‘ವರ್ಸ್​’ಗಳು ನನಗಾಗಲ್ಲ, ನನ್ನದು ಒಂದೇ ಕತೆ, ಮಿಕ್ಸ್ ಮಾಡಲ್ಲ: ನೀಲ್

Prashanth Neel: ಕೆಲವು ನಿರ್ದೇಶಕರು ಮಲ್ಟಿವರ್ಸ್, ಯೂನಿವರ್ಸ್ ಮಾಡಿಕೊಂಡಿದ್ದಾರೆ. ಪ್ರೇಕ್ಷಕರು ಆ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ‘ಸಲಾರ್’ ಸಹ ಆ ರೀತಿಯ ವರ್ಸ್​ ವಿಭಾಗಕ್ಕೆ ಸೇರುತ್ತದೆಯೇ? ನೀಲ್ ಉತ್ತರಿಸಿದ್ದಾರೆ.

‘ವರ್ಸ್​’ಗಳು ನನಗಾಗಲ್ಲ, ನನ್ನದು ಒಂದೇ ಕತೆ, ಮಿಕ್ಸ್ ಮಾಡಲ್ಲ: ನೀಲ್
Follow us
ಮಂಜುನಾಥ ಸಿ.
|

Updated on: Dec 02, 2023 | 9:32 PM

ಪ್ರಭಾಸ್ ನಟನೆಯ ‘ಸಲಾರ್’ (Salaar) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಕೆಜಿಎಫ್’ ಮೂಲಕ ಭಾರತದಾದ್ಯಂತ ಹವಾ ಎಬ್ಬಿಸಿದ ಪ್ರಶಾಂತ್ ನೀಲ್, ‘ಸಲಾರ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಲು ಕಾರಣ. ‘ಸಲಾರ್’ ಸಿನಿಮಾವನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡಲು ಪ್ರಶಾಂತ್ ನೀಲ್ ನಿಶ್ಚಯಿಸಿದ್ದಾರೆ. ಇತ್ತೀಚೆಗೆ ತಮ್ಮದೇ ಆದ ಮಲ್ಟಿವರ್ಸ್​ಗಳನ್ನು ಸೃಷ್ಟಿಮಾಡಿಕೊಳ್ಳುವ ಟ್ರೆಂಡ್ ಕೆಲವು ನಿರ್ದೇಶಕರಲ್ಲಿ ಹೆಚ್ಚಾಗಿದೆ. ತಮಿಳಿನ ಲೋಕೇಶ್ ಕನಗರಾಜ್, ಹಿಂದಿಯಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಅಸ್ತ್ರ ವರ್ಸ್ ಹೀಗೆ ಬೇರೆ-ಬೇರೆ ವರ್ಸ್​ಗಳು ಆರಂಭವಾಗಿವೆ.

ಪ್ರಶಾಂತ್ ನೀಲ್, ತಮ್ಮ ಸಿನಿಮಾಗಳಲ್ಲಿ ಭಿನ್ನ ಲೋಕವನ್ನು ಸೃಷ್ಟಿಸುವ ನಿರ್ದೇಶಕ, ಹಾಗಾಗಿ ಅವರೂ ಸಹ ಹೊಸ ಮಲ್ಟಿವರ್ಸ್ ಅನ್ನು ಸೃಷ್ಠಿಸುವ ಆಲೋಚನೆಯಲ್ಲಿದ್ದಾರಾ? ಅವರು ಈಗಾಗಲೇ ಸೃಷ್ಟಿಸಿರುವ ‘ಕೆಜಿಎಫ್’ ಅನ್ನು ‘ಸಲಾರ್’ ಜೊತೆಗೇನಾದರೂ ಜೋಡಿಸಿದ್ದಾರಾ ಎಂಬ ಕುತೂಹಲ ಸಹಜ. ಈ ಕುರಿತು ಪ್ರಶ್ನೆಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇವಕ್ಕೆಲ್ಲ ನಿರ್ದೇಶಕ ಪ್ರಶಾಂತ್ ನೀಲ್ ಉತ್ತರ ನೀಡಿದ್ದಾರೆ.

