ಅನ್​ಟೋಲ್ಡ್​ ಕ್ರೈಮ್​ ಸ್ಟೋರಿ ಹೇಳ್ತಾರೆ ಶುಭಾ ಪೂಂಜಾ; ಹೇಗಿದೆ ನೋಡಿ ‘ಅಂಬುಜ’ ಟೀಸರ್​

Shubha Poonja: ‘ಅಂಬುಜ’ ಚಿತ್ರದಲ್ಲಿ ಶುಭಾ ಪೂಂಜಾ ಅವರು ಕ್ರೈಂ ರಿಪೋರ್ಟರ್ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಟೀಸರ್​ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

ಅನ್​ಟೋಲ್ಡ್​ ಕ್ರೈಮ್​ ಸ್ಟೋರಿ ಹೇಳ್ತಾರೆ ಶುಭಾ ಪೂಂಜಾ; ಹೇಗಿದೆ ನೋಡಿ ‘ಅಂಬುಜ’ ಟೀಸರ್​
ಅಂಬುಜ ಸಿನಿಮಾ ತಂಡ
Follow us
TV9 Web
| Updated By: ಮದನ್​ ಕುಮಾರ್​

Updated on: Oct 11, 2022 | 3:54 PM

ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಶುಭಾ ಪೂಂಜಾ (Shubha Poonja) ಫೇಮಸ್​ ಆಗಿದ್ದಾರೆ. ಈಗ ಅವರ ಹೊಸ ಸಿನಿಮಾ ‘ಅಂಬುಜ’ (Ambuja Movie) ಕೂಡ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಅವರ ಜೊತೆ ‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ ಕೂಡ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ (Ambuja Teaser) ಹಾಗೂ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಲಾಯಿತು. ವಿಶೇಷ ಎಂದರೆ, ಇದು ನೈಜ ಘಟನೆ ಆಧಾರಿತ ಸಿನಿಮಾ. ಟೀಸರ್ ನೋಡಿದ ಪ್ರೇಕ್ಷಕರ ಮನದಲ್ಲಿ ನಿರೀಕ್ಷೆ ಹೆಚ್ಚಿದೆ. ಕಥೆ ಏನು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ಈ ಚಿತ್ರಕ್ಕೆ ‘ಅನ್​ಟೋಲ್ಡ್​ ಕ್ರೈಮ್​ ಸ್ಟೋರಿ’ ಎಂಬ ಟ್ಯಾಗ್​ ಲೈನ್​ ಇದೆ. ಒಂದು ದಿನ ಕಳೆಯುವುದರೊಳಗೆ 4 ಲಕ್ಷಕ್ಕೂ ಅಧಿಕ ಬಾರಿ ಈ ಚಿತ್ರದ ಟೀಸರ್​ ವೀಕ್ಷಣೆ ಕಂಡಿದೆ.

‘ಅಂಬುಜ’ ಸಿನಿಮಾದಲ್ಲಿ ಒಂದು ಕ್ರೈಂ ಥ್ರಿಲ್ಲರ್ ಹಾರರ್ ಕಥೆ ಇರಲಿದೆ. ಈ ಸಿನಿಮಾಗೆ ಕಾಶಿನಾಥ್ ಡಿ. ಮಡಿವಾಳರ್ ಬಂಡವಾಳ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡುತ್ತಿರುವ ಅವರು ಕಥೆ ಮತ್ತು ಸಾಹಿತ್ಯವನ್ನೂ ಬರೆದಿರುವುದು ವಿಶೇಷ. ಈ ಚಿತ್ರಕ್ಕೆ ಶ್ರೀನಿ ಹನುಮಂತರಾಜು  ನಿರ್ದೇಶನ ಮಾಡಿದ್ದಾರೆ.

‘ಗೊತ್ತಿಲ್ಲದ ವಿಚಾರಗಳನ್ನು ಜನರಿಗೆ ಹೇಳಬೇಕು ಎನಿಸಿತು. ನಿರ್ದೇಶಕ ಶ್ರೀನಿ ಅವರ ಜೊತೆ ಮಾತನಾಡಿದಾಗ ಈ ಕಥೆ ತುಂಬಾ ಚೆನ್ನಾಗಿದೆ ಎಂಬ ಪ್ರತಿಕ್ರಿಯೆ ಬಂತು. ಹಾಗಾಗಿ ಸಿನಿಮಾ ಮಾಡೋಣ ಎಂದು ನಿರ್ಧರಿಸಿದೆ. ಇದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದರೂ ಸಹ ಕುಟುಂಬ ಸಮೇತ ಕುಳಿತು ನೋಡಬಹುದು’ ಎಂದಿದ್ದಾರೆ ನಿರ್ಮಾಪಕ ಕಾಶಿನಾಥ್ ಡಿ. ಮಡಿವಾಳರ್.

