AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರಿಂದ ಕಳಪೆ ಪಡೆದ ಕಿರಣ್ ಶಾಸ್ತ್ರಿಗೆ ಈ ವಾರದ ಕಿಚ್ಚನ ಚಪ್ಪಾಳೆ?

ಬಿಗ್ ಬಾಸ್ ಕನ್ನಡ 13ರಲ್ಲಿ ಮೊದಲ ಕಳಪೆ ಪಡೆದು ಕಿರಣ್ ಶಾಸ್ತ್ರಿ ಜೈಲು ಸೇರಿದ್ದಾರೆ. ಆರಂಭದ ದಿನಗಳಲ್ಲಿ ಕಿರಿಕಿರಿ ಉಂಟುಮಾಡುತ್ತಿದ್ದ ಅವರು, ಸುದೀಪ್ ಕ್ಲಾಸ್ ಬಳಿಕ ನಡೆದುಕೊಂಡ ರೀತಿ ಮೆಚ್ಚುಗೆ ಪಡೆದಿದೆ. ಆದರೂ ಅವರಿಗೆ ಕಳಪೆ ಸಿಕ್ಕಿದೆ. ಈ ವಾರ ಕಿಚ್ಚನ ಚಪ್ಪಾಳೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಎಲ್ಲರಿಂದ ಕಳಪೆ ಪಡೆದ ಕಿರಣ್ ಶಾಸ್ತ್ರಿಗೆ ಈ ವಾರದ ಕಿಚ್ಚನ ಚಪ್ಪಾಳೆ?
ಬಿಗ್ ಬಾಸ್Image Credit source: Colors Kannada
ರಾಜೇಶ್ ದುಗ್ಗುಮನೆ
|

Updated on: Sep 26, 2026 | 7:05 AM

Share

ಮುಖ್ಯಾಂಶಗಳು

  • ಅಬ್ಬರದಿಂದ ಬದಲಾವಣೆಯತ್ತ
  • ಕಿರಣ್ ಶಾಸ್ತ್ರಿ ಆಟಕ್ಕೆ ಸಿಕ್ತಾ ಹೊಸ ಟರ್ನಿಂಗ್ ಪಾಯಿಂಟ್?
  • ಟೀಕೆಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡ ಕಿರಣ್

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಮೊದಲ ಕಳಪೆ ಸಿಕ್ಕಿದೆ. ಕಿರಣ್ ಶಾಸ್ತ್ರಿ ಅವರು ಈ ಸೀಸನ್​ನ ಮೊದಲ ಕಳಪೆ ಆಗಿ ಜೈಲು ಸೇರಿದ್ದಾರೆ. ಬಹುತೇಕರು ಕಿರಣ್ ಹೆಸರು ತೆಗೆದುಕೊಂಡರು. ಆದರೆ, ಕಿರಣ್ ಶಾಸ್ತ್ರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಗುವ ಎಲ್ಲಾ ಲಕ್ಷಣ ಗೋಚರವಾಗಿದೆ. ಅವರು ಈ ಚಪ್ಪಾಳೆಗೆ ಅರ್ಹರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಿರಣ್ ಶಾಸ್ತ್ರಿ ಅವರ ಮೊದಲ ಎರಡು ವಾರದ ನಡವಳಿಕೆಗೂ, ಮೂರನೇ ವಾರದ ನವಳಿಕೆಗೂ ಅಜಗಜಾಂತರ ವ್ಯತ್ಯಾಸ ಇದೆ. ಅವರು ಮೊದಲ ಎರಡು ವಾರ ಎಲ್ಲರನ್ನೂ ಟೀಕಿಸುತ್ತಾ, ಬಾಯಿಗೆ ಬಂದಂತೆ ಮಾತನಾಡುತ್ತಾ ಸಮಯ ಕಳೆಯುತ್ತಿದ್ದರು. ಅವರು ಎಲ್ಲರಿಗೂ ಕಿರಿಕಿರಿ ಉಂಟು ಮಾಡಿದ್ದರು. ಸುದೀಪ್ ಅವರು ಕಿರಣ್​​ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು.