‘‘ಈ ಮಲ್ಟಿವರ್ಸ್, ಯೂನಿವರ್ಸ್​ಗಳ ಬಗ್ಗೆ ನನ್ನ ತಕರಾರೇನೂ ಇಲ್ಲ. ಆದರೆ ಎರಡು ಭಿನ್ನ ಪ್ರಪಂಚಗಳನ್ನು ಸೇರಿಸುವುದು ನನಗೆ ಕಷ್ಟದ ಕೆಲಸ. ಕೆಲವು ಒಳ್ಳೆಯ ನಿರ್ದೇಶಕರಿದ್ದಾರೆ ಅವರು ಎರಡು ಮೂರು ಕತೆಗಳನ್ನು ಜೋಡಿಸುತ್ತಾರೆ ಆದರೆ ನನಗಾಗದು. ಭಿನ್ನ ಕತೆಗಳನ್ನು, ಪಾತ್ರಗಳನ್ನು ಭಿನ್ನ ಪ್ರಪಂಚಗಳನ್ನು ಮರ್ಜ್​ ಮಾಡುವಷ್ಟು ಪ್ರತಿಭೆ ನನ್ನಲ್ಲಿಲ್ಲ’’ ಎಂದಿದ್ದಾರೆ ನೀಲ್.

ಇದನ್ನೂ ಓದಿ:‘ಸಲಾರ್’ ಟ್ರೇಲರ್ ಬಳಿಕ ಫೈಟ್ ಕೊಡಲು ರೆಡಿ ಆಗ್ತಿದೆ ‘ಡಂಕಿ’ ಟೀಂ

‘‘ಪ್ರಭಾಸ್ ಅವರಿಗೆ ಬಹಳ ದೊಡ್ಡ ಹೆಸರಿದೆ, ಭಾರಿ ದೊಡ್ಡ ಅಭಿಮಾನಿ ವರ್ಗ ಅವರಿಗಿದೆ. ಅವರಿಗೆ ಸಿನಿಮಾ ನಿರ್ದೇಶಿಸುವ ಅವಕಾಶ ಸಿಗುವುದೇ ಪುಣ್ಯ. ಹಾಗಾಗಿ ಅವರಿಗೆ, ಅವರಿಗಿರುವ ಹೆಸರಿಗೆ, ಅಭಿಮಾನಿಗಳಿಗೆ ಗೌರವ ನೀಡಿ, ಪ್ರಭಾಸ್​ಗೆ ಸೂಕ್ತ ಸ್ಪೇಸ್ ನೀಡಿಯೇ ಸಿನಿಮಾದ ಕತೆ ಹೆಣೆದು, ಸಿನಿಮಾ ಮಾಡಿದ್ದೇನೆ. ಸಿನಿಮಾವನ್ನು ಎಲ್ಲ ಪ್ರಕಾರದ ಜನರೂ ಕೂತು ನೋಡಬೇಕು, ಅವರಿಗೆ ಒಂದು ಭಿನ್ನವಾದ ಅನುಭವ ಆಗಬೇಕು ಎಂಬುದು ನಮ್ಮ ಯೋಜನೆ, ಅದರಂತೆಯೇ ಸಿನಿಮಾ ಮಾಡಿದ್ದೇವೆ’’ ಎಂದಿದ್ದಾರೆ.

‘ಸಲಾರ್’ ಸಿನಿಮಾದ ಬಿಡುಗಡೆ ತಡವಾದ ಬಗ್ಗೆ ಮಾತನಾಡಿದ ಪ್ರಶಾಂತ್ ನೀಲ್, ‘ಸಿನಿಮಾದ ಬಿಡುಗಡೆ ದಿನಾಂಕವನ್ನು ನಾನು ನಿರ್ಣಯ ಮಾಡುವುದಿಲ್ಲ. ಯಾವ ದಿನಾಂಕವನ್ನು ಅವರು ಕೇಳುತ್ತಾರೋ ಅಂದಿಗೆ ಬಿಡುಗಡೆ ಮಾಡಲು ಆಗುತ್ತದೆಯೋ ಇಲ್ಲವೋ ಎಂದಷ್ಟೆ ನಾನು ಹೇಳಬಹುದು. ಸಿನಿಮಾ ಬಿಡುಗಡೆ ದಿನಾಂಕ ನಿಶ್ಚಯ ಮಾಡುವುದು ನಿರ್ಮಾಪಕರು, ನಾನು ಅವರ ಕೆಲಸಕ್ಕೆ ಅಡ್ಡಿ ಬರುವುದಿಲ್ಲ, ಅವರು ನನ್ನ ಕೆಲಸಕ್ಕೆ ಅಡ್ಡಿ ಬರೊಲ್ಲ’’ ಎಂದಿದ್ದಾರೆ ನೀಲ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