ಯಶ್ 19ನೇ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್’ ಬಂಡವಾಳ? ಕುತೂಹಲ ಮೂಡಿಸಿತು ಹೊಸ ಘೋಷಣೆ
ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದು ಹಲವು ತಿಂಗಳು ಕಳೆದಿದೆ. ಈವರೆಗೆ ಅವರ ಹೊಸ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿಲ್ಲ. ಇದರ ಜತೆಗೆ ಯಶ್ ಅಮೆರಿಕ್ಕೆ ತೆರಳಿದ್ದು, ಹಾಲಿವುಡ್ ನಿರ್ದೇಶಕನ ಜತೆ ಕಾಣಿಸಿಕೊಂಡಿದ್ದಾರೆ.
ಯಶ್ (Yash) ಹಾಗೂ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇವರ ಕಾಂಬಿನೇಷನ್ನಲ್ಲಿ ‘ಮಾಸ್ಟರ್ಪೀಸ್’, ‘ಕೆಜಿಎಫ್’, ‘ಕೆಜಿಎಫ್ 2’ (KGF Chapter 2) ಚಿತ್ರಗಳು ಮೂಡಿ ಬಂದಿವೆ. ಮೂರು ಸಿನಿಮಾಗಳು ಯಶಸ್ಸು ಕಂಡಿದೆ. ಈಗ ಯಶ್ ಹಾಗೂ ವಿಜಯ್ ನಾಲ್ಕನೇ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಸೆಪ್ಟೆಂಬರ್ 30 ಅಂದರೆ ಶುಕ್ರವಾರ ಹೊಸ ಘೋಷಣೆ ಮಾಡುವ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ಇದು ಯಶ್ ಅವರ ಮುಂದಿನ ಚಿತ್ರ ಇರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಈ ಬಗ್ಗೆ ಕಮೆಂಟ್ ಬಾಕ್ಸ್ನಲ್ಲಿ ನಾನಾ ರೀತಿಯ ಊಹೆಗಳು ಹುಟ್ಟಿಕೊಳ್ಳುತ್ತಿವೆ.
ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದು ಹಲವು ತಿಂಗಳು ಕಳೆದಿದೆ. ಈವರೆಗೆ ಅವರ ಹೊಸ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿಲ್ಲ. ಇದರ ಜತೆಗೆ ಯಶ್ ಅಮೆರಿಕ್ಕೆ ತೆರಳಿದ್ದು, ಹಾಲಿವುಡ್ ನಿರ್ದೇಶಕನ ಜತೆ ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದಲೂ ಯಶ್ ಮುಂದಿನ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ಹೀಗಿರುವಾಗಲೇ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಸಾಕಷ್ಟು ಪ್ರಶ್ನೆಗಳು ಹುಟ್ಟು ಹಾಕಿದೆ.
A Race Against Time pic.twitter.com/mlpDf6N1Z7
— Hombale Films (@hombalefilms) September 29, 2022
‘ಸಮಯದ ವಿರುದ್ಧ ಓಟ’ ಎಂಬ ಕ್ಯಾಪ್ಶನ್ನೊಂದಿಗೆ ಹೊಂಬಾಳೆ ಫಿಲ್ಮ್ಸ್ ಹೊಸ ಪೋಸ್ಟ್ ಹಾಕಿದೆ. ‘ಸೆಪ್ಟೆಂಬರ್ 30ಕ್ಕೆ ಬೆಳಗ್ಗೆ 10:16ಕ್ಕೆ ಅತಿ ದೊಡ್ಡ ಘೋಷಣೆ’ ಎಂದು ತಿಳಿಸಲಾಗಿದೆ. ಈ ಟ್ವೀಟ್ ಯಶ್ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಯಶ್ 19ನೇ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಲಿದೆ ಎಂದೇ ಹೇಳಲಾಗುತ್ತಿದೆ. ಅಸಲಿ ವಿಚಾರಕ್ಕಾಗಿ ಶುಕ್ರವಾರದವರೆಗೆ ಕಾಯಲೇಬೇಕು.
ಯಶ್ 19ನೇ ಚಿತ್ರ ಯಾವುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಈವರೆಗೆ ಹೊರಬಿದ್ದಿಲ್ಲ. ಈ ಚಿತ್ರದ ಕುರಿತು ಸಾಕಷ್ಟು ವದಂತಿಗಳು ಕೂಡ ಇದೆ. ‘ಮಫ್ತಿ’ ಖ್ಯಾತಿಯ ನರ್ತನ್ ಜತೆ ಯಶ್ ಸಿನಿಮಾ ಮಾಡುತ್ತಾರೆ ಎನ್ನಲಾಗಿದೆ. ಇನ್ನು ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಚಿತ್ರದಲ್ಲಿ ಯಶ್ ನಟಿಸುತ್ತಾರೆ ಎಂಬ ಮಾತೂ ಇದೆ. ಆದರೆ, ಯಾವ ವಿಚಾರವೂ ಅಧಿಕೃತವಾಗಿಲ್ಲ. ಈ ಪ್ರಶ್ನೆಗಳಿಗೆ ಸೆಪ್ಟೆಂಬರ್ 30ಕ್ಕೆ ಉತ್ತರ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Published On - 5:26 pm, Thu, 29 September 22