ಜನಪ್ರಿಯ ರಿಯಾಲಿಟಿ ಶೋನಿಂದ ಹೊರಬಂದ ಖ್ಯಾತ ನಿರೂಪಕಿ; ಕಾರಣದ ಬಗ್ಗೆ ಹರಿದಾಡಿದೆ ಗುಸುಗುಸು
Anasuya Bharadwaj | Jabardasth: ವೀಕ್ಷಕರಿಗೆ ಇಷ್ಟ ಆಗುವಂತಹ ಆ್ಯಂಕರ್ ಇದ್ದರೆ ರಿಯಾಲಿಟಿ ಶೋಗೆ ಟಿಆರ್ಪಿ ಹೆಚ್ಚುತ್ತದೆ. ಇಲ್ಲದಿದ್ದರೆ ಒಂದಷ್ಟು ಜನರು ಚಾನೆಲ್ ಚೇಂಜ್ ಮಾಡುವುದು ಗ್ಯಾರಂಟಿ.
ಖ್ಯಾತ ನಿರೂಪಕಿ ಅನಸೂಯಾ ಭಾರದ್ವಜ್ (Anasuya Bharadwaj) ಅವರ ಬಗ್ಗೆ ಬಿಸಿಬಿಸಿ ಸುದ್ದಿ ಕೇಳಿಬಂದಿದೆ. ತೆಲುಗಿನ ಬಣ್ಣದ ಲೋಕದಲ್ಲಿ ಅವರಿಗೆ ಭಾರಿ ಬೇಡಿಕೆ ಇದೆ. ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿಯೂ ಅವರು ಫೇಮಸ್ ಆಗಿದ್ದಾರೆ. ಹಲವಾರು ಟಿವಿ ಶೋಗಳನ್ನು (Reality Show) ಯಶಸ್ವಿಯಾಗಿ ನಡೆಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಅಲ್ಲದೇ ಸಿನಿಮಾದ ಅನೇಕ ವೇದಿಕೆ ಕಾರ್ಯಕ್ರಮಗಳನ್ನೂ ನಿರೂಪಿಸಿದ ಅನುಭವ ಅವರಿಗೆ ಇದೆ. ಅನಸೂಯಾ ನಡೆಸಿಕೊಡುತ್ತಿರುವ ‘ಜಬರ್ದಸ್ತ್’ (Jabardasth) ರಿಯಾಲಿಟಿ ಶೋಗೆ ತನ್ನದೇ ಆದ ವೀಕ್ಷಕರ ವರ್ಗ ಇದೆ. ಆದರೆ ಈಗ ಆ ಕಾರ್ಯಕ್ರಮದಿಂದ ಅನಸೂಯಾ ಅವರು ಹೊರಬಂದಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
ತೆಲುಗಿನ ಖಾಸಗಿ ವಾಹಿನಿಯಲ್ಲಿ ‘ಜಬರ್ದಸ್ತ್’ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಈ ಕಾಮಿಡಿ ಶೋ ನೋಡಿ ಜನರು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಕಾರಣಾಂತರಗಳಿಂದ ಅನಸೂಯಾ ಅವರು ಈ ಶೋನಿಂದ ಹೊರಬರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ಟಿಆರ್ಪಿ ಕುಸಿದಿದೆ ಎಂಬ ಮಾಹಿತಿ ಕೂಡ ಇದೆ. ಅನಸೂಯಾ ಅವರು ನಿರೂಪಕಿ ಸ್ಥಾನದಿಂದ ಕೆಳಗಿಳಿದಿರುವ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
ಕಿರುತೆರೆ ಜಗತ್ತಿನಲ್ಲಿ ಎಲ್ಲ ವಾಹಿನಿಗಳ ನಡುವೆ ತೀವ್ರ ಪೈಪೋಟಿ ಇದೆ. ವೀಕ್ಷಕರನ್ನು ಸೆಳೆಯಲು ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಧಾರಾವಾಹಿಗಳ ರೀತಿಯಲ್ಲಿ ರಿಯಾಲಿಟಿ ಶೋಗಳು ಕೂಡ ಟಿಆರ್ಪಿ ಗಿಟ್ಟಿಸಲು ವಾಹಿನಿಗಳಿಗೆ ಸಹಕಾರಿ ಆಗುತ್ತವೆ. ಆ ಶೋಗಳನ್ನು ಯಾರು ನಿರೂಪಿಸುತ್ತಾರೆ ಎಂಬುದು ಕೂಡ ಹೆಚ್ಚು ಮುಖ್ಯವಾಗುತ್ತದೆ. ವೀಕ್ಷಕರಿಗೆ ಇಷ್ಟ ಆಗುವಂತಹ ಆ್ಯಂಕರ್ ಇದ್ದರೆ ಅಂಥ ಶೋಗೆ ಟಿಆರ್ಪಿ ಹೆಚ್ಚುತ್ತದೆ. ಇಲ್ಲದಿದ್ದರೆ ಜನರು ಚಾನೆಲ್ ಚೇಂಜ್ ಮಾಡುತ್ತಾರೆ. ಈಗ ಅನಸೂಯಾ ಅವರು ‘ಜಬರ್ದಸ್ತ್’ ಶೋ ಬಿಟ್ಟು ಹೋಗಿರುವ ಸುದ್ದಿ ಹರಡಿರುವುದರಿಂದ ಒಂದು ವರ್ಗದ ವೀಕ್ಷಕರಿಗೆ ಸಹಜವಾಗಿಯೇ ಬೇಸರ ಆಗಿದೆ.
ಅನಸೂಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡ ಸಾಲುಗಳು ವೈರಲ್ ಆಗಿವೆ. ‘ವೃತ್ತಿಜೀವನದಲ್ಲಿ ಬಹುದೊಡ್ಡ ನಿರ್ಧಾರ ತೆಗೆದುಕೊಂಡೆ ಮತ್ತು ಅದನ್ನು ಇಂದು ಕಾರ್ಯರೂಪಕ್ಕೆ ತಂದಿದ್ದೇನೆ. ನನ್ನ ಜೊತೆ ಸಾಕಷ್ಟು ನೆನೆಪುಗಳನ್ನು ಕೊಂಡೊಯ್ಯುತ್ತಿದ್ದೇನೆ. ಇದರಲ್ಲಿ ಹಲವು ಒಳ್ಳೆಯ ನೆನಪು, ಕೆಲವು ಕೆಟ್ಟ ನೆನಪುಗಳು ಇವೆ. ಮುಂದೆ ಏನು ಬರಲಿದೆ ಎಂಬುದನ್ನು ಎದುರು ನೋಡುತ್ತಿದ್ದೇನೆ. ಎಂದಿನಂತೆ ನೀವು ನನ್ನ ಜೊತೆ ಬರುತ್ತೀರಿ ಅಂತ ಭರವಸೆ ಇಟ್ಟುಕೊಂಡಿದ್ದೇನೆ’ ಎಂದು ಅನಸೂಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದಾರೆ.
ಅನಸೂಯಾ ಅವರು ಬೇರೆ ವಾಹಿನಿಯ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದಾರೆ. ಆ ಕಾರಣದಿಂದಲೇ ಅವರು ‘ಜಬರ್ದಸ್ತ್’ ಶೋಗೆ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದ ನಟಿ ರೋಜಾ ಅವರು ರಾಜಕೀಯದ ಕಾರಣದಿಂದ ಇತ್ತೀಚೆಗೆ ಬಿಟ್ಟು ಹೋಗಿದ್ದರು. ಅದೇ ರೀತಿ ಕೆಲವು ಸ್ಪರ್ಧಿಗಳು ಕೂಡ ಹೊರನಡೆದರು. ಈಗಿನದ್ದು ಅನಸೂಯಾ ಸರದಿ.
ಇದನ್ನೂ ಓದಿ: Anchor Anushree: ಆ್ಯಂಕರ್ ಅನುಶ್ರೀಗೆ ಜಾಕೆಟ್ ಗಿಫ್ಟ್ ನೀಡಿ, ಕೈಯಾರೆ ತೊಡಿಸಿದ ಶಿವಣ್ಣ; ವಿಡಿಯೋ ವೈರಲ್
‘ಅಯ್ಯಯ್ಯೋ ಮುಟ್ಟಬಾರದು’; ಅರ್ಜುನ್ ಜನ್ಯರನ್ನು ಆಕಾಂಕ್ಷಾ ಟಚ್ ಮಾಡಿದ್ದಕ್ಕೆ ಅನುಶ್ರೀ ರಿಯಾಕ್ಷನ್