Bigg Boss: ನಿಜವಾಗಲೂ ನಾಚಿಕೆ ಆಗುತ್ತಿದೆ ಎಂದು ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಕೆಪಿನ ತಬ್ಬಿದ ದಿವ್ಯಾ ಉರುಡುಗ

Aravind KP: ಕೊನೆಯ ವಾರದಲ್ಲಿ ಸ್ಪರ್ಧಿಗಳಿಗೆ ಒಂದೊಂದು ಆಸೆಯನ್ನು ಈಡೇರಿಸುವುದಾಗಿ ಬಿಗ್ ಬಾಸ್ ಹೇಳಿದ್ದರು. ಈ ವೇಳೆ ದಿವ್ಯಾ ಉರುಡುಗ, ‘ಅರವಿಂದ್ ಮನೆ ಒಳಗೆ ಬರಲಿ’ ಎಂದು ಕೋರಿಕೊಂಡಿದ್ದರು.

Bigg Boss: ನಿಜವಾಗಲೂ ನಾಚಿಕೆ ಆಗುತ್ತಿದೆ ಎಂದು ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಕೆಪಿನ ತಬ್ಬಿದ ದಿವ್ಯಾ ಉರುಡುಗ
Edited By:

Updated on: Dec 28, 2022 | 11:08 AM

ಬಿಗ್ ಬಾಸ್ (Bigg Boss) ಫಿನಾಲೆ ವೀಕ್​​ನಲ್ಲಿ ಐದು ಸ್ಪರ್ಧಿಗಳಿದ್ದಾರೆ. ಐವರೂ ಟಫ್​ ಕಾಂಪಿಟೇಟರ್ ಆಗಿರುವುದರಿಂದ ಕಪ್ ಯಾರು ಗೆಲ್ಲುತ್ತಾರೆ ಎಂಬುದನ್ನು ಊಹೆ ಮಾಡುವುದು ಕಷ್ಟವೇ. ಎಲ್ಲಾ ಸ್ಪರ್ಧಿಗಳಿಗೆ ಒಂದು ಅಂಜಿಕೆ ಅಂತೂ ಇದ್ದೇ ಇದೆ. ಇದನ್ನು ಮರೆಸಲು ಬಿಗ್ ಬಾಸ್ ಸರ್​ಪ್ರೈಸ್ ನೀಡುತ್ತಿದ್ದಾರೆ. ಸ್ಪರ್ಧಿಗಳ ಕೋರಿಕೆಯನ್ನು ಬಿಗ್ ಬಾಸ್ ಈಡೇರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದಿವ್ಯಾ ಉರುಡುಗ (Divya Uruduga) ಕೋರಿಕೆಯಂತೆ ಅರವಿಂದ್ ಕೆ.ಪಿ. ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರನ್ನು ದಿವ್ಯಾ ಉರುಡುಗ ತಬ್ಬಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಮಧ್ಯೆ ಬಾಂಧವ್ಯ ಬೆಳೆಯಿತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಇದನ್ನು ಅವರು ಅನೇಕ ಬಾರಿ ಪರೋಕ್ಷವಾಗಿ ಹೇಳಿಕೊಂಡಿದ್ದಿದೆ. ಈಗ ‘ಬಿಗ್ ಬಾಸ್ ಸೀಸನ್ 9’ರಲ್ಲಿ ದಿವ್ಯಾ ಏಕಾಂಗಿಯಾಗಿದ್ದರು. ಅರವಿಂದ್ ಇಲ್ಲದೆ ದಿವ್ಯಾ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಕೊನೆಯ ವಾರದಲ್ಲಿ ಸ್ಪರ್ಧಿಗಳಿಗೆ ಒಂದೊಂದು ಆಸೆಯನ್ನು ಈಡೇರಿಸುವುದಾಗಿ ಬಿಗ್ ಬಾಸ್ ಹೇಳಿದ್ದರು. ಈ ವೇಳೆ ದಿವ್ಯಾ ಉರುಡುಗ, ‘ಅರವಿಂದ್ ಮನೆ ಒಳಗೆ ಬರಲಿ’ ಎಂದು ಕೋರಿಕೊಂಡಿದ್ದರು. ರೂಪೇಶ್ ಅಡಿಗ ಅವರು, ‘ಹುಲಿ ಕುಣಿತ ನೋಡಬೇಕು’ ಎಂದು ಹೇಳಿದ್ದರು. ಎರಡೂ ಆಸೆ ಈಡೇರಿದೆ.

