34 ವರ್ಷದ ಹಿಂದಿನ ಚೊಚ್ಚಲ ಸಿನಿಮಾ ಸಂಭ್ರಮದಲ್ಲಿ ಸೈನಿಕರನ್ನ ನೆನೆದ ಶಿವಣ್ಣ
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಇಂದು ಸಂಭ್ರಮದಲ್ಲಿದ್ದಾರೆ. ಯಾಕಂದ್ರೆ ಶಿವಣ್ಣ ನಟಿಸಿದ ಚೊಚ್ಚಲ ಚಿತ್ರ ಆನಂದ್ ಬಿಡುಗಡೆಯಾಗಿ ಇಂದಿಗೆ 34 ವರ್ಷ ಆಗಿದೆ. ಬಾಲ ನಟನಾಗಿ ಶ್ರೀ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ನಟಿಸಿದ್ರೂ, ಶಿವಣ್ಣ ನಾಯಕನಾಗಿ ತೆರೆಮೇಲೆ ಕಂಡ ಮೊದಲ ಸಿನಿಮಾ ಆನಂದ್. ಹೀಗಾಗಿ ಚಿತ್ರರಂಗದ ಗಣ್ಯರೆಲ್ಲರೂ ಶಿವಣ್ಣ ಹಾಗೂ ಸುಧಾರಾಣಿ ಜೋಡಿಗೆ ಶುಭಾಶಯಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ. ಅಣ್ಣಾವ್ರ ಮೊದಲ ಪುತ್ರ ನಾಯಕನಾಗಿ ತೆರೆಮೇಲೆ ಬರ್ತಾರೆ ಅಂದಾಗ ಅಂದು ಸಹಜವಾಗೇ ಕುತೂಹಲವಿತ್ತು. ಸಿನಿಮಾ ಹೇಗಿರ್ಬಹುದು? ಆ್ಯಕ್ಷನ್ ಸಿನಿಮಾನಾ? […]
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಇಂದು ಸಂಭ್ರಮದಲ್ಲಿದ್ದಾರೆ. ಯಾಕಂದ್ರೆ ಶಿವಣ್ಣ ನಟಿಸಿದ ಚೊಚ್ಚಲ ಚಿತ್ರ ಆನಂದ್ ಬಿಡುಗಡೆಯಾಗಿ ಇಂದಿಗೆ 34 ವರ್ಷ ಆಗಿದೆ. ಬಾಲ ನಟನಾಗಿ ಶ್ರೀ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ನಟಿಸಿದ್ರೂ, ಶಿವಣ್ಣ ನಾಯಕನಾಗಿ ತೆರೆಮೇಲೆ ಕಂಡ ಮೊದಲ ಸಿನಿಮಾ ಆನಂದ್. ಹೀಗಾಗಿ ಚಿತ್ರರಂಗದ ಗಣ್ಯರೆಲ್ಲರೂ ಶಿವಣ್ಣ ಹಾಗೂ ಸುಧಾರಾಣಿ ಜೋಡಿಗೆ ಶುಭಾಶಯಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ.
ಅಣ್ಣಾವ್ರ ಮೊದಲ ಪುತ್ರ ನಾಯಕನಾಗಿ ತೆರೆಮೇಲೆ ಬರ್ತಾರೆ ಅಂದಾಗ ಅಂದು ಸಹಜವಾಗೇ ಕುತೂಹಲವಿತ್ತು. ಸಿನಿಮಾ ಹೇಗಿರ್ಬಹುದು? ಆ್ಯಕ್ಷನ್ ಸಿನಿಮಾನಾ? ಲವ್ವಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳನ್ನ ಹೊತ್ತು ಚಿತ್ರಮಂದಿರಕ್ಕೆ ನುಗ್ಗಿದ್ದ ಜನರು ಟುವ್ವಿ ಟುವ್ವಿ ಅಂತ ಹಾಡುತ್ತಾ ಚಿತ್ರಮಂದಿರದಿಂದ ಹೊರಕ್ಕೆ ಬಂದಿದ್ದರು.
