ಶಿವರಾತ್ರಿಯಂದೇ ಕುರುಕ್ಷೇತ್ರ ಶತದಿನೋತ್ಸವ, ಅಭಿನಂದನ್​ ಪಾತ್ರದಲ್ಲಿ ಮಿಂಚಲಿದ್ದಾರೆ ದರ್ಶನ್

ಮುನಿರತ್ನ ಕುರುಕ್ಷೇತ್ರ… ಕನ್ನಡದ ಹೈ ಬಜೆಟ್ ಪೌರಾಣಿಕ ಚಿತ್ರ. 5 ಭಾಷೆಗಳಲ್ಲಿ ರಿಲೀಸ್ ಆಗಿ ಕನ್ನಡ ನೆಲದ ಕೀರ್ತಿಪತಾಕೆಯನ್ನ ಹೊರ ರಾಜ್ಯಕ್ಕೂ ಚೆಲ್ಲಿದ ಚಿತ್ರ. ಚಾಲೆಂಜಿಂಗ್ ಸ್ಟಾರ್ ದರ್ಶನ್​ ಧುರ್ಯೋದನನಾಗಿ ಅಬ್ಬರಿಸಿದ್ದ ಚಿತ್ರ, ಸೆಂಚುರಿ ಬಾರಿಸಿದೆ. ಇದೇ ಸಂಭ್ರಮದಲ್ಲಿ ನಿರ್ಮಾಪಕ ಮುನಿರತ್ನ ಶಿವರಾತ್ರಿಯಂದೇ ಶತದಿನೋತ್ಸವ ಸಂಭ್ರಮ ಹಮ್ಮಿಕೊಂಡು ಮತ್ತಷ್ಟು ಮೆರಗು ನೀಡಿತ್ತು. ಕುರುಕ್ಷೇತ್ರ ಸಿನಿಮಾ ನೂರು ದಿನ ಪೂರೈಸಿದ ಖುಷಿಯಲ್ಲಿದ್ದ ನಿರ್ಮಾಪಕ ಮುನಿರತ್ನ, ಯಶವಂತಪುರದ ಜೆಪಿ ಪಾರ್ಕ್​ನಲ್ಲಿ ಅದ್ಧೂರಿ ಕಾರ್ಯಕ್ರಮವನ್ನ ಆಯೋಜಿಸಿದ್ರು. ಕುರುಕ್ಷೇತ್ರ ಯಶಸ್ಸಿನ ಸಂಭ್ರಮವನ್ನ ಹಂಚಿಕೊಳ್ಳೋಕೆ […]

ಶಿವರಾತ್ರಿಯಂದೇ ಕುರುಕ್ಷೇತ್ರ ಶತದಿನೋತ್ಸವ, ಅಭಿನಂದನ್​ ಪಾತ್ರದಲ್ಲಿ ಮಿಂಚಲಿದ್ದಾರೆ ದರ್ಶನ್
Follow us
ಸಾಧು ಶ್ರೀನಾಥ್​
|

Updated on:Feb 22, 2020 | 2:06 PM

ಮುನಿರತ್ನ ಕುರುಕ್ಷೇತ್ರ… ಕನ್ನಡದ ಹೈ ಬಜೆಟ್ ಪೌರಾಣಿಕ ಚಿತ್ರ. 5 ಭಾಷೆಗಳಲ್ಲಿ ರಿಲೀಸ್ ಆಗಿ ಕನ್ನಡ ನೆಲದ ಕೀರ್ತಿಪತಾಕೆಯನ್ನ ಹೊರ ರಾಜ್ಯಕ್ಕೂ ಚೆಲ್ಲಿದ ಚಿತ್ರ. ಚಾಲೆಂಜಿಂಗ್ ಸ್ಟಾರ್ ದರ್ಶನ್​ ಧುರ್ಯೋದನನಾಗಿ ಅಬ್ಬರಿಸಿದ್ದ ಚಿತ್ರ, ಸೆಂಚುರಿ ಬಾರಿಸಿದೆ. ಇದೇ ಸಂಭ್ರಮದಲ್ಲಿ ನಿರ್ಮಾಪಕ ಮುನಿರತ್ನ ಶಿವರಾತ್ರಿಯಂದೇ ಶತದಿನೋತ್ಸವ ಸಂಭ್ರಮ ಹಮ್ಮಿಕೊಂಡು ಮತ್ತಷ್ಟು ಮೆರಗು ನೀಡಿತ್ತು.

