AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದ ಸುದೀಪ್​; ಇಲ್ಲಿದೆ ವಿಡಿಯೋ

ಕಿಚ್ಚ ಸುದೀಪ್ ಅವರು ಐಷಾರಾಮಿ ಕಾರುಗಳ ಲಿಸ್ಟ್‌ಗೆ ಹೊಸ ಎಲೆಕ್ಟ್ರಿಕ್ ಕಾರನ್ನು ಸೇರಿಸಿದ್ದಾರೆ. ಮಹೀಂದ್ರಾ ಕಂಪನಿಯ 'BE 6' ಮಾದರಿಯ ಹೊಸ ಇವಿ ಕಾರನ್ನು ಅವರು ಅದ್ದೂರಿಯಾಗಿ ಮನೆಗೆ ತಂದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಸಿನಿಮಾಗಳು ಹಾಗೂ ಬಿಗ್ ಬಾಸ್ ಶೋ ನಡುವೆ ಕಿಚ್ಚನ ಈ ಹೊಸ ರೈಡ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಹೊಸ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದ ಸುದೀಪ್​; ಇಲ್ಲಿದೆ ವಿಡಿಯೋ
ಸುದೀಪ್ Image Credit source: Visualize Photography
ರಾಜೇಶ್ ದುಗ್ಗುಮನೆ
|

Updated on: Jul 20, 2026 | 9:08 AM

Share

ಮುಖ್ಯಾಂಶಗಳು

  • ಕಿಚ್ಚ ಸುದೀಪ್ ಗ್ಯಾರೇಜ್ ಸೇರಿದ ಹೊಸ ಅತಿಥಿ
  • ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರು ಖರೀದಿಸಿದ ಅಭಿನಯ ಚಕ್ರವರ್ತಿ
  • ಅದ್ದೂರಿಯಾಗಿ ನಡೆದ ಮಹೀಂದ್ರಾ ಬಿಇ 6 ಕಾರು ಡೆಲಿವರಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕಾರುಗಳ ಮೇಲೆ ಸಾಕಷ್ಟು ಪ್ರೀತಿ ಇದೆ. ಇದು ಇಡೀ ಗಾಂಧಿನಗರಕ್ಕೆ ತಿಳಿದಿರುವ ವಿಚಾರ. ಸದಾ ಒಂದಿಲ್ಲೊಂದು ಅತ್ಯಾಧುನಿಕ ಹಾಗೂ ರಾಯಲ್ ಕಾರುಗಳಲ್ಲಿ ಓಡಾಡುವ ಸುದೀಪ್ ಅವರ ಗ್ಯಾರೇಜ್‌ನಲ್ಲಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿವೆ. ಆದರೆ, ಈ ಬಾರಿ ಅವರು ಎಂದಿನ ತಮ್ಮ ಶೈಲಿಗಿಂತ ಭಿನ್ನವಾಗಿ ಯೋಚಿಸಿದ್ದು, ಪರಿಸರ ಸ್ನೇಹಿಯಾಗಿರುವ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಖರೀದಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಸುದೀಪ್ ಅವರು ಮಹಿಂದ್ರಾ ಕಂಪನಿಯ ಬಿಇ6 ಕಾರು ಖರೀದಿ ಮಾಡಿದ್ದಾರೆ. ಹೊಸ ಕಾರಿಗೆ ಮುಚ್ಚಲಾದ ಬಟ್ಟೆಯನ್ನು ಸರಿಸಿ ಕಾರನ್ನು ಅನ್‌ವೀಲ್ ಮಾಡಿದ್ದಾರೆ. ಈ ವೇಳೆ ಹೂಗುಚ್ಛಗಳನ್ನು ನೀಡಿ ಮಹೀಂದ್ರಾ ಕಂಪನಿಯ ಸಿಬ್ಬಂದಿ ಸುದೀಪ್ ಅವರ ಹೊಸ ಕಾರಿನ ಜರ್ನಿಗೆ ಶುಭ ಕೋರಿದರು. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಕಿಚ್ಚ ಸುದೀಪ್ ಖರೀದಿಸಿರುವ ಈ ಕಾರು ಮಹೀಂದ್ರಾ ಕಂಪನಿಯ ಮಹೀಂದ್ರಾ ಬಿಇ 6. ಅತ್ಯಂತ ವಿಶಿಷ್ಟ ಹಾಗೂ ಸ್ಪೋರ್ಟಿ ಲುಕ್ ಹೊಂದಿರುವ ಈ ಕಾರು ಆಕರ್ಷಕವಾಗಿದೆ. ಅತ್ಯಧಿಕ ಮೈಲೇಜ್ ಕೂಡ ಇದು ಹೊಂದಿದೆ. ವಿವಿಧ ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.

