ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ‘ಶ್ರೀಮನ್ನಾರಾಯಣ’ನ ಅವತಾರ ರಿವೀಲ್
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಶ್ರೀಮನ್ನಾರಾಯಣನ ಅವತಾರ ತಾಳಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಸಕ್ಸಸ್ ನಂತ್ರ ರಕ್ಷಿತ್ ಶೆಟ್ಟಿ ಸದ್ದೇ ಇರಲಿಲ್ಲ. ಬರೋಬ್ಬರಿ 3 ವರ್ಷಗಳ ನಂತ್ರ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣನಾಗಿ ಸದ್ದು ಮಾಡೋದಕ್ಕೆ ಸಜ್ಜಾಗಿದ್ದಾರೆ. ಸದ್ಯ ಶ್ರೀಮನ್ನಾರಾಯಣ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರಕ್ಷಿತ್ ಶೆಟ್ಟಿ ಲುಕ್, ಮ್ಯಾನರಿಸಂ ಸೂಪರ್ ಎನ್ನುವಂತಿದೆ. ಇನ್ನು ಸಿನಿಮಾದಲ್ಲಿ ರಕ್ಷಿತ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಅವನೇ ಶ್ರೀಮನ್ನಾರಾಯಣ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ ಸೇರಿದಂತೆ […]
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಶ್ರೀಮನ್ನಾರಾಯಣನ ಅವತಾರ ತಾಳಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಸಕ್ಸಸ್ ನಂತ್ರ ರಕ್ಷಿತ್ ಶೆಟ್ಟಿ ಸದ್ದೇ ಇರಲಿಲ್ಲ. ಬರೋಬ್ಬರಿ 3 ವರ್ಷಗಳ ನಂತ್ರ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣನಾಗಿ ಸದ್ದು ಮಾಡೋದಕ್ಕೆ ಸಜ್ಜಾಗಿದ್ದಾರೆ.
ಸದ್ಯ ಶ್ರೀಮನ್ನಾರಾಯಣ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರಕ್ಷಿತ್ ಶೆಟ್ಟಿ ಲುಕ್, ಮ್ಯಾನರಿಸಂ ಸೂಪರ್ ಎನ್ನುವಂತಿದೆ. ಇನ್ನು ಸಿನಿಮಾದಲ್ಲಿ ರಕ್ಷಿತ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ.
ಅವನೇ ಶ್ರೀಮನ್ನಾರಾಯಣ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿ ತೆರೆಗೆ ಬರ್ತಿದೆ. ಪಂಚ ಭಾಷೆಗಳಲ್ಲೂ ಟ್ರೇಲರ್ ರಿಲೀಸ್ ಆಗಿದ್ದು, ರಕ್ಷಿತ್ ಚಿತ್ರಕ್ಕೆ ಸೌತ್ ಸ್ಟಾರ್‌ಗಳು ಸಾಥ್ ನೀಡಿದ್ದಾರೆ. ತಮಿಳು ನಟ ಧನುಷ್, ನಾನಿ, ನಿವಿನ್ ಪೌಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೇಲರ್‌ನ್ನು ಆಯಾ ಭಾಷೆಗಳಲ್ಲಿ ರಿಲೀಸ್ ಮಾಡಿದ್ದಾರೆ.
ಟ್ರೇಲರ್‌ಗೆ ಸಿಕ್ಕಾಪಟ್ಟೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗಿರೋ ಅವನೇ ಶ್ರೀಮನ್ನಾರಾಯಣ ಸಿನಿಮಾ ಡಿಸೆಂಬರ್ 27ಕ್ಕೆ ರಿಲೀಸ್ ಆಗ್ತಿದೆ. ಈ ಸಿನಿಮಾ ಖಂಡಿತ ದಾಖಲೆ ಬರೆಯುತ್ತೆ ಅನ್ನೋ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ.
Published On - 3:11 pm, Fri, 29 November 19