ಕುರುಕ್ಷೇತ್ರ ಸಿನಿಮಾ ನೂರು ದಿನ ಪೂರೈಸಿದ ಖುಷಿಯಲ್ಲಿದ್ದ ನಿರ್ಮಾಪಕ ಮುನಿರತ್ನ, ಯಶವಂತಪುರದ ಜೆಪಿ ಪಾರ್ಕ್​ನಲ್ಲಿ ಅದ್ಧೂರಿ ಕಾರ್ಯಕ್ರಮವನ್ನ ಆಯೋಜಿಸಿದ್ರು. ಕುರುಕ್ಷೇತ್ರ ಯಶಸ್ಸಿನ ಸಂಭ್ರಮವನ್ನ ಹಂಚಿಕೊಳ್ಳೋಕೆ ಸಿನಿಮಾ ಗಣ್ಯರು, ರಾಜಕೀಯ ಗಣ್ಯರೂ ಭಾಗಿಯಾಗಿದ್ರು. ಸಿಎಂ ಬಿ.ಎಸ್​. ಯಡಿಯೂರಪ್ಪ, ಭೈರತಿ ಬಸವರಾಜ್ ಸೇರಿ ಚಾಲೆಂಜಿಂಗ್ ಸ್ಟಾರ್ ದರ್ಶನ್. ನಿರ್ದೇಶಕ ನಾಗಣ್ಣ, ಸಂಗೀತ ನಿರ್ದೇಶಕ ಹರಿಕೃಷ್ಣ, ನಟ ರಮೇಶ್ ಭಟ್. ರವಿಶಂಕರ್, ಶ್ರೀನಿವಾಸ್ ಮೂರ್ತಿ ಇನ್ನು ಅನೇಕರು ಹಾಜರಾಗಿದ್ರು.

ಇನ್ನು ಕುರುಕ್ಷೇತ್ರ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ಮುನಿರತ್ನ ಅವ್ರ ಕೆಲಸವನ್ನ ಮೆಚ್ಚಿಕೊಂಡ್ರು. ಮುನಿರತ್ನ ರಾಜಕೀಯವೇ ಆಗಲಿ, ಸಿನಿಮಾವೇ ಆಗ್ಲಿ, ಎರಡಲ್ಲೂ ಶ್ರದ್ಧೆ ಇಟ್ಟು ಕೆಲಸ ಮಾಡುತ್ತಾರೆ. ಅದಕ್ಕೆ ಅವ್ರಿಗೆ ಎರಡರಲ್ಲೂ ತಕ್ಕ ಫಲ ಸಿಗುತ್ತೆ ಎಂದ್ರು.

‘ಅಭಿನಂದನ್’ ಪಾತ್ರದಲ್ಲಿ ಮಿಂಚಲಿದ್ದಾರೆ ದರ್ಶನ್! ಕುರುಕ್ಷೇತ್ರದ ಸಂಭ್ರಮದಲ್ಲೇ ಮತ್ತೊಂದು ವಿಭಿನ್ನ ಚಿತ್ರ ಸೆಟ್ಟೇರಲಿದೆ ಅನ್ನೋದನ್ನ ನಿರ್ಮಾಪಕ ಮುನಿರತ್ನ ಬಹಿರಂಗ ಪಡಿಸಿದ್ರು. ಪಾಕ್​ ನೆಲದಲ್ಲಿ ಇಳಿದರೂ, ದೇಶದ ಭದ್ರತೆಯ ಗುಟ್ಟು ಬಿಟ್ಟುಕೊಡದೇ, ಪರಾಕ್ರಮ ಮೆರೆದು ಬಂದಿದ್ದ ವಿಂಗ್ ಕಮಾಂಡರ್ ಅಭಿನಂದನ್ ಪಾತ್ರದಲ್ಲಿ ದಚ್ಚು ಕಾಣಿಸಿಕೊಳ್ಳಲಿದ್ದಾರೆ. ಆ ಚಿತ್ರವನ್ನ ಈ ವರ್ಷವೇ ಮಾಡೋದಾಗಿ ಮುನಿರತ್ನ ಹೇಳಿದ್ರು.

ದರ್ಶನ್​ಗೆ ನಟ ಅಭಿಷೇಕ್ ಅಂಬರೀಶ್ ಕೂಡ ಸಾಥ್ ಕೊಟ್ರು. ದರ್ಶನ್ ಸಿನಿಮಾದಲ್ಲಿ‌ ಅಂಬರೀಶ್ ‌ಹಾಗೂ ಸುಮಲತಾ ಇಬ್ಬರು ಅಭಿನಯ ‌ಮಾಡಿದ್ದಾರೆ. ಆದ್ರೆ, ನನ್ನನ್ನ ಮಾತ್ರ ಯಾಕೆ‌ ಬಿಟ್ಟಿದ್ದೀರಾ? ದರ್ಶನ್ ಮತ್ತು ನನ್ನನ್ನೂ ಸೇರಿಸಿ ಒಂದು ಸಿನಿಮಾ ಮಾಡಿ ಅಂತಾ ಮನವಿ ಮಾಡಿದ್ರು.

ಒಟ್ಟಾರೆ ಐತಿಹಾಸಿಕ ಸಿನಿಮಾ‌ ನೀಡಿರೋ ದರ್ಶನ್ ಹಾಗೂ ಮುನಿರತ್ನ ಜೋಡಿ ಈಗ‌ ಮತ್ತೊಂದು ವಿಭಿನ್ನ ಚಿತ್ರಕ್ಕೆ ಸಜ್ಜಾಗಿದೆ. ಅಭಿನಂದನ್ ಪಾತ್ರದಲ್ಲಿ ದರ್ಶನ್ ಅದ್ಯಾವ ರೀತಿ ಮೋಡಿ ಮಾಡಲಿದ್ದಾರೋ ನೋಡಬೇಕಿದೆ.

Published On - 2:05 pm, Sat, 22 February 20