರ್ ಹೇಳಿದರು. ಆಗ ರಜನಿ ನಿರರ್ಗಳವಾಗಿ ತಮಿಳಿನಲ್ಲಿ ಮಾತನಾಡಿದರು. ಪರಿಶುದ್ಧ ತಮಿಳು ಭಾಷೆಯಲ್ಲಿ ಅವರ ಹಿಡಿತದಿಂದ ಬೆರಗಾದ ಬಾಲಚಂದರ್, ಅಪೂರ್ವ ರಾಗಂಗಳ್ ಚಿತ್ರದಲ್ಲಿ ಪಾಂಡಿಯನ್ ಪಾತ್ರವನ್ನು ಅವರಿಗೆ ನೀಡಿದರು. ಆ ಬಳಿಕ ರಜನಿ ತಿರುಗಿ ನೋಡೇ ಇಲ್ಲ. ರಾಜ್ ಅವರು ಪ್ರತಿ ಹಂತದಲ್ಲಿ ರಜನಿ ಜೊತೆ ಇದ್ದರು. ರಜನಿ ಹಾಗೂ ರಾಜ್ ಒಂದೇ ಬಸ್ನಲ್ಲಿ ಸೇವೆ ಸಲ್ಲಿಸುತ್ತಾ ಇದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







