ಮತ್ತಿಗೋಡು ಶಿಬಿರದಲ್ಲಿ ಆನೆ ಮೇಲೆ ಸವಾರಿ: ನಟ ಧನ್ವೀರ್ ವಿರುದ್ಧ FIR ದಾಖಲು

ಮೈಸೂರು: ಆನೆ ಮೇಲೆ ಕೂತು ದರ್ಬಾರ್‌ ತೋರಿದ ಬಜಾರ್ ಖ್ಯಾತಿಯ ಹೀರೋ ನಟ ಧನ್ವೀರ್ ವಿರುದ್ಧ FIR ದಾಖಲಾಗಿದೆ. ಪ್ರಕರಣದಲ್ಲಿ ನಟ ಧನ್ವೀರ್ A1 ಆರೋಪಿಯಾಗಿದ್ದಾರೆ. FIRನಲ್ಲಿ ಧನ್ವೀರ್‌ ಮೇಲೆ ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪವನ್ನು ಉಲ್ಲೇಖಿಸಲಾಗಿದೆ. ಜೊತೆಗೆ, ವನ್ಯಜೀವಿ ಸಂರಕ್ಷಣ ಕಾಯ್ದೆ 1972 ಅಡಿಯಲ್ಲಿ ಅರಣ್ಯ ಮೊಕದ್ದಮ್ಮೆ ದಾಖಲಾಗಿದೆ. ನಟ ಆನೆ ಮೇಲೆ ಕುಳಿತಿದ್ದಕ್ಕೆ A1 ಆರೋಪಿಯಾಗಿ ಉಲ್ಲೇಖಿಸಲಾಗಿದೆ. ಇನ್ನು ಧನ್ವೀರ್ ಜೊತೆ 5 ಮಂದಿ ಸ್ನೇಹಿತರ ಮೇಲೂ FIR ದಾಖಲಾಗಿದೆ. ಧನ್ವೀರ್‌, ವಿಶ್ವಾಸ್‌ ಐಯ್ಯರ್‌ […]

ಮತ್ತಿಗೋಡು ಶಿಬಿರದಲ್ಲಿ ಆನೆ ಮೇಲೆ ಸವಾರಿ: ನಟ ಧನ್ವೀರ್ ವಿರುದ್ಧ FIR ದಾಖಲು
Follow us
KUSHAL V
|

Updated on:Oct 24, 2020 | 3:56 PM

ಮೈಸೂರು: ಆನೆ ಮೇಲೆ ಕೂತು ದರ್ಬಾರ್‌ ತೋರಿದ ಬಜಾರ್ ಖ್ಯಾತಿಯ ಹೀರೋ ನಟ ಧನ್ವೀರ್ ವಿರುದ್ಧ FIR ದಾಖಲಾಗಿದೆ. ಪ್ರಕರಣದಲ್ಲಿ ನಟ ಧನ್ವೀರ್ A1 ಆರೋಪಿಯಾಗಿದ್ದಾರೆ.

FIRನಲ್ಲಿ ಧನ್ವೀರ್‌ ಮೇಲೆ ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪವನ್ನು ಉಲ್ಲೇಖಿಸಲಾಗಿದೆ. ಜೊತೆಗೆ, ವನ್ಯಜೀವಿ ಸಂರಕ್ಷಣ ಕಾಯ್ದೆ 1972 ಅಡಿಯಲ್ಲಿ ಅರಣ್ಯ ಮೊಕದ್ದಮ್ಮೆ ದಾಖಲಾಗಿದೆ. ನಟ ಆನೆ ಮೇಲೆ ಕುಳಿತಿದ್ದಕ್ಕೆ A1 ಆರೋಪಿಯಾಗಿ ಉಲ್ಲೇಖಿಸಲಾಗಿದೆ. ಇನ್ನು ಧನ್ವೀರ್ ಜೊತೆ 5 ಮಂದಿ ಸ್ನೇಹಿತರ ಮೇಲೂ FIR ದಾಖಲಾಗಿದೆ. ಧನ್ವೀರ್‌, ವಿಶ್ವಾಸ್‌ ಐಯ್ಯರ್‌ ಮತ್ತು ದರ್ಶನ್‌ ಬಿನ್‌ ನಂದಕುಮಾರ್ ಮೇಲೆ ಕೇಸ್​ ದಾಖಲಿಸಲಾಗಿದೆ. ಈ ಜೊತೆಗೆ ಹೆಸರು ಪತ್ತೆಯಾಗದ ಇನ್ನು ಮೂವರು ಆರೋಪಿಗಳ ಮೇಲೆ ಕೇಸ್‌ ದಾಖಲಾಗಿದೆ.

ಮತ್ತಿಗೂಡು ಆನೆ ಶಿಬಿರಕ್ಕೆ ಅತಿಕ್ರಮ ಪ್ರವೇಶ, ಅನುಮತಿ ಇಲ್ಲದೆ ಮಹೇಂದ್ರ ಎಂಬ ಸಾಕಾನೆ ಮೇಲೆ ಹತ್ತಿ ಕುಳಿತಿದ್ದಕ್ಕೆ, ಅನುಮತಿ ಇಲ್ಲದೆ ಮಹೇಂದ್ರ ಆನೆ ಜೊತೆ ಇತರೆ ಆನೆಗಳನ್ನ ಮುಟ್ಟಿದ್ದಕ್ಕೆ, ಚಿತ್ರರಂಗದ ತಾರೆಯರು ಎಂದು ಹೇಳಿಕೊಂಡು ಆನೆಚೌಕೂರು ವನ್ಯಜೀವಿ ವಲಯಕ್ಕೆ ಅತಿಕ್ರಮ ಪ್ರವೇಶ, ಅನುಮತಿ ಇಲ್ಲದೆ ವನ್ಯಜೀವಿಗಳ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಕ್ಕೆ ಸೇರಿದಂತೆ 5 ಪ್ರಮುಖ ಆರೋಪಗಳ ಅಡಿಯಲ್ಲಿ ಕೇಸ್​ ದಾಖಲಿಸಲಾಗಿದೆ.

ಜೊತೆಗೆ, ಘಟನೆಯಲ್ಲಿ ಧನ್ವೀರ್​ಗೆ ಸಹಕರಿಸಿದ ಎಲ್ಲ ಅರಣ್ಯ ಇಲಾಖೆ ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಆನೆ ಮಾವುತ, ಕಾವಾಡಿ ಹಾಗೂ ಉಸ್ತುವಾರಿ ಸಿಬ್ಬಂದಿಗೆ ಶೋಕಾಸ್​ ನೋಟಿಸ್‌ ಜಾರಿಯಾಗಿದೆ ಎಂದು ನಾಗರಹೊಳೆ ಸಿಫ್‌ ಮಹೇಶ್‌ ಕುಮಾರ್‌ರಿಂದ ಮಾಹಿತಿ ನೀಡಿದ್ದಾರೆ. ಧನ್ವೀರ್​ ಸಫಾರಿ ಇದೇ ಮೊದಲಲ್ಲ.. ಈ ಹಿಂದೆಯೂ ಆನೆ ಮೇಲೆ ಕೂತು ಪೋಸ್ ಕೊಟ್ಟಿದ್ದ ನಟ ಸಿನಿಮಾ ಹೀರೋಗಾಗಿ ಬಂಡೀಪುರದಲ್ಲಿ ರಾತ್ರಿ ಸಫಾರಿ! ಕಾನೂನುಬಾಹಿರ ವಿಡಿಯೋ ವೈರಲ್

Published On - 3:50 pm, Sat, 24 October 20

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