AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್’ ಬಗ್ಗೆ ಕೊನೆಗೂ ಮಾತನಾಡಿದ ಶಾರುಖ್ ಖಾನ್

ಬಾಲಿವುಡ್​​ನ ಕೆಲ ಸೆಲೆಬ್ರಿಟಿಗಳು ಬಹಿರಂಗವಾಗಿ ಸಿನಿಮಾದ ಸಬ್ಜೆಕ್ಟ್​​ಗೆ ವಿರೋಧವನ್ನೂ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ‘ಧುರಂಧರ್’ ಸಿನಿಮಾದ ಬಗ್ಗೆ ಖಾನ್​​ಗಳ ಮೌನವನ್ನು ಪ್ರಶ್ನೆ ಮಾಡಲಾಗಿತ್ತು. ಆ ಬಳಿಕ ಆಮಿರ್ ಖಾನ್ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅಧಿಕೃತವಾಗಿ ಮಾತನಾಡಿರಲಿಲ್ಲ. ಇದೀಗ ಕೊನೆಗೂ ಶಾರುಖ್ ಖಾನ್ ‘ಧುರಂಧರ್’ ಬಗ್ಗೆ ಮಾತನಾಡಿದ್ದಾರೆ.

‘ಧುರಂಧರ್’ ಬಗ್ಗೆ ಕೊನೆಗೂ ಮಾತನಾಡಿದ ಶಾರುಖ್ ಖಾನ್
Shah Rukh Khan Dhurandhar
ಮಂಜುನಾಥ ಸಿ.
|

Updated on: Sep 15, 2026 | 6:58 PM

Share

ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ದೇಶದಾದ್ಯಂತ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಖುದ್ದು ಪ್ರಧಾನಿ ಮೋದಿ ಅವರು ಸಹ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಆ ಸಿನಿಮಾಕ್ಕೆ ಬಾಲಿವುಡ್​​ನಿಂದ ಬೆಂಬಲ ವ್ಯಕ್ತವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಬಾಲಿವುಡ್​​ನ ಕೆಲ ಸೆಲೆಬ್ರಿಟಿಗಳು ಬಹಿರಂಗವಾಗಿ ಸಿನಿಮಾದ ಸಬ್ಜೆಕ್ಟ್​​ಗೆ ವಿರೋಧವನ್ನೂ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ‘ಧುರಂಧರ್’ ಸಿನಿಮಾದ ಬಗ್ಗೆ ಖಾನ್​​ಗಳ ಮೌನವನ್ನು ಪ್ರಶ್ನೆ ಮಾಡಲಾಗಿತ್ತು. ಆ ಬಳಿಕ ಆಮಿರ್ ಖಾನ್ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅಧಿಕೃತವಾಗಿ ಮಾತನಾಡಿರಲಿಲ್ಲ. ಇದೀಗ ಕೊನೆಗೂ ಶಾರುಖ್ ಖಾನ್ ‘ಧುರಂಧರ್’ ಬಗ್ಗೆ ಮಾತನಾಡಿದ್ದಾರೆ.

ಗಣೇಶ ಚತುರ್ಥಿಯಂದು ತಮ್ಮ ಅಭಿಮಾನಿಗಳಿಗೆ ಶುಭಕೋರಲು ಶಾರುಖ್ ಖಾನ್ ಟ್ವಿಟರ್​​ನಲ್ಲಿ ‘#AskSRK’ ಹೆಸರಿನಲ್ಲಿ ಅಭಿಮಾನಿಗಳೊಟ್ಟಿಗೆ ಸಂವಾದ ನಡೆಸಿದ್ದರು. ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಶಾರುಖ್ ಖಾನ್ ಅವರಿಗೆ ಕೇಳಿದರು. ‘ಕಿಂಗ್’ ಚಿತ್ರದ ಬಗ್ಗೆ ಸೇರಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಜೊತೆಗೆ ‘ಧುರಂಧರ್’ ಸಿನಿಮಾದ ಬಗ್ಗೆಯೂ ಪ್ರಶ್ನೆ ಶಾರುಖ್ ಖಾನ್ ಅವರಿಗೆ ಎದುರಾಯ್ತು.

