ಕ್ಯಾಪ್ಟನ್ ಸಂಗೀತಾಗೆ ಜೈಕಾರ ಹಾಕಿದ ಮನೆ ಮಂದಿ: ಪೆಚ್ಚಾದ ಕಿರಣ್
ಮೊದಲಿಗೆ ಹಲವರನ್ನು ಎದುರಿಸಿ ಆಟ ಆಡಿ ಕ್ಯಾಪ್ಟನ್ ಆಗಬೇಕು, ಅದಾದ ಮೇಲೆ ಇಡೀ ಮನೆಯನ್ನು ಸ್ವಚ್ಛವಾಗಿಡುವ, ಸದಸ್ಯರೆಲ್ಲರೂ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳುವ, ಮನೆಯ ಊಟ, ತಿಂಡಿ ಇನ್ನಿತರೆ ವಿಷಯಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲೆ ಇರುತ್ತದೆ. ಇದನ್ನೆಲ್ಲ ನಿಭಾಯಿಸುವುದು ಸುಲಭವಲ್ಲ. ಹೀಗಿರುವಾಗ ಮನೆ ಮಂದಿ ಕ್ಯಾಪ್ಟನ್ ಸಂಗೀತಾಗೆ ಜಯಕಾರ ಹಾಕಿದ್ದಾರೆ.

ಮುಖ್ಯಾಂಶಗಳು
- ಬಿಗ್ಬಾಸ್ ಕನ್ನಡ ಸೀಸನ್ 13 ಹೊಸ ಎಪಿಸೋಡ್
- ಸಂಗೀತಾ ಭಟ್ ಅವರು ಮನೆಯ ಕ್ಯಾಪ್ಟನ್ ಆಗಿದ್ದಾರೆ.
- ಮನೆಯ ಕೆಲ ಸದಸ್ಯರು ಸಂಗೀತಾಗೆ ಜಯಭೇರಿ ಹಾಕಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ ಸ್ಥಾನಕ್ಕೆ ವಿಶೇಷ ಗೌರವ ಇದೆ. ಕ್ಯಾಪ್ಟನ್ಗೆ ಬಿಗ್ಬಾಸ್ ವಿಶೇಷ ಕೊಠಡಿ ನೀಡುವ ಜೊತೆಗೆ ಕೆಲವು ವಿಶೇಷ ಅಧಿಕಾರಿ, ನಾಮಿನೇಷನ್ನಿಂದ ಮುಕ್ತಿ ಇನ್ನೂ ಕೆಲವು ಅಧಿಕಾರಗಳನ್ನು ಸಹ ಕೊಡುತ್ತಾರೆ. ಆದರೆ ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಅಷ್ಟೇ ತಲೆನೋವಿನ ವಿಚಾರವೂ ಹೌದು. ಮೊದಲಿಗೆ ಹಲವರನ್ನು ಎದುರಿಸಿ ಆಟ ಆಡಿ ಕ್ಯಾಪ್ಟನ್ ಆಗಬೇಕು, ಅದಾದ ಮೇಲೆ ಇಡೀ ಮನೆಯನ್ನು ಸ್ವಚ್ಛವಾಗಿಡುವ, ಸದಸ್ಯರೆಲ್ಲರೂ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳುವ, ಮನೆಯ ಊಟ, ತಿಂಡಿ ಇನ್ನಿತರೆ ವಿಷಯಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲೆ ಇರುತ್ತದೆ. ಇದನ್ನೆಲ್ಲ ನಿಭಾಯಿಸುವುದು ಸುಲಭವಲ್ಲ.
