ಜೆಪಿ ಬೇಕಿದ್ದರೆ ಸು ಫ್ರಮ್ ಸೋಗೆ ಸೀಕ್ವೆಲ್ ಮಾಡಲಿ, ನಾನು ಮಾಡಲ್ಲ; ರಾಜ್ ಬಿ. ಶೆಟ್ಟಿ ಗಟ್ಟಿ ನಿರ್ಧಾರ
ರಾಜ್ ಬಿ. ಶೆಟ್ಟಿ ಅವರು ತಮ್ಮ ಅತಿಯಶಸ್ವಿಯಾದ ‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಮಾಡಲು ನಿರಾಕರಿಸಿದ್ದಾರೆ. 70 ಕೋಟಿಗೂ ಅಧಿಕ ಗಳಿಕೆ ಮಾಡಿರುವ ಈ ಚಿತ್ರದ ಯಶಸ್ಸಿನ ನಡುವೆಯೂ, ಹೊಸ ಮತ್ತು ಮೂಲ ಕಥೆಗಳ ಮೇಲೆ ಕೇಂದ್ರೀಕರಿಸುವುದೇ ತಮ್ಮ ಆದ್ಯತೆ ಎಂದು ಅವರು ತಿಳಿಸಿದ್ದಾರೆ. ಹಣದ ಆಸೆಗಿಂತ ಹೊಸ ಸೃಜನಶೀಲತೆಯನ್ನು ಅನ್ವೇಷಿಸುವುದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿಯಿದೆ ಎಂದು ಅವರು ಹೇಳಿದ್ದಾರೆ.

‘ಸು ಫ್ರಮ್ ಸೋ’ (Su From From) ಚಿತ್ರವು ಕನ್ನಡದ ಬಾಕ್ಸ್ ಆಫೀಸ್ನಲ್ಲಿ ನವ ನವೀನ ದಾಖಲೆಗಳನ್ನು ನಿರ್ಮಿಸುತ್ತಾ ಸಾಗುತ್ತಿರುವುದನ್ನು ನೋಡಬಹುದು. ಈ ಚಿತ್ರವು ಈಗಾಗಲೇ 70 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರವು ಇನ್ನಷ್ಟು ದಿನ ಹೀಗೆಯೇ ಕಲೆಕ್ಷನ್ ಮಾಡಿದರೆ 100 ಕೋಟಿ ರೂಪಾಯಿ ಕ್ಲಬ್ ಸೇರಬಹುದು. ಇದು ಆಗುತ್ತದೆಯೋ ಅಥವಾ ಇಲ್ಲವೋ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರ ಆಗಲಿದೆ. ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಚರ್ಚೆ ಶುರುವಾಗಿದೆ. ಆದರೆ, ರಾಜ್ ಇದರ ಭಾಗ ಆಗುತ್ತಿಲ್ಲ ಮತ್ತು ಅದನ್ನು ನೇರವಾಗಿ ಹೇಳಿದ್ದಾರೆ.
ತೆಲುಗು ಭಾಷೆಯಲ್ಲಿ ‘ಸು ಫ್ರಮ್ ಸೋ’ ರಿಲೀಸ್ ಆಗಿದೆ. ಮೈತ್ರಿ ಮೂವೀ ಮೇಕರ್ಸ್ ತಂಡದವರು ಈ ಚಿತ್ರವನ್ನು ಹಂಚಿಕೆ ಮಾಡಿದರು. ಅವರ ಕಡೆಯಿಂದ ಸುದ್ದಿಗೋಷ್ಠಿ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಈ ಸುದ್ದಿಗೋಷ್ಠಿ ವೇಳೆ ರಾಜ್ ಅವರಿಗೆ ‘ಸು ಫ್ರಮ್ ಸೋ 2’ ಚಿತ್ರದ ಬಗ್ಗೆ ಪ್ರಶ್ನೆಗಳು ಎದುರಾದವು ಮತ್ತು ರಾಜ್ ಕಡೆಯಿಂದ ಉತ್ತರ ಬಂತು.
‘ಸೀಕ್ವೆಲ್ ಬಗ್ಗೆ ನನಗೆ ನಂಬಿಕೆ ಇಲ್ಲ. ನಾನು ಮೊದಲು ಬರಹಗಾರ ಆ ಬಳಿಕ ನಿರ್ದೇಶಕ ಹಾಗೂ ನಟ. ನಾನು ಈಗಾಗಲೇ ನೋಡಿದ್ದರ ಬಗ್ಗೆ ಪ್ಯಾಷನೇಟ್ ಆಗಿರಲು ಸಾಧ್ಯವಿಲ್ಲ. ನನ್ನ ನಿರ್ದೇಶಕರು ನನ್ನ ಮನ ಒಲಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ, ನೀವು ಬೇಕಿದ್ದರೆ ಬೇರೆಯವರ ಜೊತೆ ಮಾಡಿಕೊಳ್ಳಿ. ನಾನು ಅದನ್ನು ತಡೆಯಲ್ಲ. ನಾನು ಬರೋದಿಲ್ಲ ಎಂದು ಹೇಳಿದೆ’ ಎಂದಿದ್ದಾರೆ ರಾಜ್.
ಇದನ್ನೂ ಓದಿ: ‘ಕಾಟೇರ’ ಒಟ್ಟಾರೆ ಕಲೆಕ್ಷನ್ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ ರಾಜ್ ಬಿ. ಶೆಟ್ಟಿ ಅವರು ಮಂಗಳೂರಿನವರು. ಅಲ್ಲಿ ತುಳು ಸಿನಿಮಾಗಳನ್ನು ಮಾತ್ರ ಮಾಡಲಾಗುತ್ತದೆ. ಅದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲ. ಅಂಥ ನಗರದಿಂದ ಬಂದು ಇಂಥ ಒಳ್ಳೆಯ ಸಿನಿಮಾ ಕೊಟ್ಟಾಗ ಜನರ ಪ್ರತಿಕ್ರಿಯೆ ನೋಡಿ ಅವರಿಗೆ ಖುಷಿ ಆಗುತ್ತದೆ. ಹೀಗಿರುವಾಗ ಒಂದು ಯಶಸ್ಸಿನ ಹಿಂದೆ ಹೋಗಿ ಹಣ ಮಾಡುವ ಬದಲು ಹೊಸದನ್ನು ಪ್ರಯತ್ನಿಸಬೇಕು ಎಂಬುದು ರಾಜ್ ಅವರ ಅಭಿಪ್ರಾಯ ಆಗಿದೆ. ಹೊಸದನ್ನು ಪ್ರಯತ್ನಿಸೋಕೆ ಮಾತ್ರ ಅವರಿಗೆ ಖುಷಿ ಕೊಡುತ್ತದೆ ಎಂದೇ ಹೇಳಬಹುದು. ಈ ಕಾರಣದಿಂದಲೇ ಹೊಸದನ್ನು ಮಾಡಬೇಕು ಎಂದು ರಾಜ್ ಅವರು ಸಾಕಷ್ಟು ಪ್ರಯತ್ನಿಸುತ್ತಾರೆ. ಈ ಕಾರಣಕ್ಕೆ ಸೀಕ್ವೆಲ್ ಮಾಡೋದೆ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







