AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿಗೆ ರಿಮೇಕ್​ ಆಗಲಿದೆ ‘ಬೇಬಿ’ ಸಿನಿಮಾ; ನಟಿಸಲು ಮುಂದೆ ಬಂದ ಸ್ಟಾರ್​ ಕಿಡ್​ಗಳು

ಹೊಸ ನಟ-ನಟಿಯರ ಕಾರಣದಿಂದ ‘ಬೇಬಿ’ ಸಿನಿಮಾಗೆ ಒಂದು ಕಳೆ ಬಂದಿತ್ತು. ಅದೇ ರೀತಿ ಈ ಚಿತ್ರದ ಹಿಂದಿ ರಿಮೇಕ್​ನಲ್ಲೂ ಹೊಸ ತಲೆಮಾರಿನ ಕಲಾವಿದರು ನಟಿಸಲು ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ. ‘ಬೇಬಿ’ ಚಿತ್ರದ ನಿರ್ಮಾಪಕರೇ ಮಾಧ್ಯಮವೊಂದಕ್ಕೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹಿಂದಿಗೆ ರಿಮೇಕ್​ ಆಗಲಿದೆ ‘ಬೇಬಿ’ ಸಿನಿಮಾ; ನಟಿಸಲು ಮುಂದೆ ಬಂದ ಸ್ಟಾರ್​ ಕಿಡ್​ಗಳು
ಆನಂದ್​ ದೇವರಕೊಂಡ, ವೈಷ್ಣವಿ ಚೈತನ್ಯ
ಮದನ್​ ಕುಮಾರ್​
|

Updated on:Dec 19, 2023 | 7:06 PM

Share

ಟಾಲಿವುಡ್​ನಲ್ಲಿ ಈ ವರ್ಷ ಬ್ಲಾಕ್​ ಬಸ್ಟರ್​ ಹಿಟ್​ ಆದ ಸಿನಿಮಾಗಳ ಸಾಲಿನಲ್ಲಿ ‘ಬೇಬಿ’ (Baby Movie) ಕೂಡ ಇದೆ. ಈ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಅವರ ಸಹೋದರ ಆನಂದ್​ ದೇವರಕೊಂಡ (Anand Deverakonda) ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ವೈಷ್ಣವಿ ಚೈತನ್ಯ ನಟಿಸಿದ್ದಾರೆ. ಕಡಿಮೆ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ 96 ಕೋಟಿ ರೂಪಾಯಿ! ಈಗ ‘ಬೇಬಿ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್​ (Baby Movie Remake) ಮಾಡಲು ಮಾತುಕತೆ ನಡೆಯುತ್ತಿದೆ. ಆ ಬಗ್ಗೆ ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

‘ಬೇಬಿ’ ಸಿನಿಮಾಗೆ ಸಾಯಿ ರಾಜೇಶ್​ ನೀಲಂ ನಿರ್ದೇಶನ ಮಾಡಿದ್ದು, ಶ್ರೀನಿವಾಸ ಕುಮಾರ್​ ನಾಯ್ಡು ಅಲಿಯಾಸ್​ ಎಸ್​ಕೆಎನ್​ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಹಿಂದಿಗೆ ರಿಮೇಕ್​ ಆಗುತ್ತಿದೆ ಎಂಬ ಮಾಹಿತಿಯನ್ನು ನಿರ್ಮಾಪಕರು ಖಚಿತಪಡಿಸಿರುವುದಾಗಿ ವರದಿ ಆಗಿದೆ. ಹಿಂದಿಯಲ್ಲಿ ದೊಡ್ಡ ನಿರ್ಮಾಪಕರು ರಿಮೇಕ್​ ಹಕ್ಕುಗಳನ್ನು ಖರೀದಿಸಲು ಮುಂದಾಗಿದ್ದಾರೆ. ಈ ಹಿಂದೆ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಆ ನಿರ್ಮಾಪಕರಿಗೆ ಇದೆಯಂತೆ.

ಇದನ್ನೂ ಓದಿ: Baby Movie: ತಮ್ಮನ ‘ಬೇಬಿ’ ಸಿನಿಮಾ ನೋಡಿಕೊಂಡು ಬಂದು ಅಚ್ಚರಿಯ ಹೇಳಿಕೆ ನೀಡಿದ ವಿಜಯ್​ ದೇವರಕೊಂಡ

ಹೊಸ ನಟ-ನಟಿಯರ ಕಾರಣದಿಂದ ‘ಬೇಬಿ’ ಸಿನಿಮಾಗೆ ಒಂದು ಕಳೆ ಬಂದಿತ್ತು. ಅದೇ ರೀತಿ ಹಿಂದಿ ರಿಮೇಕ್​ನಲ್ಲೂ ಹೊಸ ತಲೆಮಾರಿನ ಕಲಾವಿದರು ನಟಿಸಲು ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ರಿಮೇಕ್​ ಮಾಡಲು ಮುಂದೆ ಬಂದಿರುವ ನಿರ್ಮಾಪಕರು ಯಾರು? ನಟಿಸಲು ಆಸಕ್ತಿ ತೋರಿಸಿರುವ ಸ್ಟಾರ್​ ಕಿಡ್​ ಯಾರು ಎಂಬುದನ್ನು ‘ಬೇಬಿ’ ನಿರ್ಮಾಪಕರು ಸದ್ಯಕ್ಕೆ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಬೇಬಿ ಸಿನಿಮಾದ ನಿರ್ದೇಶಕನಿಗೆ ದುಬಾರಿ ಕಾರು ಉಡುಗೊರೆ

ಕೇವಲ 15 ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಬೇಬಿ’ ಸಿನಿಮಾ ಮೂಡಿಬಂತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಬೆಳೆ ತೆಗೆಯಿತು. ಆನಂದ್ ದೇವರಕೊಂಡ ಅವರು ಈ ಸಿನಿಮಾದ ಗೆಲುವಿನಿಂದ ಸ್ಟಾರ್​ ನಟನಾಗಿ ಹೊರಹೊಮ್ಮಿದರು. ನಟಿ ವೈಷ್ಣವಿ ಚೈತನ್ಯ ಅವರ ಡಿಮ್ಯಾಂಡ್​ ಕೂಡ ಹೆಚ್ಚಾಯಿತು. ಇದರಲ್ಲಿ ಒಂದು ತ್ರಿಕೋನ ಪ್ರೇಮಕಥೆಯನ್ನು ಹೇಳಲಾಯಿತು. ಯುವ ಪ್ರೇಕ್ಷಕರು ಈ ಕಹಾನಿಯನ್ನು ಸಖತ್​ ಇಷ್ಟಪಟ್ಟರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:59 pm, Tue, 19 December 23

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