AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಋಣ ಮರೆಯಲ್ಲ’: ‘ಟಾಕ್ಸಿಕ್’ ಕೈಹಿಡಿದ ಕನ್ನಡಿಗರಿಗೆ ಯಶ್ ಧನ್ಯವಾದ

ಸಿನಿಮಾದ ಅಂತರಾಷ್ಟ್ರೀಯ ಟ್ರೈಲರ್ ಮತ್ತು ಭಾರತೀಯ ಪ್ರೇಕ್ಷಕರಿಗಾಗಿ ಒಂದು ವಿಶೇಷ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತು. ನಟ ಯಶ್ ಸೇರಿದಂತೆ ಸಿನಿಮಾದ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಯಶ್, ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ ಬೇರೆ ಕೆಲವು ವಿಷಯಗಳನ್ನು ಸಹ ಪರೋಕ್ಷವಾಗಿ ಹಂಚಿಕೊಂಡರು. ವಿಶೇಷವಾಗಿ ಹೆಸರು ಹೇಳದೆ ‘ಟಾಕ್ಸಿಕ್’ ಬಗ್ಗೆ ಯಶ್ ಮಾತನಾಡಿದರು.

‘ಋಣ ಮರೆಯಲ್ಲ’: ‘ಟಾಕ್ಸಿಕ್’ ಕೈಹಿಡಿದ ಕನ್ನಡಿಗರಿಗೆ ಯಶ್ ಧನ್ಯವಾದ
Yash Toxic
ಮಂಜುನಾಥ ಸಿ.
|

Updated on: Oct 15, 2026 | 10:42 PM

Share

ಮುಖ್ಯಾಂಶಗಳು

  • ‘ಟಾಕ್ಸಿಕ್’ ಬಗ್ಗೆ ನಟ ಯಶ್ ಮಾತು
  • ಪರೋಕ್ಷವಾಗಿ ಟಾಕ್ಸಿಕ್ ಬಗ್ಗೆ ಮಾತನಾಡಿದ ಯಸ್
  • ಋಣ ತೀರಿಸೋಕೆ ಆಗಲ್ಲ ಎಂದಿದ್ಯಾಕೆ ಯಶ್

ಯಶ್, ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ, ನಟಿಯರು ಒಟ್ಟಿಗೆ ನಟನೆ ಮಾಡಿರುವ ‘ರಾಮಾಯಣ’ ಸಿನಿಮಾದ ಟ್ರೈಲರ್ ಇಂದು (ಅಕ್ಟೋಬರ್ 15) ಬೆಂಗಳೂರಿನಲ್ಲಿ ರಿಲೀಸ್ ಆಯ್ತು. ಸಿನಿಮಾದ ಅಂತರಾಷ್ಟ್ರೀಯ ಟ್ರೈಲರ್ ಮತ್ತು ಭಾರತೀಯ ಪ್ರೇಕ್ಷಕರಿಗಾಗಿ ಒಂದು ವಿಶೇಷ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತು. ನಟ ಯಶ್ ಸೇರಿದಂತೆ ಸಿನಿಮಾದ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಯಶ್, ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ ಬೇರೆ ಕೆಲವು ವಿಷಯಗಳನ್ನು ಸಹ ಪರೋಕ್ಷವಾಗಿ ಹಂಚಿಕೊಂಡರು.

‘ರಾಮಾಯಣ’ ಸಿನಿಮಾದ ಮಹತ್ವ, ಬೃಹತ್ತತೆ, ಸಿನಿಮಾಕ್ಕಾಗಿ ಹಾಕಿರುವ ಶ್ರಮ, ಸಹ ಕಲಾವಿದರ ಪ್ರತಿಭೆ, ವ್ಯಕ್ತಿತ್ವ ಇನ್ನೂ ಹಲವಾರು ವಿಷಯಗಳನ್ನು ಮಾತನಾಡಿದ ನಟ ಯಶ್, ‘ಉದ್ದೇಶ ಒಳ್ಳೆಯದಿದ್ದಾಗ ಎಲ್ಲರೂ ಬೆಂಬಲಿಸಬೇಕು, ಅದನ್ನು ಬಿಟ್ಟು ಕೊಂಕು ಹುಡುಕುತ್ತಾ ಕೂಡಬಾರದು’ ಎಂದರು. ಸಿನಿಮಾದ ಬಗ್ಗೆ ಸಾಕಷ್ಟು ಮಾತನಾಡಿದ ನಟ ಯಶ್, ಭಾಷಣದ ಅಂತ್ಯದಲ್ಲಿ ಕನ್ನಡ ಚಿತ್ರರಂಗದ ಬಗ್ಗೆಯೂ ಮಾತನಾಡಿದರು. ಈ ವೇಳೆ ತಮ್ಮ ಹಿಂದಿನ ಸಿನಿಮಾಕ್ಕೆ ಬೆಂಬಲ ನೀಡಿದ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದರು.

‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಮಾತನಾಡಿದ ಯಶ್, ‘ಪ್ರೇಮದ ಊರಲಿ’ ಹೆಸರಿನ ಸಿನಿಮಾಕ್ಕೆ ಕನ್ನಡಿಗರು ಅದ್ಭುತವಾದ ಗೆಲುವು ಕೊಟ್ಟಿದ್ದಾರೆ. ನನಗೆ ಬಹಳ ಖುಷಿ ಆಯಿತು. ಒಂದು ಚಿತ್ರರಂಗಕ್ಕೆ ಎರಡೂ ಇರಬೇಕು, ಅವಕಾಶ ಸಿಕ್ಕಾಗ ಹೊರಗೆ ಹೋಗಿ ಗಡಿಗಳನ್ನು ಒಡೆಯುವ ಕೆಲಸ ಮಾಡಬೇಕು ಅದೇ ಸಮಯದಲ್ಲಿ ನಮ್ಮ ಬೇರನ್ನು ಸಹ ನಾವು ಗಟ್ಟಿ ಮಾಡಿಕೊಳ್ಳಬೇಕು. ಇಂಥಹಾ ಸಣ್ಣ ಬಜೆಟ್ ಸಿನಿಮಾಗಳು ಬಂದು ಗೆಲ್ಲಬೇಕು, ಹೊಸ ನಾಯಕ, ನಾಯಕಿ ನಿರ್ದೇಶಕರುಗಳು ಬರುತ್ತಿರಬೇಕು’ ಎಂದರು.

ಇದನ್ನು ಓದಿ:ಬೆಂಗಳೂರಿನಲ್ಲಿ ‘ರಾಮಾಯಣ’ ಈವೆಂಟ್; ‘ಟಾಕ್ಸಿಕ್’ ಬಗ್ಗೆ ಮೌನ ಮುರಿಯುತ್ತಾರಾ ಯಶ್?

ಇದೇ ಸಮಯದಲ್ಲಿ ಹೆಸರು ಹೇಳದೆ ‘ಟಾಕ್ಸಿಕ್’ ಬಗ್ಗೆ ಮಾತನಾಡಿದ ಯಶ್, ‘ಎಲ್ಲವನ್ನೂ ನಾನು ಗಮನಿಸಿದ್ದೀನಿ. ಯಾವ ಮಟ್ಟಿಗೆ ನೀವೆಲ್ಲ ಪ್ರೀತಿ ತೋರಿಸಿದಿರಿ, ಯಾವ ಮಟ್ಟಿಗೆ ನೀವೆಲ್ಲ ಹೋರಾಡಿದಿರಿ. ಇಷ್ಟಾದರೂ ಆ ಸಿನಿಮಾ ಅನ್ನು ನೀವೆಲ್ಲ ಹೋಗಿ ನೋಡಿ ಗೆಲ್ಲಿಸಿದಿರಿ, ಕಲೆಕ್ಷನ್ ಕೊಟ್ಟಿದ್ದೀರಿ. ನಿಮಗೆ ಒಂದೇ ಹೇಳಬಲ್ಲೆ. ನಿಮ್ಮ ಈ ಋಣ ನಾನು ತೀರಿಸೋಕೆ ಆಗಲ್ಲ, ನೀವು ಕೊಟ್ಟಿರುವ ಜವಾಬ್ದಾರಿಯನ್ನು ಅದ್ಭುತವಾಗಿ ಮಾಡೋ ಪ್ರಯತ್ನ ಮಾಡುತ್ತೇನೆ’ ಎಂದರು ನಟ ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