ದರ್ಶನ್ ಹೆಲ್ತ್ ರಿಪೋರ್ಟ್ನಲ್ಲೇನಿದೆ? ಅವರಿಗೆ ಬೆನ್ನು ನೋವು ಇರೋದು ನಿಜವೇ?
ದರ್ಶನ್ ಜಾಮೀನು ಪಡೆಯಲು ಈ ರೀತಿ ಬೆನ್ನು ನೋವಿನ ಕಾರಣ ಹೇಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಸಂಬಂಧಿಸಿ ಬಳ್ಳಾರಿ ವಿಮ್ಸ್ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದರು. ಈಗ ಈ ವರದಿಯನ್ನು ಅವರು ಜೈಲಧಿಕಾರಿಗಳಿಗೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರಿಗೆ ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿಲ್ಲ. ಇದು ಅವರನ್ನು ಮತ್ತಷ್ಟು ಕಂಗೆಡಿಸಿದೆ. ದರ್ಶನ್ ಅವರು ಜಾಮೀನಿಗಾಗಿ ಸಾಕಷ್ಟು ಚಡಪಡಿಸಿದ್ದರು. ಈಗ ಅವರು ಮತ್ತಷ್ಟು ದಿನ ಜೈಲಿನಲ್ಲೇ ಕಳೆಯಬೇಕಿದೆ. ಈ ಮಧ್ಯೆ ದರ್ಶನ್ಗೆ ಬೆನ್ನುನೋವು ಕಾಣಿಸಿಕೊಂಡಿದೆ. ಅವರಿಗೆ ಸರಿಯಾಗಿ ಕೂರಲೂ ಸಾಧ್ಯವಾಗುತ್ತಿಲ್ಲ. ಅವರಿಗೆ ನಿಜಕ್ಕೂ ಬೆನ್ನು ನೋವು ಇದೆಯೇ? ಹೌದು ಎನ್ನುತ್ತಿದೆ ವೈದ್ಯರ ವರದಿ.
ದರ್ಶನ್ ಜಾಮೀನು ಪಡೆಯಲು ಈ ರೀತಿ ಬೆನ್ನು ನೋವಿನ ಕಾರಣ ಹೇಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಸಂಬಂಧಿಸಿ ಬಳ್ಳಾರಿ ವಿಮ್ಸ್ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದರು. ಈಗ ಈ ವರದಿಯನ್ನು ಅವರು ಜೈಲಧಿಕಾರಿಗಳಿಗೆ ನೀಡಿದ್ದಾರೆ. ಬೆನ್ನುನೋವು ನಿಯಂತ್ರಣಕ್ಕೆ ಫಿಜಿಯೋ ಥೆರಪಿಯ ಸಲಹೆ ನೀಡಲಾಗಿದೆ. ಎರಡು ಸ್ಕ್ಯಾನಿಂಗ್‌ಗೆ ಸಲಹೆ ನೀಡಲಾಗಿದೆ. ಕೆಲವು ಮಾತ್ರೆ, ಮೂಲಾಮುಗಳನ್ನು ಬರೆದುಕೊಡಲಾಗಿದೆ.
ನರಗಳಿಂದಲೇ ದರ್ಶನ್ಗೆ ಬೆನ್ನುನೋವು ಬಂದಿದೆ ಎಂದು ನರರೋಗ ತಜ್ಞ ಡಾ. ವಿಶ್ವನಾಥ್ ವರದಿಯಲ್ಲಿ ಹೇಳಿದ್ದಾರೆ. ಇಂದಿನಿಂದಲೇ ಜೈಲಿನಲ್ಲಿ ದರ್ಶನ್ಗೆ ಫಿಜಿಯೋ ಥೆರಪಿ ನೀಡಲು ಜೈಲಾಧಿಕಾರಿಗಳು ನಿರ್ಧರಿಸಿದ್ದಾರೆ. ವಿಮ್ಸ್ ವೈದ್ಯರಿಂದ ಫಿಜಿಯೋ ಥೆರಪಿ ನಡೆಯಲಿದೆ. ಮೆಡಿಕಲ್ ಬೆಡ್, ಚೇರ್ ನೀಡುವಂತೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಮೆಡಿಕಲ್ ಬೆಡ್, ಚೇರ್, ವೈದ್ಯಕೀಯ ಸಲಕರಣೆ ಹಾಗೂ ಕೆಲವು ಮಾತ್ರೆಗಳ ನೀಡುವಂತೆ ಕೋರಲಾಗಿದೆ. ಜೈಲು ವಿಭಾಗದ ಹಿರಿಯ ಅಧಿಕಾರಿಗಳ ಅನುಮತಿ ಸಿಕ್ಕ ಬಳಿಕ ಇದನ್ನು ದರ್ಶನ್ಗೆ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಜಾಮೀನು ಅರ್ಜಿ ವಜಾ: ಈಗ ದರ್ಶನ್ ಮುಂದಿದೆ ಮೂರು ಪ್ರಮುಖ ಆಯ್ಕೆಗಳು
ದರ್ಶನ್ ಅವರು ಈಗ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಬೆನ್ನು ನೋವಿನ ಕಾರಣ ನೀಡಿ ಅವರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.