Kannadathi Serial: ಹರ್ಷ ಹಾಗೂ ಭುವಿ ಮಧ್ಯೆ ಮೂಡಿತು ಮನಸ್ತಾಪ; ಆದರೆ, ಇದಕ್ಕೆ ವರು ಕಾರಣ ಅಲ್ಲ
Kannadathi Serial Update: ಸಾನಿಯಾ ಎಂ.ಡಿ. ಪಟ್ಟದಿಂದ ಇಳಿದಿದ್ದಾಳೆ. ಭುವಿ ಆಡಿದ ಚದುರಂಗದ ಆಟ ಕೆಲಸ ಮಾಡಿದೆ. ರತ್ನಮಾಲಾ ಸಾಯಿಸಲು ಸಾನಿಯಾ ಪ್ಲ್ಯಾನ್ ಮಾಡಿದ್ದಳು. ಈ ವಿಡಿಯೋ ಭುವಿಗೆ ಸಿಕ್ಕಿದೆ. ಇದನ್ನೇ ಇಟ್ಟುಕೊಂಡು ಸಾನಿಯಾಳನ್ನು ಭುವಿ ಆಡಿಸುತ್ತಿದ್ದಾಳೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಹರ್ಷನಿಗೆ ವರುಧಿನಿ ಕೆಟ್ಟವಳು ಎಂಬುದು ಮನದಟ್ಟಾಗಿದೆ. ಆಕೆಗೆ ಬುದ್ಧಿ ಕಲಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ ಹರ್ಷ. ಇದಕ್ಕಾಗಿ ಆತ ಹೊಸ ಮಿಷನ್ ಆರಂಭಿಸಿದ್ದಾನೆ. ವರುಧಿನಿಗೆ ಕಾಟ ಕೊಡೋಕೆ ಶುರು ಮಾಡಿದ್ದಾನೆ. ಹರ್ಷ ನಡೆದುಕೊಳ್ಳುತ್ತಿರುವ ರೀತಿ ನೋಡಿ ವರುಗೆ ಅನುಮಾನ ಶುರುವಾಗಿದೆ. ಹರ್ಷ ಈ ರೀತಿ ನಡೆದುಕೊಳ್ಳಲು ಕಾರಣ ಏನು ಎಂಬ ಪ್ರಶ್ನೆ ಮೂಡಿದೆ. ಮತ್ತೊಂದು ಕಡೆ ಭುವಿ ಅಧಿಕಾರ ವಹಿಸಿಕೊಂಡಿದ್ದಾಳೆ. ಆಕೆ ಒಳ್ಳೆಯ ರೀತಿಯಲ್ಲಿ ಕಚೇರಿ ನಡೆಸಿಕೊಂಡು ಹೋಗಬಹುದು ಎನ್ನುವ ಭರವಸೆ ಎಲ್ಲರಲ್ಲೂ ಮೂಡಿದೆ.