ಇದನ್ನೂ ಓದಿ
Image
ಶುಭಾ ಪೂಂಜಾ ಮದುವೆ ವಿಡಿಯೋ ರಿಲೀಸ್​; ಮಿಂಚಿದ ಮಂಜು ಪಾವಗಡ  
Image
ಬಿಗ್​ ಬಾಸ್​ನಲ್ಲಿ ಹೆದರಿಸೋಕೆ ಹೋಗುತ್ತಿದ್ದ ಶುಭಾ ಪೂಂಜಾ ಕೈಯಲ್ಲಿ ಈಗ ಹಾರರ್​ ಸಿನಿಮಾ
Image
ಕ್ರೈಮ್​ ರಿಪೋರ್ಟರ್​ ಶುಭಾ ಪೂಂಜಾ; ಬಿಗ್​ ಬಾಸ್​ ಬಳಿಕ ‘ರೈಮ್ಸ್​’ ಹೇಳಲು ಹೊಸ ಅವತಾರ
Image
ಚಿತ್ರರಂಗದಲ್ಲಿ 17 ವರ್ಷ ಕಳೆದ ಶುಭಾ ಪೂಂಜಾಗೆ ಈ ಗತಿಯೇ; ಮರುಗಿದ ಮಂಜು

ಈ ತಂಡದ ಜೊತೆ ಕೆಲಸ ಮಾಡಿದ್ದಕ್ಕೆ ಶುಭಾ ಪೂಂಜಾ ಅವರಿಗೆ ಖುಷಿ ಇದೆ. ‘ನಿರ್ದೇಶಕ ಶ್ರೀನಿ ಅವರ ಜೊತೆ ಈ ಹಿಂದೆ ಕೂಡ ನಾನು ಕೆಲಸ ಮಾಡಿದ್ದೆ. ಈ ಬಾರಿ ಕ್ರೈಂ ಥ್ರಿಲ್ಲರ್ ಮತ್ತು ಹಾರರ್ ಕಥಾಹಂದರದ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ನನ್ನದು ಕ್ರೈಂ ರಿಪೋರ್ಟರ್ ಪಾತ್ರ’ ಎಂದಿದ್ದಾರೆ ಶುಭಾ ಪೂಂಜಾ. ಬಹುತೇಕ ಚಿತ್ರೀಕರಣವನ್ನು ರಾತ್ರಿಯೇ ಮಾಡಲಾಗಿದೆ.

(ಅಂಬುಜ ಸಿನಿಮಾ ತಂಡ)

ನಟಿ ರಜಿನಿ ಅವರಿಗೆ ಈ ಸಿನಿಮಾದಲ್ಲಿ ಒಂದು ವಿಶೇಷವಾದ ಪಾತ್ರವಿದೆ. ಲಂಬಾಣಿ ಮಹಿಳೆಯ ಗೆಟಪ್​ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಟೀಸರ್​ ಬಿಡುಗಡೆ ಕಾರ್ಯಕ್ರಮಕ್ಕೂ ಅವರು ಅದೇ ವೇಷ ಧರಿಸಿ ಬಂದಿದ್ದು ವಿಶೇಷವಾಗಿತ್ತು. ‘ಲಂಬಾಣಿ ಮಹಿಳೆಯ ಪಾತ್ರ ಅಂದಾಗ ನನಗೆ ಬಹಳ ಖುಷಿ ಆಯ್ತು. ಮೊದಲ ದಿನ ಲಂಬಾಣಿ ವೇಷ ಹಾಕಿಕೊಂಡಾಗ ತಲೆ ಎಲ್ಲ ತುಂಬಾ ನೋವಾಗುತ್ತಿತ್ತು. ನಂತರ ಅಡ್ಜೆಸ್ಟ್​ ಆಯ್ತು. ಚಿತ್ರದಲ್ಲಿ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ’ ಎಂದು ರಜನಿ ಹೇಳಿದ್ದಾರೆ. ಅವರ ಮಗಳ ಪಾತ್ರದಲ್ಲಿ ಬೇಬಿ ಆಕಾಂಕ್ಷಾ ನಟಿಸಿದ್ದಾಳೆ.

ಎಸ್.ಕೆ. ಸಿನಿಮಾಸ್ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ವಿಜಯ್ ಎಂ. ಕುಮಾರ್ ಸಂಕಲನ, ಮುರಳೀಧರ್ ಎಂ. ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್. ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಪದ್ಮಜಾ ರಾವ್, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ, ಪ್ರಿಯಾಂಕಾ ಕಾಮತ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