ಈ ವಾರ ಬಿಗ್ಬಾಸ್ ಮನೆಯಲ್ಲಿ ಸಂಗೀತಾ ಕ್ಯಾಪ್ಟನ್ ಆಗಿದ್ದಾರೆ. ಮೃದು ಸ್ವಭಾವದ ಸಂಗೀತಾ ಅವರು ಕ್ಯಾಪ್ಟನ್ ಆಗಿ ಬಹಳ ತಲೆ ನೋವು ಅನುಭವಿಸುತ್ತಿದ್ದಾರೆ. ಲಿಖಿತ್, ಕಿರಣ್ ಇನ್ನಿತರರು ನಿಯಮಗಳನ್ನು ಮುರಿಯುತ್ತಲೇ ಇದ್ದಾರೆ. ಕಿರಣ್ ಅಂತೂ ಪದೇ ಪದೇ ನಿಯಮಗಳನ್ನು ಮುರಿಯುತ್ತಲೇ ಇರುತ್ತಾರೆ. ಇದರಿಂದ ಬಿಗ್ಬಾಸ್, ಇಡೀ ಮನೆ ಮಂದಿಗೆ ಶಿಕ್ಷೆ ಕೊಡುವುದೂ ನಡೆದಿದ್ದಿದೆ. ಶುಕ್ರವಾರದ ಎಪಿಸೋಡಿನಲ್ಲಿ ಕಿರಣ್, ದಿನದ ಸಮಯದಲ್ಲಿಯೇ ನಿದ್ದೆ ಮಾಡಿದ್ದರು. ಒಮ್ಮೆ ಅಲ್ಲದೆ ಎರಡು ಬಾರಿ ನಿದ್ದೆ ಮಾಡಿ ಸಿಕ್ಕಿ ಹಾಕಿಕೊಂಡರು.
ಇದರಿಂದ ರೋಸಿ ಹೋದ ಕ್ಯಾಪ್ಟನ್ ಸಂಗೀತಾ, ಕಿರಣ್ ಗೆ ಶಿಕ್ಷೆ ಘೋಷಿಸಿದರು. ಕಿರಣ್ ಅನ್ನು ಬಟ್ಟೆಯ ಸಮೇತ ಸ್ವಿಮ್ಮಿಂಗ್ ಪೂಲ್ಗೆ ಹಾಕಬೇಕು ಎಂದರು. ಆದರೆ ಕಿರಣ್ಗೆ ಇದು ಸ್ವಲ್ಪವೂ ಇಷ್ಟವಾಗಲಿಲ್ಲ. ಕಿರಣ್ ಅನ್ನು ಸ್ವಿಮ್ಮಿಂಗ್ ಪೂಲ್ಗೆ ತಳ್ಳಲು ಬಂದ ಜಗ್ಗಿ, ಮಂಜ, ಧನುಶ್, ಲಿಖಿತ್ ಮೇಲೆ ಜಗಳ ಮಾಡಿದ. ಆದರೂ ಬಲ ಪ್ರಯೋಗಿಸಿ ಎಲ್ಲರೂ ಸೇರಿ ಕಿರಣ್ ಅನ್ನು ಸ್ವಿಮ್ಮಿಂಗ್ ಪೂಲ್ಗೆ ಹಾಕಿದರು.
ಇದನ್ನೂ ಓದಿ:ಇನ್ಸ್ಟಾಗ್ರಾಂನಲ್ಲಿ ಕ್ಯೂಟ್ ವಿಡಿಯೋ ಹಂಚಿಕೊಂಡ ಮಾಜಿ ಬಿಗ್ಬಾಸ್ ಸ್ಪರ್ಧಿ ರಾಶಿಕಾ
ಆ ಬಳಿಕ ಮಂಜ ಹಾಗೂ ಇನ್ನಿತರರು ಕ್ಯಾಪ್ಟನ್ ಸಂಗೀತಾಗೆ ಜಯಕಾರಗಳನ್ನು ಹಾಕಿದರು. ಕಿರಣ್ ಪದೇ ಪದೇ ತಪ್ಪು ಮಾಡುತ್ತಲೇ ಇದ್ದರೂ ಅವನಿಗೆ ಶಿಕ್ಷೆ ನೀಡಿರಲಿಲ್ಲ. ಈಗ ಧೈರ್ಯ ತೋರಿ ಶಿಕ್ಷೆ ಕೊಟ್ಟಿರುವ ಕಾರಣಕ್ಕೆ ಹಾಗೂ ಆ ಮೂಲಕ ಮನೆಗೆಲ್ಲ ಆಗಬಹುದಿದ್ದ ಶಿಕ್ಷೆಯನ್ನು ತಪ್ಪಿಸಿದ್ದಕ್ಕೆ ಜಯಕಾರಗಳನ್ನು ಹಾಕಿದರು. ಇದನ್ನು ನೋಡಿದ ಕಿರಣ್ ಶಾಸ್ತ್ರಿ ಪೆಚ್ಚಾಗಿ ನಿಂತರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Fri, 25 September 26