ಭುವಿಗೆ ಬೇಸರ
ವರುಧಿನಿಗೆ ಪಾಠ ಕಲಿಸಬೇಕು ಎಂದು ಹರ್ಷ ನಿರ್ಧರಿಸಿದ್ದಾನೆ. ಹೀಗಾಗಿ ಭುವಿ-ವರು ಒಟ್ಟಿಗೆ ಇರುವ ಸಂದರ್ಭದಲ್ಲಿ ‘ನಾನು-ಭುವಿ ಗಂಡ ಹೆಂಡತಿ ಅಲ್ಲ’ ಎಂದು ಹೇಳಿದ್ದ. ಕಚೇರಿಯಲ್ಲಿ ಹರ್ಷ ಸಿಇಒ ಹಾಗೂ ಭುವಿ ಎಂಡಿ. ಈ ಕಾರಣಕ್ಕೆ ಆತ ಈ ರೀತಿ ಹೇಳಿದ್ದ. ಈ ಮಾತು ಭುವಿಗೆ ಬೇಸರ ಮೂಡಿಸಿದೆ. ಈ ಮೊದಲು ರತ್ನಮಾಲಾ ಅಧಿಕಾರದಲ್ಲಿದ್ದಳು. ಅವಳು ಇದ್ದಾಗ ರತ್ನಮಾಲಾಳನ್ನು ಹರ್ಷ ಅಮ್ಮನ ರೀತಿಯೇ ಟ್ರೀಟ್ ಮಾಡುತ್ತಿದ್ದ. ಆದರೆ, ಭುವಿ ಅಧಿಕಾರಕ್ಕೆ ಬಂದ ನಂತರ ಹರ್ಷ ಬದಲಾಗಿದ್ದಾನೆ. ಅವಳನ್ನು ಅಧಿಕಾರಿ ಎಂಬ ರೀತಿಯಲ್ಲಿ ಟ್ರೀಟ್ ಮಾಡುತ್ತಿದ್ದಾನೆ. ಈ ವಿಚಾರದಲ್ಲಿ ಭುವಿಗೆ ಬೇಸರ ಇದೆ. ಹೀಗಿರುವಾಗಲೇ ‘ನಾನು ಭುವಿ ಗಂಡ-ಹೆಂಡತಿ ಅಲ್ಲ’ ಎಂದಿದ್ದಾನೆ. ಇದು ಭುವಿಯ ಬೇಸರ ಹೆಚ್ಚಿಸಿದೆ.
ಸಾನಿಯಾಗೆ ಸನ್ಮಾನ
ಸಾನಿಯಾ ಎಂ.ಡಿ. ಪಟ್ಟದಿಂದ ಇಳಿದಿದ್ದಾಳೆ. ಭುವಿ ಆಡಿದ ಚದುರಂಗದ ಆಟ ಕೆಲಸ ಮಾಡಿದೆ. ರತ್ನಮಾಲಾ ಸಾಯಿಸಲು ಸಾನಿಯಾ ಪ್ಲ್ಯಾನ್ ಮಾಡಿದ್ದಳು. ಈ ವಿಡಿಯೋ ಭುವಿಗೆ ಸಿಕ್ಕಿದೆ. ಇದನ್ನೇ ಇಟ್ಟುಕೊಂಡು ಸಾನಿಯಾಳನ್ನು ಭುವಿ ಆಡಿಸುತ್ತಿದ್ದಾಳೆ. ಹೀಗಾಗಿ, ಸಾನಿಯಾ ತೆಪ್ಪಗಾಗಿದ್ದಾಳೆ. ಇಷ್ಟೆಲ್ಲ ಕೆಟ್ಟ ಕೆಲಸ ಮಾಡಿದರೂ ಸಾನಿಯಾಗೆ ಸನ್ಮಾನ ಮಾಡಬೇಕು ಎಂಬ ನಿರ್ಧಾರಕ್ಕೆ ಭುವಿ ಬಂದಿದ್ದಾಳೆ.
ಈ ಬಗ್ಗೆ ಕಾರ್ಯದರ್ಶಿ ವರುಧಿನಿ ಜತೆ ಭುವಿ ಮಾತನಾಡಿದ್ದಾಳೆ. ‘ಸಾನಿಯಾಗೆ ಕರೆ ಮಾಡಿ ಮಾತನಾಡು. ಅವರು ಯಾವಾಗ ಫ್ರೀ ಆಗಿರುತ್ತಾರೆ ಎಂಬುದನ್ನು ಕೇಳು. ಅವರಿಗೆ ಒಂದು ಸನ್ಮಾನ ಇಟ್ಟುಕೊಳ್ಳಬೇಕು. ಅವರು ಮಾಡಿದ ಎಷ್ಟೋ ಕೆಲಸಗಳು ಸಂಸ್ಥೆಗೆ ಒಳ್ಳೆಯದು ಮಾಡಿದೆ. ಅವರು ತೆರಳುವಾಗ ಬೀಳ್ಕೊಡುಗೆ ಮಾಡಲೇಬೇಕು. ಕಂಪನಿಗಾಗಿ ಶ್ರಮಿಸಿದವರಿಗೆ ನಾವು ಇಷ್ಟಾದರೂ ಮಾಡಬೇಕು’ ಎಂದು ಭುವಿ ಹೇಳಿದ್ದಾಳೆ. ಆಕೆಯ ಮಾತನ್ನು ಕೇಳಿ ವರುಧಿನಿಗೆ ಸಿಟ್ಟು ಬಂದಿದೆ.