ಸುದೀಪ್ ಅವರು ಬೈದ ಬಳಿಕ ಮಾತನಾಡಿದ್ದ ಕಿರಣ್, ‘ನನ್ನ ತಪ್ಪು ಏನು ಎಂಬುದು ನನಗೆ ಅರಿವಾಗಿದೆ. ನಾನು ಇದರಿಂದ ಪಾಠ ಕಲಿತುಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ನನ್ನನ್ನು ನಾನು ಬದಲಾಯಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದರು. ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಮಂದಿ ಈ ಮಾತನ್ನು ಹೇಳುತ್ತಾರೆ. ಆದರೆ, ಯಾರೊಬ್ಬರೂ ಇದನ್ನು ಪಾಲಿಸುವುದಿಲ್ಲ. ಆದರೆ, ಕಿರಣ್ ಶಾಸ್ತ್ರಿ ಹಾಗಲ್ಲ. ಅವರು ತಪ್ಪನ್ನು ತಿದ್ದುಕೊಂಡಿದ್ದಾರೆ.

ಈ ವಾರದ ಆರಂಭದಲ್ಲಿ ಚಟುವಟಿಕೆ ಒಂದನ್ನು ನೀಡಲಾಗಿತ್ತು. ಬಿಗ್ ಬಾಸ್​​ ಮನೆಯ ವಾರದ ಟಾಸ್ಕ್​ನಿಂದ ಹೊರಗಿಡುವ ಅವಕಾಶವನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ಈ ವೇಳೆ ಅನೇಕರು ಕಿರಣ್ ಹೆಸರು ತೆಗೆದುಕೊಂಡು, ‘ನೀವು ಮೊದಲ ಎರಡು ವಾರ ನಡೆದುಕೊಂಡ ರೀತಿ ಸರಿ ಇಲ್ಲ’ ಎಂದು ಹೇಳಿದ್ದರು. ಇದನ್ನು ಕಿರಣ್ ಒಪ್ಪಿಕೊಂಡಿದ್ದಾರೆ. ತಪ್ಪನ್ನು ತಿದ್ದಿಕೊಳ್ಳೋದಾಗಿ ತುಂಬಾನೇ ಪ್ರೀತಿಯಿಂದಲೇ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ಕಳಪೆ ಪಟ್ಟ ಪಡೆದು ಜೈಲು ಸೇರಿದ ಕಿರಣ್ ಶಾಸ್ತ್ರಿ

ಈ ವಾರ ಕಳಪೆಗೆ ಬಹುತೇಕರು ಕಿರಣ್ ಹೆಸರು ತೆಗೆದುಕೊಂಡಿದ್ದಾರೆ. ‘ಅವರು ದೇವಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂಬುದು ಉಳಿದ ಸ್ಪರ್ಧಿಗಳ ಕಾರಣ ಆಗಿತ್ತು! ಸ್ಪರ್ಧಿಗಳು ಹೀಗೆ ಹೇಳಿದಾಗ, ‘ನಾನು ಮುಂದಿನ ದಿನಗಳಲ್ಲಿ ಇದನ್ನು ತಿದ್ದಿಕೊಳ್ಳುತ್ತೇನೆ, ಉತ್ತಮಬಾಗುತ್ತೇನೆ’ ಎಂದು ಹೇಳಿದರು. ಅವರ ಈ ದೊಡ್ಡ ಬದಲಾವಣೆಗೆ ಕಿಚ್ಚನ ಚಪ್ಪಾಳೆ ಸಿಗಬಹುದು ಎಂದು ಊಹಿಸಲಾಗಿದೆ. ಇಂದು (ಸೆಪ್ಟೆಂಬರ್ 26) ರಾತ್ರಿ 8 ಗಂಟೆಗೆ ಬಿಗ್ ಬಾಸ್ ಪ್ರಸಾರವಾಗಲಿದೆ. ಸತತ ಮೂರು ಗಂಟೆ ಶೋ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More