ಇದನ್ನೂ ಓದಿ
Bigg Boss Kannada: ‘ಆರ್ಯವರ್ಧನ್ ಬದಲು ದಿವ್ಯಾ ಉರುಡುಗ ಹೋಗಬೇಕಿತ್ತು’; ಮಿಡ್​ವೀಕ್ ಎಲಿಮಿನೇಷನ್ ಬಗ್ಗೆ ಫ್ಯಾನ್ಸ್ ರಿಯಾಕ್ಷನ್
Aryavardhan Guruji: ದಿವ್ಯಾ ಉರುಡುಗಗಿಂತ ಆರ್ಯವರ್ಧನ್ ಕಡಿಮೆ ವೋಟ್ ಪಡೆದಿದ್ದು ಹೇಗೆ? ಇಲ್ಲಿದೆ ಉತ್ತರ
BBK 9: ಬಿಗ್ ಬಾಸ್ ಮನೆಯಲ್ಲಿ ನಡೆಯಿತು ಮಿಡ್​ವೀಕ್​ ಎಲಿಮಿನೇಷನ್; ಮನೆಯಿಂದ ಹೊರ ಹೋಗಿದ್ಯಾರು?
Roopesh Shetty: ಫಿನಾಲೆ ವೀಕ್​​ನ ಮೊದಲ ದಿನವೇ ರೂಪೇಶ್ ಶೆಟ್ಟಿಗೆ ಸರ್​ಪ್ರೈಸ್ ನೀಡಿದ ಬಿಗ್ ಬಾಸ್

ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಮೊದಲು ಹುಲಿ ವೇಷ ಧರಿಸಿದವರು ಬಿಗ್ ಬಾಸ್ ಒಳಗೆ ಬಂದಿದ್ದಾರೆ. ಆ ಬಳಿಕ ಅರವಿಂದ್ ಕೆ.ಪಿ. ಅವರು ಹುಲಿಯ ಮುಖವಾಡ ಹಾಕಿ ಮನೆ ಪ್ರವೇಶ ಮಾಡಿದ್ದಾರೆ. ಮನೆ ಒಳಗೆ ಕುಳಿತಿದ್ದ ದಿವ್ಯಾಗೆ ಸರ್​ಪ್ರೈಸ್ ನೀಡಿದ್ದಾರೆ. ಇದನ್ನು ಕಂಡು ದಿವ್ಯಾ ಎಗ್ಸೈಟ್ ಆಗಿದ್ದಾರೆ. ಒಂದು ಕ್ಷಣ ಅವರಿಗೆ ಮಾತೇ ಹೊರಡಲಿಲ್ಲ.

ಇದನ್ನೂ ಓದಿ: ಫಿನಾಲೆ ವೀಕ್​​ನ ಮೊದಲ ದಿನವೇ ರೂಪೇಶ್ ಶೆಟ್ಟಿಗೆ ಸರ್​ಪ್ರೈಸ್ ನೀಡಿದ ಬಿಗ್ ಬಾಸ್

ಅರವಿಂದ್​​ಗೋಸ್ಕರ ದಿವ್ಯಾ ಹಾಡೊಂದನ್ನು ಬರೆದಿದ್ದರು. ಈ ಹಾಡನ್ನು ಹೇಳುವಾಗ ದಿವ್ಯಾಗೆ ನಾಚಿಕೆ ಆಗಿದೆ. ‘ನನಗೆ ನಿಜಕ್ಕೂ ನಾಚಿಕೆ ಆಗುತ್ತಿದೆ’ ಎಂದು ಅರವಿಂದ್ ಕೆಪಿಯನ್ನು ತಬ್ಬಿದ್ದಾರೆ. ಸದ್ಯ ಈ ಪ್ರೋಮೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:51 am, Wed, 28 December 22