ಇದನ್ನೂ ಓದಿ: ಈಗ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ

ಇನ್ನು ಸುದೀಪ್ ಅವರ ಸಿನಿಮಾಗಳ ವಿಷಯಕ್ಕೆ ಬಂದರೆ, ಅವರು ತಮ್ಮ ಬಹುನಿರೀಕ್ಷಿತ ಚಿತ್ರವಾದ ‘ಬಿಲ್ಲ ರಂಗ ಭಾಷ’ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಒಂದು ರೋಮ್ ಕಾಮ್ ಸಿನಿಮಾ ಕೂಡ ಅವರ ಕೈಯಲ್ಲಿದೆ. ಇದರ ಜೊತೆಗೆ, ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ‘ಬಿಗ್ ಬಾಸ್’ ಹೊಸ ಸೀಸನ್‌ನ ನಿರೂಪಣೆಯಲ್ಲೂ ಕಿಚ್ಚ ಸುದೀಪ್ ಅವರು ಮುಂದಿನ ದಿನಗಳಲ್ಲಿ ಬ್ಯುಸಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ‘ಚೆನ್ನಮ್ಮ‘
ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ‘ಚೆನ್ನಮ್ಮ‘
ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ
ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ
ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು
ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು
ಪ್ರೀತಿಯ ಚುಂಬನ: ಪುತ್ರ ರೇವಣ್ಣರಿಂದ ತಾಯಿಗೆ ಅಂತಿನ ನಮನ
ಪ್ರೀತಿಯ ಚುಂಬನ: ಪುತ್ರ ರೇವಣ್ಣರಿಂದ ತಾಯಿಗೆ ಅಂತಿನ ನಮನ
ತಾಯಿ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಹೆಚ್​​​​.ಡಿ ಕುಮಾರಸ್ವಾಮಿ
ತಾಯಿ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಹೆಚ್​​​​.ಡಿ ಕುಮಾರಸ್ವಾಮಿ
ಚೆನ್ನಮ್ಮರ ಅಂತಿಮ ವಿಧಿವಿಧಾನ ಕಾರ್ಯ ನೆರವೇರಿಸುವವರು ಇವರೇ
ಚೆನ್ನಮ್ಮರ ಅಂತಿಮ ವಿಧಿವಿಧಾನ ಕಾರ್ಯ ನೆರವೇರಿಸುವವರು ಇವರೇ
ಚನ್ನಮ್ಮ ಪಾರ್ಥಿವ ಶರೀರ ಹೊತ್ತು ತರಲು ಹೂವಿನ ಪಲ್ಲಕಿ ಹೇಗಿದೆ ನೋಡಿ
ಚನ್ನಮ್ಮ ಪಾರ್ಥಿವ ಶರೀರ ಹೊತ್ತು ತರಲು ಹೂವಿನ ಪಲ್ಲಕಿ ಹೇಗಿದೆ ನೋಡಿ
ಸೇತುವೆ ಸರಳು ಕಟ್: ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌
ಸೇತುವೆ ಸರಳು ಕಟ್: ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