AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ ಮೇಲೆ ವೈಯಕ್ತಿಕ ದಾಳಿ ಮಾಡಿದವರಿಗೆ ಕಾಲವೇ ಕೊಟ್ಟಿತು ತಕ್ಕ ಉತ್ತರ

ನಟಿ ಸಮಂತಾ ರುತ್ ಪ್ರಭು ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದು ಅವರ ವೈಯಕ್ತಿಕ ಜೀವನ, ವಿಚ್ಛೇದನ ಹಾಗೂ ಮಕ್ಕಳ ಬಗ್ಗೆ ಹರಡಿದ್ದ ‘ಅವರಿಗೆ ಮಗು ಬೇಡವಿತ್ತು, ಅಫೇರ್‌ಗಳಿದ್ದವು, ಗರ್ಭಪಾತ ಮಾಡಿಸಿಕೊಂಡಿದ್ದರು’ ಎಂಬಂತಹ ಸುಳ್ಳು ವದಂತಿಗಳಿಗೆ ಕಾಲವೇ ನೀಡಿದ ತಕ್ಕ ಉತ್ತರವಾಗಿದೆ. ಅಂದು ತೀವ್ರ ದ್ವೇಷಕ್ಕೆ ಗುರಿಯಾಗಿದ್ದ ಸಮಂತಾ ನೀಡಿದ್ದ ಖಡಕ್ ಉತ್ತರ ಈಗ ಸತ್ಯವಾಗಿದೆ.

ಸಮಂತಾ ಮೇಲೆ ವೈಯಕ್ತಿಕ ದಾಳಿ ಮಾಡಿದವರಿಗೆ ಕಾಲವೇ ಕೊಟ್ಟಿತು ತಕ್ಕ ಉತ್ತರ
ಸಮಂತಾ
ರಾಜೇಶ್ ದುಗ್ಗುಮನೆ
|

Updated on:Jun 25, 2026 | 8:33 AM

Share

ಮುಖ್ಯಾಂಶಗಳು

  • ಸಮಂತಾ ಪ್ರೆಗ್ನೆನ್ಸಿ: ಹಳೆಯ ವದಂತಿಗಳಿಗೆ ಹೊಸ ತಿರುವು
  • ವಿಚ್ಛೇದನ ನಂತರದ ಅಪಪ್ರಚಾರಕ್ಕೆ ಸಿಕ್ತು ಉತ್ತರ
  • ಸಮಂತಾ ಬಗೆಗಿನ ವದಂತಿಗೆ ಕಾಲವೇ ಉತ್ತರ ನೀಡಿತು

ನಟಿ ಸಮಂತಾ ರುತ್ ಪ್ರಭು ಅವರ (Samantha) ವೈಯಕ್ತಿಕ ಜೀವನದ ಬಗ್ಗೆ ಹರಡಿದ್ದ ವದಂತಿಗಳಿಗೆ ಕೊನೆಗೂ ಕಾಲವೇ ಉತ್ತರ ನೀಡಿದೆ. ಎರಡನೇ ಮದುವೆಯಾದ ಕೇವಲ ಒಂದೇ ವರ್ಷದಲ್ಲಿ ಸಮಂತಾ ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಸಂತಸದ ಸುದ್ದಿ ಹೊರಬೀಳುತ್ತಿದ್ದಂತೆ, ಹಿಂದೆ ಅವರ ಮೇಲೆ ನಡೆದಿದ್ದ ವೈಯಕ್ತಿಕ ದಾಳಿಗಳು ಮತ್ತು ಹರಡಿದ್ದ ಅಪಪ್ರಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ.

