ಹೀಗೆ ಆದರೆ ಒಂದು ದಿನ ಸರ್ಜರಿ ಮಾಡಬೇಕಾಗುತ್ತದೆ!; ವೈಷ್ಣವಿಗೆ ಸುದೀಪ್​ ಎಚ್ಚರಿಕೆ

ಮೇ 3ರ ಎಪಿಸೋಡ್​ನಲ್ಲಿ ಸುದೀಪ್​ ಧ್ವನಿ ಬಿಗ್​ ಬಾಸ್​ ಮನೆಯವರಿಗೆ ಕೇಳಿದೆ. ಎಲ್ಲರಿಗೂ ಸುದೀಪ್​ ಕಿವಿಮಾತು ಹೇಳಿದ್ದಾರೆ.,

  • TV9 Web Team
  • Published On - 12:33 PM, 4 May 2021
ಹೀಗೆ ಆದರೆ ಒಂದು ದಿನ ಸರ್ಜರಿ ಮಾಡಬೇಕಾಗುತ್ತದೆ!; ವೈಷ್ಣವಿಗೆ ಸುದೀಪ್​ ಎಚ್ಚರಿಕೆ
ಸುದೀಪ್​-ವೈಷ್ಣವಿ

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಗೌಡ ತುಂಬಾನೇ ಸೈಲೆಂಟ್​. ಅನೇಕ ಸಂದರ್ಭಗಳಲ್ಲಿ ಅವರು ಮಾತನ್ನೇ ಆಡುವುದಿಲ್ಲ. ಇದು ಕೆಲವೊಮ್ಮೆ ಅವರಿಗೆ ಪ್ಲಸ್​ ಆಗಿದೆ. ಇನ್ನೂ ಕೆಲವೊಮ್ಮೆ ಮೈನಸ್​ ಆಗಿದೆ. ಈ ಬಗ್ಗೆ ಸುದೀಪ್​ ಮಾತನಾಡಿದ್ದಾರೆ! ಅಷ್ಟೇ ಅಲ್ಲ, ವೈಷ್ಣವಿಗೆ ಕಿವಿಮಾತು ಕೂಡ ಹೇಳಿದ್ದಾರೆ.

ಕಿಚ್ಚ ಸುದೀಪ್​ಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ, ಅವರು ಎರಡು ವಾರ ಮನೆಯಲ್ಲೇ ರೆಸ್ಟ್​ ಮಾಡಿದ್ದರು. ಕರ್ನಾಟಕದಲ್ಲಿ ಕೊರೊನಾ ಹೆಚ್ಚಿದ್ದರಿಂದ ಶೂಟಿಂಗ್ಗೆ​ ಬ್ರೇಕ್​ ಹಾಕಲಾಗಿದೆ. ಹೀಗಾಗಿ, ವೀಕೆಂಡ್​ ಶೂಟ್​ ಮಾಡೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೇ 3ರ ಎಪಿಸೋಡ್​ನಲ್ಲಿ ಸುದೀಪ್​ ಧ್ವನಿ ಬಿಗ್​ ಬಾಸ್​ ಮನೆಯವರಿಗೆ ಕೇಳಿದೆ.

ಬೆಳಗ್ಗೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಕೇಳಿಸಿಕೊಳ್ಳಿ ಎಂಬ ಪತ್ರ ಸಂದೇಶ ಬಂದಿತ್ತು. ಎರಡನೇ ಪತ್ರದಲ್ಲಿ ಚೆನ್ನಾಗಿ ಕೇಳಿಸಿಕೊಳ್ಳಿ ಎಂದಿತ್ತು. ಅದರ ಅರ್ಥ ಏನು ಎಂದು ಸ್ಪರ್ಧಿಗಳೆಲ್ಲ ಆಲೋಚನೆ ಮಾಡುತ್ತಿರುವಾಗಲೇ ಸುದೀಪ್ ಅವರ ಧ್ವನಿ ಕೇಳಿಸಿದೆ. ಎಲ್ಲಾ ಸ್ಪರ್ಧಿಗಳಿಗೂ ಸುದೀಪ್​ ಕಿವಿಮಾತು ಹೇಳಿದ್ದಾರೆ.

ಮೊದಲು ವೈಷ್ಣವಿ ಅವರಿಗೆ ಸುದೀಪ್​ ಧ್ವನಿ ಬಂತು. ವೈಷ್ಣವಿ ನೀವು ನಿಮ್ಮ ಅಭಿಪ್ರಾಯ ಹೇಳ್ತೀರಾ. ಆ ಬಗ್ಗೆ ಖುಷಿ ಇದೆ. ಆದರೆ, ಹೀಟೆಡ್​ ಚರ್ಚೆ ಆದಾಗ ನಿಮ್ಮ ಮನಸ್ಸಿನಲ್ಲಿ ಏನಿರುತ್ತದೆಯೋ ಅದನ್ನು ಹೇಳಿ. ಇಲ್ಲ ಅಂದ್ರೆ ಇದೆಲ್ಲ ಹೆಪ್ಪುಗಟ್ಟಿ ಸರ್ಜರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವೈಷ್ಣವಿ ಸಾಕಷ್ಟು ವಿಚಾರಗಳನ್ನು ತಮ್ಮ ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತಾರೆ. 9ನೇ ವಾರ ಕ್ಯಾಪ್ಟನ್ಸಿ ಟಾಸ್ಕ್​ ವೇಳೆ ಜಗಳವಾಗಿತ್ತು. ಈ ಜಗಳ ನಡೆಯುವಾಗ ವೈಷ್ಣವಿ ಸೈಲೆಂಟ್​ ಆಗಿದ್ದರು. ಇದರಿಂದ ಸಾಕಷ್ಟು ತೊಂದರೆಗಳು ಸೃಷ್ಟಿ ಆದವು. ಆ ರೀತಿ ಮಾಡಬೇಡಿ. ಅದರಿಂದ ನಿಮಗೇ ತೊಂದರೆ ಎಂದು ಸುದೀಪ್​ ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ

Kichcha Sudeep: ಸುದೀಪ್​ ಇಲ್ಲದೇ 3 ವಾರ ಮೈ ಮರೆತಿದ್ದ ಬಿಗ್​ ಬಾಸ್​ ಮಂದಿಗೆ ಛಾಟಿ ಬೀಸಿದ ಕಿಚ್ಚನ ವಾಯ್ಸ್​ ಮೆಸೇಜ್​