ಮೂರನೇ ಸೋಮವಾರವೂ ದಾಖಲೆಯ ಗಳಿಕೆ ಮಾಡಿದ ‘ಪ್ರೇಮದ ಊರಲಿ’ ಸಿನಿಮಾ
ಬಿಡುಗಡೆಯಾಗಿ ಮೂರು ವಾರ ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ 'ಪ್ರೇಮದ ಊರಲಿ' ಸಿನಿಮಾದ ಹವಾ ಕಮ್ಮಿಯಾಗಿಲ್ಲ. ಅದರಲ್ಲೂ ಮೂರನೇ ಸೋಮವಾರವೂ ಸಹ ಭರ್ಜರಿ ಗಳಿಕೆ ದಾಖಲಿಸುವ ಮೂಲಕ ಈ ಚಿತ್ರ ಹೊಸ ದಾಖಲೆ ಬರೆದಿದೆ. ಸದ್ಯ ಒಟ್ಟು ಇಂಡಿಯಾ ನೆಟ್ ಕಲೆಕ್ಷನ್ 52.97 ಕೋಟಿ ರೂಪಾಯಿಗಳನ್ನು ದಾಟಿದ್ದು, ಸಿನಿಪ್ರಿಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಮುಖ್ಯಾಂಶಗಳು
- ಮೂರನೇ ಸೋಮವಾರವೂ ಬಾಕ್ಸ್ ಆಫೀಸ್‌ನಲ್ಲಿ ಪ್ರೇಮದ ಊರಲಿ ಸೌಂಡ್
- ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪ್ರೇಮದ ಊರಲಿ ಗಳಿಕೆ
- ಐವತ್ತು ಕೋಟಿ ಕ್ಲಬ್ ಸೇರಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಸಿನಿಮಾ
‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅತಿ ದೊಡ್ಡ ಸದ್ದು ಮಾಡುತ್ತಿದ್ದು, ಬಿಡುಗಡೆಯಾಗಿ ಮೂರು ವಾರ ಕಳೆದರೂ ಇದರ ಹವಾ ಕಮ್ಮಿಯಾಗಿಲ್ಲ. ಪ್ರೇಕ್ಷಕರಿಂದ ಸಿಗುತ್ತಿರುವ ಭರ್ಜರಿ ಬೆಂಬಲದಿಂದ ಈ ಚಿತ್ರ ದಿನದಿಂದ ದಿನಕ್ಕೆ ಹೊಸ ಮೈಲಿಗಲ್ಲುಗಳನ್ನು ದಾಟುತ್ತಾ ಸಾಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ದಾಖಲೆ ಬರೆಯುತ್ತಿರುವುದು ಸ್ಯಾಂಡ್‌ವುಡ್ ವಲಯದಲ್ಲಿಯೂ ಸಂಚಲನ ಸೃಷ್ಟಿಸಿದೆ.
ಚಿತ್ರದ ಮೊದಲ ವಾರದ ಕಲೆಕ್ಷನ್ ಗಮನಿಸುವುದಾದರೆ, ಸೆಪ್ಟೆಂಬರ್ 25ರಂದು ತೆರೆಕಂಡ ಈ ಸಿನಿಮಾ ಮೊದಲ ವಾರದಲ್ಲಿ ಒಟ್ಟು ₹5.32 ಕೋಟಿ ಕಲೆಕ್ಷನ್ ಮಾಡುವ ಮೂಲಕ ಅತ್ಯುತ್ತಮ ಆರಂಭ ಪಡೆದುಕೊಂಡಿತ್ತು. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಚಿತ್ರದ ಗಳಿಕೆಯೂ ಗಣನೀಯವಾಗಿ ಏರಿಕೆಯಾಯಿತು.