ಇದನ್ನೂ ಓದಿ: Kannadathi: ರತ್ನಮಾಲಾಳ ಕೊಲ್ಲೋಕೆ ಹೋಗಿದ್ದ ವಿಡಿಯೋ ತೋರಿಸಿದ ಭುವಿ; ನಡುಗಿಹೋದ ಸಾನಿಯಾ
ಭುವಿ-ಹರ್ಷನ ಮಧ್ಯೆ ಮೂಡಿದೆ ವೈಮನಸ್ಸು
ಹರ್ಷ ಹಾಗೂ ಭುವಿ ಮಧ್ಯೆ ಸಾಕಷ್ಟು ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿದ ಉದಾಹರಣೆ ಇದೆ. ಈಗ ತನ್ನ ಕಂಪನಿಯಲ್ಲಿ ಇದ್ದುಕೊಂಡೇ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡಿದ ಕೆಲವರನ್ನು ತೆಗೆಯಬೇಕು ಎಂಬ ನಿರ್ಧಾರಕ್ಕೆ ಹರ್ಷ ಬಂದಿದ್ದಾನೆ. ಈ ವಿಚಾರವನ್ನು ಭುವಿ ಬಳಿ ಚರ್ಚೆ ಮಾಡಿದ್ದಾನೆ. ಕಂಪನಿಯಿಂದ ಯಾರನ್ನೂ ಏಕಾಏಕಿ ತೆಗೆಯಬಾರದು, ಹಾಗೆ ತೆಗೆದರೆ ಅವರನ್ನು ನಂಬಿಕೊಂಡು ಇರುವ ಕುಟುಂಬಕ್ಕೆ ತೊಂದರೆ ಉಂಟಾಗುತ್ತದೆ ಎಂಬುದು ಭುವಿಯ ಅಭಿಪ್ರಾಯ. ಈ ಕಾರಣಕ್ಕೆ ಹರ್ಷನ ನಿರ್ಧಾರವನ್ನು ಆಕೆ ವಿರೋಧ ಮಾಡಬಹುದು.
ಇದನ್ನೂ ಓದಿ: Kannadathi Serial: ‘ನಾನು ಶೂಟ್ ಮಾಡ್ಕೋತೀನಿ’; ಎಂ.ಡಿ. ಪಟ್ಟಕ್ಕಾಗಿ ವೇದಿಕೆ ಮೇಲೆ ಭುವಿಗೆ ಸಾನಿಯಾ ಬೆದರಿಕೆ
ಹರ್ಷನ ಬೇಡಿಕೆ ಬಗ್ಗೆ ಚರ್ಚೆ ಮಾಡಬೇಕು ಎನ್ನುವ ಕಾರಣಕ್ಕೆ ಭುವಿ ಮೀಟಿಂಗ್ ಕರೆದಿದ್ದಾಳೆ. ಈ ಸಂದರ್ಭದಲ್ಲೂ ಹರ್ಷನ ನಿರ್ಧಾರಕ್ಕೆ ಭುವಿ ವಿರೋಧ ವ್ಯಕ್ತಪಡಿಸಬಹುದು. ಹಾಗಾದಲ್ಲಿ ಹರ್ಷನಿಗೆ ಬೇಸರ ಆಗಲಿದೆ. ಇಬ್ಬರ ಮಧ್ಯೆ ಮೂಡಿರುವ ವೈಮನಸ್ಸು ಮತ್ತಷ್ಟು ಹೆಚ್ಚಲಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.