AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸುದೀಪ್ ಹೆಲಿಕಾಪ್ಟರ್​​ನಲ್ಲಿ ಬಂದಿದ್ದು ನೋಡಿ ಉಗ್ರಪ್ಪಗೆ ಹೊಟ್ಟೆ ಕಿಚ್ಚಾಗಿದೆ’; ರಾಜುಗೌಡ

ಮದಕರಿ ನಾಯಕ ಜಯಂತೋತ್ಸವದಲ್ಲಿ ನಟ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿಯ ಮಾಜಿ ಸಚಿವ ರಾಜುಗೌಡ, ಸುದೀಪ್ ವಿರುದ್ಧ ಏಕವಚನದಲ್ಲಿ ಮಾತನಾಡಿ ಅವಮಾನಿಸಿರುವುದು ಖಂಡನೀಯ ಎಂದಿದ್ದಾರೆ. ಯಾವುದೇ ಗಾಡ್‌ಫಾದರ್ ಇಲ್ಲದೆ ಕಷ್ಟಪಟ್ಟು ಬೆಳೆದಿರುವ ಮೇರು ನಟ ಸುದೀಪ್‌ಗೆ ಉಗ್ರಪ್ಪ ಕೂಡಲೇ ಬೇಷರತ್ ಕ್ಷಮೆ ಕೋರಬೇಕು ಎಂದು ಕೊಡೇಕಲ್‌ನಲ್ಲಿ ಆಗ್ರಹಿಸಿದ್ದಾರೆ. 

‘ಸುದೀಪ್ ಹೆಲಿಕಾಪ್ಟರ್​​ನಲ್ಲಿ ಬಂದಿದ್ದು ನೋಡಿ ಉಗ್ರಪ್ಪಗೆ ಹೊಟ್ಟೆ ಕಿಚ್ಚಾಗಿದೆ’; ರಾಜುಗೌಡ
ರಾಜು, ಸುದೀಪ್, ಉಗ್ರಪ್ಪ
ಅಮೀನ್​ ಸಾಬ್​
| Edited By: |

Updated on: Oct 14, 2026 | 1:16 PM

Share

ಚಿತ್ರದುರ್ಗದಲ್ಲಿ ನಡೆದ ರಾಜ ವೀರಮದಕರಿ ನಾಯಕ ಜಯಂತೋತ್ಸವದ ವೇಳೆ ನಟ ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳ ಕುರಿತು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಪಟ್ಟಣದಲ್ಲಿ ಈ ಕುರಿತು ಮಾತನಾಡಿದ ಬಿಜೆಪಿಯ ಮಾಜಿ ಸಚಿವ ರಾಜುಗೌಡ ಅವರು, ಉಗ್ರಪ್ಪ ಅವರ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ತಾವು ಮತ್ತು ನಟ ಸುದೀಪ್ ಇಲ್ಲದ ಸಂದರ್ಭದಲ್ಲಿ ಉಗ್ರಪ್ಪ ಅವರು ಉಗ್ರಾವತಾರ ತೋರಿಸಿದ್ದಾರೆ ಎಂದು ರಾಜುಗೌಡ ವಾಗ್ದಾಳಿ ನಡೆಸಿದ್ದಾರೆ. ಯಾವುದೇ ಗೂಡ್‌ಫಾದರ್ ಇಲ್ಲದೆ ತಮ್ಮ ಕಠಿಣ ಪರಿಶ್ರಮದಿಂದಲೇ 33 ವರ್ಷಗಳ ಕಾಲ ನಟನೆಯಲ್ಲಿ ಬೆಳೆದು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಮೇರು ನಟ ಸುದೀಪ್ ಅವರಿಗೆ ಉಗ್ರಪ್ಪ ಅವಮಾನ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ ವೀರಮದಕರಿ ನಾಯಕ ಜಯಂತಿಗೆ ಸುದೀಪ್ ಬಂದರೆ ತಪ್ಪೇನು ಎಂದು ಪ್ರಶ್ನಿಸಿದ ಅವರು, ಕಲಾವಿದನಿಗೆ ಯಾವುದೇ ಜಾತಿ ಇರುವುದಿಲ್ಲ ಎಂದರು.

ಸುದೀಪ್ ಅವರ ಹೆಲಿಕಾಪ್ಟರ್ ಬರೋದು ನೋಡಿ ಉಗ್ರಪ್ಪ ಅವರಿಗೆ ಹೊಟ್ಟೆಕಿಚ್ಚಾಗಿದೆ ಎಂದು ಕಿಡಿಕಾರಿದ ರಾಜುಗೌಡ, ರಾಜಕೀಯವಾಗಿ ತಮ್ಮ ಅಥವಾ ಶ್ರೀರಾಮುಲು ಅವರ ಬಗ್ಗೆ ಮಾತನಾಡಲಿ, ಆದರೆ ನಟರ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಹಾಗೂ ಅವಮಾನಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು. ಮೀಸಲಾತಿ ರದ್ದಾದಾಗ ಹೈಕೋರ್ಟ್‌ನಲ್ಲಿ ವಾದ ಮಾಡದ ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ: ‘ನಾಯಕನ ಮಗನಾಗಿದ್ದರೆ ಮೀಸಲಾತಿ ಹೋರಾಟಕ್ಕೆ ಬನ್ನಿ ಮಿಸ್ಟರ್ ಸುದೀಪ್’; ಮಾಜಿ ಸಂಸದ ಉಗ್ರಪ್ಪ ಸವಾಲು

ಮುಂದುವರಿದು ಮಾತನಾಡುತ್ತಾ, ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಈ ರೀತಿ ಅವಮಾನ ಮಾಡಿದರೆ ಮುಂದೆ ಯಾರಾದರೂ ಬರುತ್ತಾರಾ ಎಂದು ಪ್ರಶ್ನಿಸಿದ ಅವರು, ಒಂದು ವೇಳೆ ಅಭಿಮಾನಿಗಳು ಆಕ್ರೋಶಗೊಂಡರೆ ಅದಕ್ಕೆ ಯಾರು ಹೊಣೆ ಎಂದು ಎಚ್ಚರಿಸಿದರು. ಉಗ್ರಪ್ಪ ಅವರು ಎಂಎಲ್‌ಸಿ ಸ್ಥಾನಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ರಾಜುಗೌಡ, ಸಮಾಜ ಹಾಗೂ ರಾಜ್ಯದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುವುದನ್ನು ಬಿಟ್ಟು, ಕೂಡಲೇ ನಟ ಸುದೀಪ್‌ಗೆ ವಿ.ಎಸ್. ಉಗ್ರಪ್ಪ ಅವರು ಬೇಷರತ್ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಅಮೀನ್​ ಸಾಬ್​
ಅಮೀನ್​ ಸಾಬ್​

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More