ಇನ್ನು ಎರಡನೇ ವಾರದಲ್ಲಿ ಈ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಿದೆ. ಎರಡನೇ ವಾರ ಮುಗಿಯುವಷ್ಟರಲ್ಲಿ ಸಿನಿಮಾ ಬರೋಬ್ಬರಿ 23.65 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ತನ್ನ ಬಲವನ್ನು ಸಾಬೀತುಪಡಿಸಿತು. ದಿನದಿಂದ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆ ಹಾಗೂ ಶೋಗಳು ಹೆಚ್ಚಾಗುತ್ತಾ ಸಾಗಿದ್ದು ಇದಕ್ಕೆ ಪ್ರಮುಖ ಕಾರಣವಾಯಿತು.
ಮೂರನೇ ವಾರಕ್ಕೆ ಕಾಲಿಟ್ಟರೂ ‘ಪ್ರೇಮದ ಊರಲಿ’ ಸಿನಿಮಾದ ಕ್ರೇಜ್ ಮಾತ್ರ ಸ್ವಲ್ಪವೂ ಕಮ್ಮಿಯಾಗಿಲ್ಲ. ಅದರಲ್ಲೂ ವಿಶೇಷವಾಗಿ ಚಿತ್ರದ ಮೂರನೇ ಸೋಮವಾರದ ಕಲೆಕ್ಷನ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸಾಮಾನ್ಯವಾಗಿ ವಾರದ ದಿನಗಳಲ್ಲಿ, ಅದರಲ್ಲೂ ಸೋಮವಾರ ಕಲೆಕ್ಷನ್ ಇಳಿಕೆ ಕಾಣುವುದು ಸಹಜ. ಆದರೆ ವೀಕೆಂಡ್‌ನಲ್ಲಿ ಕೋಟಿ ಕೋಟಿ ಬಾಚಿಕೊಂಡ ಈ ಚಿತ್ರ, ಮೂರನೇ ಸೋಮವಾರವೂ ಕೂಡ ಭರ್ಜರಿ ಗಳಿಕೆ ದಾಖಲಿಸುವ ಮೂಲಕ ಅಚ್ಚರಿ ಮೂಡಿಸಿದೆ. ಮೂರನೇ ಸೋಮವಾರ (ಅಕ್ಟೋಬರ್ 12) ಈ ಸಿನಿಮಾ ಬರೋಬ್ಬರಿ 4.75 ಕೋಟಿ ರೂಪಾಯಿ ಗಳಿಸಿದೆ.
ಇದನ್ನೂ ಓದಿ: ‘ಪ್ರೇಮದ ಊರಲಿ’ ಸಿನಿಮಾದ ಒಟಿಟಿ ವದಂತಿಗೆ ಸ್ಪಷ್ಟನೆ ನೀಡಿದ ಚಿತ್ರತಂಡ
ಸದ್ಯದ ಒಟ್ಟು ಗಳಿಕೆಯ ಲೆಕ್ಕಾಚಾರ ನೋಡುವುದಾದರೆ, ಈ ಚಿತ್ರವು ಇದುವರೆಗೆ ಒಟ್ಟು 61.95 ಕೋಟಿ ರೂಪಾಯಿ ಗ್ರಾಸ್ ಹಾಗೂ ₹52.97 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಕೊನೆಯ ಮೂರು ದಿನಗಳ ಬಾಕ್ಸ್ ಆಫೀಸ್ ಗಳಿಕೆಯ ವಿವರಗಳು ಈ ಕೆಳಗಿನಂತಿವೆ:
16ನೇ ದಿನ: ಅಕ್ಟೋಬರ್ 10, 6.75 ಕೋಟಿ ರೂಪಾಯಿ 17ನೇ ದಿನ: ಅಕ್ಟೋಬರ್ 11, 8.00 ಕೋಟಿ ರೂಪಾಯಿ 18ನೇ ದಿನ: ಅಕ್ಟೋಬರ್ 12, 3ನೇ ಸೋಮವಾರ 4.75 ಕೋಟಿ ರೂಪಾಯಿ
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




