Vikrant Rona: ‘ವಿಕ್ರಾಂತ್ ರೋಣ’ ಚಿತ್ರತಂಡದಿಂದ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್; ಏನದು? ಇಲ್ಲಿದೆ ನೋಡಿ
Kichcha Sudeep | Anup Bhandari: ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಅಪಾರ ನಿರೀಕ್ಷೆ ಮೂಡಿಸಿರುವ ಚಿಯತ್ರ. ಇದೀಗ ಸರ್ಪ್ರೈಸ್ ಆಗಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಏನದು? ಇಲ್ಲಿದೆ ನೋಡಿ.

‘ವಿಕ್ರಾಂತ್ ರೋಣ’ (Vikrant Rona) ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸುತ್ತಿರುವ ಚಿತ್ರ. ಕಿಚ್ಚ ಸುದೀಪ್ ಅಭಿನಯದ ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ಗಳು ನಿರೀಕ್ಷೆಯನ್ನು ನೂರ್ಮಡಿಗೊಳಿಸಿದ್ದವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿಯಲ್ಲಿ ಚಿತ್ರ ತೆರೆಕಾಣಬೇಕಿತ್ತು. ಆದರೆ ಹಲವು ಅನಿವಾರ್ಯ ಕಾರಣದಿಂದ ರಿಲೀಸ್ ಮುಂದೂಡಲಾಗಿದೆ. ಆದರೆ ಚಿತ್ರತಂಡ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಆಗಾಗ ಚಿತ್ರದ ಬಗ್ಗೆ ಹೊಸ ಅಪ್ಡೇಟ್ಗಳನ್ನು ನೀಡಲಾಗುತ್ತಿದೆ. ಇಂದು ‘ವಿಕ್ರಾಂತ್ ರೋಣ’ ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಜನ್ಮದಿನ. ಚಿತ್ರರಂಗದ ಹಲವು ತಾರೆಯರು, ಅಭಿಮಾನಿಗಳು ನಿರ್ದೇಶಕರಿಗೆ ಶುಭಾಶಯ ಕೋರಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ಅನ್ನು ಅನೂಪ್ ಭಂಡಾರಿ ನೀಡಿದ್ದಾರೆ. ಹೌದು, ವಿಕ್ರಾಂತ್ ರೋಣದ ಹೊಸ ಅಪ್ಡೇಟ್ ನೀಡಿದೆ ಚಿತ್ರತಂಡ.
ವಿಕ್ರಾಂತ್ ರೋಣ ಇಂಗ್ಲೀಷ್ನಲ್ಲೂ ತೆರೆಗೆ ಬರುತ್ತಿರುವುದು ಎಲ್ಲರಿಗೆ ತಿಳಿದೇ ಇದೆ. ವಿಶೇಷವೆಂದರೆ ಇಂಗ್ಲೀಷ್ನಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ಧ್ವನಿ ನೀಡಿದ್ದಾರೆ. ‘ಕನ್ನಡದ ಸೂಪರ್ ಸ್ಟಾರ್ ಒಬ್ಬರು ತಮ್ಮ ಇಂಗ್ಲೀಷ್ ಚಿತ್ರಕ್ಕೆ ತಮ್ಮದೇ ಧ್ವನಿ ನೀಡುತ್ತಿರೋದು ಇದೇ ಮೊದಲ ಬಾರಿ. ಅಷ್ಟೇ ಅಲ್ಲ, ಭಾರತ ಮಟ್ಟದಲ್ಲೂ ಇಂತಹ ನಾಯಕರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ’ ಎಂದು ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ ಅನೂಪ್ ಭಂಡಾರಿ. ಅಲ್ಲದೇ ಸುದೀಪ್ ಈಗಾಗಲೇ ಇಂಗ್ಲೀಷ್ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ಕಾಣಿಸಿಕೊಂಡಿರುವ ದೃಶ್ಯದ ಸಣ್ಣ ಟೀಸರ್ ಒಂದನ್ನೂ ರಿಲೀಸ್ ಮಾಡಲಾಗಿದೆ. ಇದನ್ನು ನೋಡಿದ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.
ಅನೂಪ್ ಭಂಡಾರಿ ಹಂಚಿಕೊಂಡ ಟ್ವೀಟ್ ಇಲ್ಲಿದೆ:
#VikrantRonaInEnglish @KicchaSudeep sir completes dubbing for the English version. First Kannada superstar & one of the few from India to dub for a full fledged commercial movie in English #VikrantRоna pic.twitter.com/xXAvJgAmts
— Anup Bhandari (@anupsbhandari) March 2, 2022
ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ ಕೂಡ ಕಾಣಿಸಿಕೊಂಡಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಚಿತ್ರತಂಡವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.
ಇದನ್ನೂ ಓದಿ:
Trademark Song: ‘ಟ್ರೇಡ್ಮಾರ್ಕ್’ನಲ್ಲಿದೆ ಹಲವು ಅಪರೂಪದ ದೃಶ್ಯಗಳು; ಹಾಡಿನ ವಿಶೇಷ ಸ್ಟಿಲ್ಗಳು ಇಲ್ಲಿವೆ
Amulya: ಅಮೂಲ್ಯ- ಜಗದೀಶ್; ತಾರಾ ದಂಪತಿಯ ಮುದ್ದಾದ ಫೋಟೋಗಳು ಇಲ್ಲಿವೆ
Published On - 8:31 pm, Wed, 2 March 22