ಅಭಿಮಾನಿಯೊಬ್ಬ, ‘ನೀವು ಧುರಂಧರ್ ನೋಡಿದ್ದೀರಾ? ಎಂದು ಕೇಳಿದರು, ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ ಶಾರುಖ್ ಖಾನ್, ‘ಎರಡೂ ಭಾಗಗಳು ತುಂಬಾ ಇಷ್ಟವಾಯಿತು. ಇಡೀ ತಂಡದಿಂದ ಅದ್ಭುತವಾದ ಕೆಲಸ’ ಎಂದರು. ಶಾರುಖ್ ಖಾನ್, ಇದೇ ಮೊದಲ ಬಾರಿಗೆ ಅಧಿಕೃತವಾಗಿ ‘ಧುರಂಧರ್’ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ವೀಕ್ಷಿಸಿ ಯಶ್ ತಾಕತ್ತು ಮೆಚ್ಚಿಕೊಂಡ ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ 

ದೆಹಲಿ ಸಿನಿಮೋತ್ಸವದಲ್ಲಿ ಮಾತನಾಡಿದ್ದ ಆಮಿರ್ ಖಾನ್ ಸಹ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾ ತಂಡದ ಶ್ರಮವನ್ನು ಕೊಂಡಾಡಿದ್ದರು. ಆದರೆ ಸಲ್ಮಾನ್ ಖಾನ್ ಈ ವರೆಗೆ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಬಗ್ಗೆ ಅಧಿಕೃತವಾಗಿ ಮೆಚ್ಚುಗೆಯಾಗಲಿ ಅಥವಾ ವಿಮರ್ಶೆಯನ್ನಾಗಲಿ ಮಾಡಿಲ್ಲ.

ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್’ ಸಿನಿಮಾನಲ್ಲಿ ರಣ್​ವೀರ್ ಸಿಂಗ್ ಗೂಢಚಾರನ ಪಾತ್ರದಲ್ಲಿ ನಟಿಸಿದ್ದಾರೆ. ಈ ವರೆಗೆ ಭಾರತದಲ್ಲಿ ಬಂದಿರುವ ಎಲ್ಲ ಗೂಢಚಾರ ಸಿನಿಮಾಗಳ ಪೈಜೆ ಹೆಚ್ಚು ನೈಜತೆಯನ್ನು ಒಳಗೊಂಡಿರುವ ‘ಧುರಂಧರ್’ ಸಿನಿಮಾ ಸಹಜವಾಗಿಯೇ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದೆ. ಕಲೆಕ್ಷನ್​​ನಲ್ಲಿ ಹಲವು ದಾಖಲೆಗಳನ್ನು ಈ ಸಿನಿಮಾ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್
ರಮೇಶ್​​ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲೂ ಯತ್ನ: ಕುಮಾರಸ್ವಾಮಿ
ರಮೇಶ್​​ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲೂ ಯತ್ನ: ಕುಮಾರಸ್ವಾಮಿ
"ನಮ್ಮ ಕುಟುಂಬದ ಧ್ವನಿ ಅಡಗಿಸಲು ಸಾಧ್ಯವಿಲ್ಲ": ಕುಮಾರಸ್ವಾಮಿ
ಅಲ್ಲೋಲ ಕಲ್ಲೋಲ ಹೇಳಿಕೆ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಹೆಚ್​​ಡಿಕೆ
ಅಲ್ಲೋಲ ಕಲ್ಲೋಲ ಹೇಳಿಕೆ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಹೆಚ್​​ಡಿಕೆ
ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ‘ಇಂಜಿನಿಯರ್ಸ್​ ಡೇ’: ಡಿಕೆಶಿ ಘೋಷಣೆ
ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ‘ಇಂಜಿನಿಯರ್ಸ್​ ಡೇ’: ಡಿಕೆಶಿ ಘೋಷಣೆ