ರಾಧಿಕಾ ಪಂಡಿತ್ ಹಾಗೂ ಯಶ್ ನಡುವಿನ ವಯಸ್ಸಿನ ಅಂತರ ಎಷ್ಟು?
‘ಕೆಜಿಎಫ್ 2’ ಸಿನಿಮಾ ಗೆಲುವು ಕಂಡಿದೆ. ಈ ಚಿತ್ರದ ಗೆಲುವನ್ನು ಸಂಭ್ರಮಿಸಲು ಯಶ್ ಹಾಗೂ ರಾಧಿಕಾ ಪಂಡಿತ್ ‘ಕೆಜಿಎಫ್ 2’ ತಂಡದ ಜತೆ ಸೇರಿ ವೆಕೇಶನ್ಗೆ ತೆರಳಿದ್ದರು.
ರಾಧಿಕಾ ಪಂಡಿತ್ (Radhika Pandit) ಹಾಗೂ ಯಶ್ (Yash) ಸ್ಯಾಂಡಲ್ವುಡ್ನ ಮಾದರಿ ಕಪಲ್ ಎಂದರೆ ತಪ್ಪಾಗಲಾರದು. ಇಬ್ಬರೂ ಸುಖವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ದಂಪತಿಗೆ ಆಯ್ರಾ (Ayra Yash) ಹಾಗೂ ಯಥರ್ವ್ ಹೆಸರಿನ ಮಕ್ಕಳಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಯಶ್ ಅವರಿಗಿಂತ ರಾಧಿಕಾ ಪಂಡಿತ್ ವಯಸ್ಸಿನಲ್ಲಿ ದೊಡ್ಡವರು. ಈ ವಿಚಾರ ಕೆಲವರಿಗೆ ಗೊತ್ತಿದೆ, ಇನ್ನೂ ಕೆಲವರಿಗೆ ಗೊತ್ತಿಲ್ಲ. ಹಾಗಾದರೆ, ಇವರ ನಡುವಿನ ವಯಸ್ಸಿನ ಅಂತರ ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ರಾಧಿಕಾ ಪಂಡಿತ್ ಹಾಗೂ ಯಶ್ 2004ರಲ್ಲಿ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದರು. ‘ನಂದ ಗೋಕುಲ’ ಧಾರಾವಾಹಿಯಲ್ಲಿ ಇವರು ನಟಿಸಿದರು. ಒಂದೇ ಕ್ಯಾಬ್ನಲ್ಲಿ ಇಬ್ಬರೂ ತೆರಳಿದರೂ ಒಬ್ಬರಿಗೊಬ್ಬರು ಮಾತನಾಡುತ್ತಿರಲಿಲ್ಲ. ಯಶ್ಗೆ ಆ್ಯಟಿಟ್ಯೂಡ್ ಎಂದು ರಾಧಿಕಾ ಭಾವಿಸಿದ್ದರೆ, ರಾಧಿಕಾಗೆ ಆ್ಯಟಿಟ್ಯೂಡ್ ಎಂದು ಯಶ್ ಭಾವಿಸಿದ್ದರು. 2008ರಲ್ಲಿ ತೆರೆಗೆ ಬಂದ ‘ಮೊಗ್ಗಿನ ಮನಸು’ ಸಿನಿಮಾದಲ್ಲಿ ಈ ಜೋಡಿ ತೆರೆಹಂಚಿಕೊಂಡಿತು. ಈ ಸಿನಿಮಾ ಶೂಟಿಂಗ್ ವೇಳೆ ಇಬ್ಬರ ನಡುವೆ ಗೆಳೆತನ ಬೆಳೆಯಿತು. 2012ರಲ್ಲಿ ತೆರೆಗೆ ಬಂದ ‘ಡ್ರಾಮಾ’ ಸಿನಿಮಾದಲ್ಲಿ ಯಶ್ ರಾಧಿಕಾ ಮತ್ತೆ ಒಟ್ಟಾಗಿ ತೆರೆ ಹಂಚಿಕೊಂಡರು. ನಂತರ ಯಶ್ ರಾಧಿಕಾಗೆ ಪ್ರಪೋಸ್ ಮಾಡಿದರು.
2016ರ ಆಗಸ್ಟ್ 12ರಂದು ರಾಧಿಕಾ ಪಂಡಿತ್ ಹಾಗೂ ಯಶ್ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅದೇ ವರ್ಷ ಡಿಸೆಂಬರ್ 9ರಂದು ಈ ಜೋಡಿಯ ವಿವಾಹ ನೆರವೇರಿತು. 2018ರ ಡಿಸೆಂಬರ್ನಲ್ಲಿ ಆಯ್ರಾ ಜನಿಸಿದರೆ, 2019ರ ಅಕ್ಟೋಬರ್ 30ರಂದು ಯಥರ್ವ್ ಹುಟ್ಟಿದ. ಹಾಗಾದರೆ, ಈ ದಂಪತಿಯ ಡೇಟ್ ಆಫ್ ಬರ್ತ್ ಏನು? ಇವರ ನಡುವಿನ ವಯಸ್ಸಿನ ಅಂತರ ಎಷ್ಟು ಎಂಬ ಪ್ರಶ್ನೆಗೆ ಇಲ್ಲಿದ ಉತ್ತರ.
ಯಶ್ ಅವರಿಗಿಂತಲೂ ರಾಧಿಕಾ ಪಂಡಿತ್ ಸುಮಾರು ಎರಡು ವರ್ಷ ಹಿರಿಯವರು. ಯಶ್ ಜನಿಸಿದ್ದು 1986 ಜನವರಿ 6. ರಾಧಿಕಾ ಪಂಡಿತ್ ಜನಿಸಿದ್ದು ಮಾರ್ಚ್ 7, 1984ರಂದು. ಅಂದರೆ ಯಶ್ಗಿಂತ ರಾಧಿಕಾ 1 ವರ್ಷದ 10 ತಿಂಗಳು ಹಿರಿಯವರು. ಇವರ ಸಂಸಾರ ಅನೇಕರಿಗೆ ಮಾದರಿ.
‘ಕೆಜಿಎಫ್ 2’ ಸಿನಿಮಾ ಗೆಲುವು ಕಂಡಿದೆ. ಈ ಚಿತ್ರದ ಗೆಲುವನ್ನು ಸಂಭ್ರಮಿಸಲು ಯಶ್ ಹಾಗೂ ರಾಧಿಕಾ ಪಂಡಿತ್ ‘ಕೆಜಿಎಫ್ 2’ ತಂಡದ ಜತೆ ಸೇರಿ ವೆಕೇಶನ್ಗೆ ತೆರಳಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ಇದನ್ನೂ ಓದಿ: ‘ಸಲಾಂ ರಾಕಿ ಭಾಯ್’; ಯಶ್ ಮಗಳು ಅದೆಷ್ಟು ಕ್ಯೂಟ್ ಆಗಿ ಯಶ್ರನ್ನು ಕರೆಯುತ್ತಾಳೆ ನೋಡಿ
17ನೇ ದಿನವೂ ಮುಂದುವರಿದ ‘ಕೆಜಿಎಫ್ 2’ ಅಬ್ಬರ; ಯಶ್ ಎದುರು ಮಂಕಾದ ಅಜಯ್ ದೇವಗನ್, ಟೈಗರ್ ಸಿನಿಮಾ