Sunny Leone Birthday: ಸನ್ನಿ ಲಿಯೋನ್ ನೀಲಿಚಿತ್ರ ಲೋಕಕ್ಕೆ ಬಂದಿದ್ದು ಏಕೆ? ಅವರು ನಟಿಸಿದ್ದು ಒಬ್ಬ ಹೀರೋ ಜೊತೆ ಮಾತ್ರ

ಸನ್ನಿ ಲಿಯೋನ್ ಜನಿಸಿದ್ದು 1981ರಲ್ಲಿ. ಅವರಿಗೆ ಹಣದ ಕೊರತೆ ಇತ್ತು. ಈ ವೇಳೆ ಅವರಿಗೆ ಮ್ಯಾಗಜಿನ್ ಒಂದರಲ್ಲಿ ಮಾಡೆಲ್ ಆಗಲು ಅವಕಾಶ ಸಿಕ್ಕಿತು. ಅದು ಅಡಲ್ಟ್ ಮ್ಯಾಗಜಿನ್ ಆಗಿತ್ತು.

Sunny Leone Birthday: ಸನ್ನಿ ಲಿಯೋನ್ ನೀಲಿಚಿತ್ರ ಲೋಕಕ್ಕೆ ಬಂದಿದ್ದು ಏಕೆ? ಅವರು ನಟಿಸಿದ್ದು ಒಬ್ಬ ಹೀರೋ ಜೊತೆ ಮಾತ್ರ
ಸನ್ನಿ
Follow us
ರಾಜೇಶ್ ದುಗ್ಗುಮನೆ
|

Updated on:May 13, 2023 | 7:15 AM

ನಟಿ ಸನ್ನಿ ಲಿಯೋನ್ (Sunny Leone) ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ಒಂದು ದಶಕದಿಂದ ಅವರು ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕನ್ನಡದಲ್ಲೂ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಂದು (ಮೇ 13) ಸನ್ನಿ ಲಿಯೋನ್​ ಬರ್ತ್​ಡೇ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ. ಅವರ ಅಭಿಮಾನಿಗಳು ಸನ್ನಿಗೆ ವಿಶ್ ತಿಳಿಸುತ್ತಿದ್ದಾರೆ. ಸನ್ನಿ ಅಭಿಮಾನಿಗಳು ವಿಶ್ವಾದ್ಯಂತ ಇದ್ದಾರೆ. ಅವರು ಈ ಮೊದಲು ನೀಲಿ ಸಿನಿಮಾ ಲೋಕದಲ್ಲಿ ಬ್ಯುಸಿ ಇದ್ದರು. ನಂತರ ಅದನ್ನು ತೊರೆದು ಬಾಲಿವುಡ್​ಗೆ ಬಂದರು.

ಸನ್ನಿ ಲಿಯೋನ್ ಜನಿಸಿದ್ದು 1981ರಲ್ಲಿ. ಕೆನಡಾದ ಸಿಖ್ ಕುಟುಂಬದಲ್ಲಿ ಅವರು ಜನಿಸಿದರು. ಅವರ ನಿಜವಾದ ಹೆಸರ ಕರಂಜೀತ್ ಸಿಂಗ್ ಕೌರ್. ಅವರಿಗೆ 15 ವರ್ಷ ಇದ್ದಾಗ ಕ್ಯಾಲಿಫೋರ್ನಿಯಾಗೆ ಶಿಫ್ಟ್ ಆದರು. ಅವರಿಗೆ ಹಣದ ಕೊರತೆ ಇತ್ತು. ಈ ವೇಳೆ ಅವರಿಗೆ ಮ್ಯಾಗಜಿನ್ ಒಂದರಲ್ಲಿ ಮಾಡೆಲ್ ಆಗಲು ಅವಕಾಶ ಸಿಕ್ಕಿತು. ಅದು ಅಡಲ್ಟ್ ಮ್ಯಾಗಜಿನ್ ಆಗಿತ್ತು. ಈ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ.

ಸನ್ನಿ ಇದನ್ನು ಒಪ್ಪಿ ನಟಿಸಿದರು. ಆ ಬಳಿಕ ಪೋರ್ನ್​ ಇಂಡಸ್ಟ್ರಿಗೆ ತೆರೆದುಕೊಂಡರು. ಈ ವಿಚಾರ ಸಹೋದರನಿಗೆ ಗೊತ್ತಿತ್ತು. ಆತ ಸನ್ನಿಯನ್ನು ಬೆಂಬಲಿಸಿದ. ಕುಟುಂಬದವರಿಗೆ ಈ ವಿಚಾರ ಗೊತ್ತಾದಾಗ ಇದನ್ನು ಸಹಿಸಿಕೊಳ್ಳಲು ಆಗಲೇ ಇಲ್ಲ. ಸನ್ನಿ ಅಮ್ಮ ಖಿನ್ನತೆಗೆ ಒಳಗಾದರು. ಕರಂಜೀತ್ ಎಂದಿದ್ದ ಅವರ ಹೆಸರನ್ನು ಸನ್ನಿ ಎಂದು ಬದಯಾಲಿಸಿದ್ದು ಪೋರ್ನ್​ ಇಂಡಸ್ಟ್ರಿಯವರೇ.

ಅಡಲ್ಟ್ ಸ್ಟಾರ್ ಆಗಿದ್ದ ಡ್ಯಾನಿಯಲ್ ವೇಬರ್ ಜೊತೆ ಸನ್ನಿ ಲಿಯೋನ್ ತೆರೆ ಹಂಚಿಕೊಡಿದ್ದರು. ಇಬ್ಬರ ಮಧ್ಯೆ ಪ್ರೀತಿ ಹುಟ್ಟಿತು. ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೂ ಬಂದರು. ಬಳಿಕ ಸನ್ನಿ ನೀಲಿ ಚಿತ್ರದಿಂದ ಹೊರ ಬಂದರು.

ಇದನ್ನೂ ಓದಿ: Sunny Leone: ಹೊಸ ಪೋಟೋಶೂಟ್​​ನಲ್ಲಿ ನಟಿ ಸನ್ನಿಲಿಯೋನ್

ಸನ್ನಿ ಲಿಯೋನ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿ ಆದರು. ಅವರು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದಾದ ಬಳಿಕ ಅವರಿಗೆ ಚಿತ್ರರಂಗದಿಂದ ಆಫರ್ ಬಂತು. ಅಲ್ಲಿಯೂ ನಟಿಸಿದರು. ಆ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:12 am, Sat, 13 May 23