ನಟ ನಾಗ ಚೈತನ್ಯ ಅವರಿಂದ ಸಮಂತಾ ವಿಚ್ಛೇದನ ಪಡೆದ ಸಂದರ್ಭದಲ್ಲಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಮಟ್ಟದ ದ್ವೇಷವನ್ನು ಹಬ್ಬಿಸಲಾಗಿತ್ತು. ಸಮಂತಾಗೆ ಮಗು ಬೇಡವಾಗಿತ್ತು, ಅವರಿಗೆ ಅಫೇರ್‌ಗಳಿದ್ದವು ಮತ್ತು ಅವರು ಗರ್ಭಪಾತ ಮಾಡಿಸಿಕೊಂಡಿದ್ದರು ಎಂದೆಲ್ಲಾ ಅತ್ಯಂತ ಕೀಳು ಮಟ್ಟದ ವದಂತಿಗಳನ್ನು ಹರಡಲಾಗಿತ್ತು. ನಟಿಯ ತೇಜೋವಧೆ ಮಾಡಲು ನೆಟ್ಟಿಗರು ಸತತ ಪ್ರಯತ್ನ ನಡೆಸಿದ್ದರು.

ಅಂದು ಸಮಂತಾ ನೀಡಿದ್ದ ಖಡಕ್ ಉತ್ತರ

ಈ ವದಂತಿಗಳ ವಿರುದ್ಧ ಅಂದು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದರು. ‘ವಿಚ್ಛೇದನ ಎನ್ನುವುದೇ ಅತ್ಯಂತ ನೋವಿನ ಪ್ರಕ್ರಿಯೆ. ಅದರಿಂದ ಹೊರಬರಲು ನನಗೆ ಸಮಯ ಬೇಕಿದೆ. ಆದರೆ ನನ್ನ ಮೇಲೆ ವೈಯಕ್ತಿಕವಾಗಿ ನಿರಂತರ ದಾಳಿ ಮಾಡಲಾಗುತ್ತಿದೆ. ನನಗೆ ಅಫೇರ್‌ಗಳಿದ್ದವು, ನಾನು ಅವಕಾಶವಾದಿ, ನನಗೆ ಮಕ್ಕಳಾಗುವುದು ಇಷ್ಟವಿರಲಿಲ್ಲ ಮತ್ತು ನಾನು ಅಬಾರ್ಷನ್ ಮಾಡಿಸಿಕೊಂಡಿದ್ದೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ’ ಎಂದು ಬೇಸರ ಹೊರಹಾಕಿದ್ದರು. ಅಲ್ಲದೆ ಇಂತಹ ಯಾವುದೇ ಸುಳ್ಳು ಮಾತುಗಳಿಗೆ ತಾವು ಧೃತಿಗೆಡುವುದಿಲ್ಲ ಎಂದು ನೇರವಾಗಿ ಹೇಳಿದ್ದರು.

ಇದನ್ನೂ ಓದಿ: ಪ್ರೆಗ್ನೆಂಟ್ ಆಗಿರುವುದು ನಿಜ; ಎಲ್ಲರ ಎದುರು ಗುಡ್ ನ್ಯೂಸ್ ನೀಡಿದ ಸಮಂತಾ

ಕಾಲವೇ ಕೊಟ್ಟಿತು ತಕ್ಕ ಉತ್ತರ

ಅಂದು ಸಮಂತಾ ವಿರುದ್ಧ ಹಬ್ಬಿಸಲಾಗಿದ್ದ ದ್ವೇಷ ಮತ್ತು ‘ಅವರಿಗೆ ಮಕ್ಕಳಾಗುವುದು ಇಷ್ಟವಿರಲಿಲ್ಲ’ ಎಂಬ ಸುಳ್ಳು ವದಂತಿಗಳಿಗೆ ಇದೀಗ ಅವರ ಪ್ರೆಗ್ನೆನ್ಸಿ ಸುದ್ದಿಯೇ ಸಾಕ್ಷಿಯಾಗಿದೆ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂಬ ಮಾತು ಸಮಂತಾ ಜೀವನದಲ್ಲಿ ನಿಜವಾಗಿದೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಸಮಂತಾ ಪ್ರೆಗ್ನೆಂಟ್ ಎಂಬ ವಿಷಯ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಹಳೆಯ ವದಂತಿಗಳನ್ನು ನೆನಪಿಸಿಕೊಳ್ಳುತ್ತಿದ್ದು, ಅಂದು ನಟಿಯ ವಿರುದ್ಧ ಸುಳ್ಳು ಸುದ್ದಿ ಹರಡಿದವರಿಗೆ ಈಗಲಾದರೂ ನಾಚಿಕೆಯಾಗಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:31 am, Thu, 25 June 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