ಶಿವರಾಜ್ಕುಮಾರ್ ಬಣ್ಣ ಹಚ್ಚಿ ಆನಂದ್ ಅವತಾರವೆತ್ತಿ ಬಂದಾಗ ಕನ್ನಡ ಚಿತ್ರರಂಗ ಮನಸಾರೆ ಕೈ ಬೀಸಿ ಕರೆಯಿತು. ಇಲ್ಲಿಂದ ಶಿವಣ್ಣ ನಟಿಸಿದ ಮುಂದಿನ ಎರಡೂ ಸಿನಿಮಾ ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಕೂಡ ಬ್ಲಾಕ್ಬಸ್ಟರ್ ಹಿಟ್ ಆಯ್ತು. ಹೀಗಾಗಿ ಅಭಿಮಾನಿಗಳು ಪ್ರೀತಿಯಿಂದ ಹ್ಯಾಟ್ರಿಕ್ ಹೀರೋ ಅಂತ ಬಿರುದು ನೀಡಿದ್ರು. ಶಿವಣ್ಣ ಹಾಗೂ ಸುಧಾರಾಣಿ ಜೋಡಿ ಕನ್ನಡ ಚಿತ್ರರಂಗದ ಬೆಸ್ಟ್ ಪೇರ್ ಆಯ್ತು.
ಶಿವಣ್ಣ ಮೊದಲ ಸಿನಿಮಾ ಆನಂದ್ 34 ವರ್ಷಗಳನ್ನ ಪೂರೈಸಿದ ಸಂಭ್ರಮದಲ್ಲಿದ್ದಾರೆ. ಆದ್ರೆ ಇನ್ನೊಂದ್ಕಡೆ ಚೀನಾ ಸೈನಿಕರೊಂದಿಗೆ ಹೋರಾಡಿ ಹುತಾತ್ಮರಾದ ಸೈನಿಕರಿಗೆ ಮನ ಮಿಡಿದಿದ್ದಾರೆ.
ನಾನು ಅನ್ನೋ ಸ್ವಾರ್ಥ ಇಲ್ಲದೆ ನಾವು ಅನ್ನೋ ನಿಸ್ವಾರ್ಥ ಜೀವಗಳೇ ನಮ್ಮ ಸೈನಿಕರು. ಈ ದುರಂತ ಘಟನೆಯ ಅನ್ಯಾಯಕ್ಕೆ ಇನ್ನು ಮುಂದೆ ಯೋಧರ ಕುಟುಂಬಗಳಿಗೆ ಪ್ರತಿಯೊಬ್ಬ ಭಾರತೀಯ ನಾಗರಿಕರು ಜವಾಬ್ದಾರರು. ಹೀಗಂತ ಸೆಂಚುರಿ ಸ್ಟಾರ್ ಸೈನಿಕರ ಕುಟುಂಬಗಳಿಗೆ ಸಾಂತ್ವಾನ ಹೇಳಿ, ಚೀನಾದ ಮೋಸಕ್ಕೆ ಧಿಕ್ಕಾರವೆಂದಿದ್ದಾರೆ -ಮುರಳಿ
ನಾನು ಅನ್ನೋ ಸ್ವಾರ್ಥ ಇಲ್ಲದೆ ನಾವು ಅನ್ನೋ ನಿಸ್ವಾರ್ಥ ಜೀವಗಳೇ ನಮ್ಮ ಸೈನಿಕರು.. ಈ ದುರಂತ ಘಟನೆಯ ಅನ್ಯಾಯಕ್ಕೆ ಇನ್ನು ಮುಂದೆ ಯೋಧರ ಕುಟುಂಬಗಳಿಗೆ ಪ್ರತಿಯೊಬ್ಬ ಭಾರತೀಯ ನಾಗರೀಕರು ಜವಾಬ್ದಾರರು.. #GalwanValley #BraveHearts
— DrShivaRajkumar (@NimmaShivanna) June 19, 2020