ನಿರಂಜನ್ ನಗು ಮುಖದ ಹಿಂದಿದೆ ನೋವಿನ ಕಥೆ; ಹಗ್ ಮಾಡಿ ಸಮಾಧಾನ ಮಾಡಿದ ರಚಿತಾ
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ರಲ್ಲಿ, ನಿರಂಜನ್ ತಮ್ಮ ಕುಟುಂಬದ ಸಮಸ್ಯೆಗಳನ್ನು ಬಹಿರಂಗಪಡಿಸಿದರು. ಅವರ ತಂದೆ-ತಾಯಿ ಮತ್ತು ಅಕ್ಕ ಬೇರೆ ಬೇರೆ ವಾಸಿಸುತ್ತಿದ್ದಾರೆ ಎಂದು ಹೇಳಿದರು. ಈ ನೋವನ್ನು ಮರೆಮಾಚಿ ನಗುವಿನ ಮುಖವಾಡ ಧರಿಸುವ ನಿರಂಜನ್ ಅವರನ್ನು ಕಂಡು ರಚಿತಾ ರಾಮ್ ಸಾಂತ್ವನ ಹೇಳಿ ಹಗ್ ಮಾಡಿದರು. ಅವರ ತಂದೆಯೊಂದಿಗೆ ಫೋನ್ ಕರೆ ಮೂಲಕ ಮಾತನಾಡುವ ಅವಕಾಶವನ್ನೂ ಕಾರ್ಯಕ್ರಮ ಒದಗಿಸಿತು.

ನಿರಂಜನ್ (Niranjan) ಅವರು ಆ್ಯಂಕರಿಂಗ್ ಮೂಲಕ ಖ್ಯಾತಿ ಪಡೆದಿದ್ದಾರೆ. ಅವರು ಹಲವು ರಿಯಾಲಿಟಿ ಶೋಗಳಿಗೆ ಆ್ಯಂಕರ್ ಆಗಿ ಗಮನ ಸೆಳೆದಿದ್ದಾರೆ. ಈಗ ಅವರು ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ಗೆ ಆ್ಯಂಕರಿಂಗ್ ಮಾಡುತ್ತಿದ್ದಾರೆ. ಕಳೆದ ವಾರ ಫ್ಯಾಮಿಲಿ ವೀಕ್ ಆಗಿತ್ತು. ಈ ವೇಳೆ ಕುಟುಂಬದವರು ಬಂದು ಸ್ಪರ್ಧಿಗಳ ಜೊತೆ ಕಾಲ ಕಳೆದರು. ಮೋಜು ಮಸ್ತಿ ಮಾಡಿದರು. ಈ ವೇಳೆ ನಿರಂಜನ್ ತಮ್ಮ ನೋವನ್ನು ಹೇಳಿಕೊಂಡರು. ಆಗ ರಚಿತಾ ರಾಮ್ ಹಗ್ ಮಾಡಿ ಸಮಾಧಾನ ಮಾಡಿದರು. ಆ ಬಗ್ಗೆ ಇಲ್ಲಿದೆ ವಿವರ.
ನಿರಂಜನ್ ಅವರು ಸದಾ ಎಲ್ಲರನ್ನು ನಗಿಸುವ ಪ್ರಯತ್ನ ಮಾಡುತ್ತಾ ಇರುತ್ತಾರೆ. ಇದೇ ಪ್ರಯತ್ನದಲ್ಲಿ ಇರುವ ಅವರಿಗೆ ಸಾಕಷ್ಟು ನೋವುಗಳು ಇವೆ. ಆದರೆ, ಅದೆಲ್ಲವನ್ನೂ ನುಂಗಿಕೊಂಡಿದ್ದಾರೆ. ‘ನಮ್ಮ ಮನೆಯಲ್ಲಿ ಅಮ್ಮ ಸಪರೇಟ್ ಆಗಿದ್ದಾರೆ, ಅಪ್ಪ ಸಪರೇಟ್, ಅಕ್ಕ ಸಪರೇಟ್. ಒಟ್ಟಾಗಿ ಇರೋದು ನಾನು ಮತ್ತು ಪತ್ನಿ ಮಾತ್ರ’ ಎಂದರು ನಿರಂಜನ್. ‘ಮನಸ್ಸಲ್ಲಿ ಇಷ್ಟು ನೋವು ಇದ್ರು ಎಷ್ಟು ಲೀಲಾಜಾಲವಾಗಿ ಮಾತನಾಡ್ತೀಯಾ. ವೇದಿಕೆ ಮೇಲೆ ಎಲ್ಲರನ್ನೂ ನಗಿಸುತ್ತಾ ಮಾತಾಡ್ತಾ ಇದೀಯಲ್ಲೋ. ಎಷ್ಟು ನೋವು ಇಟ್ಕೊಂಡಿದೀಯಾ. ನಿನ್ನ ರೀತಿ ಇರೋದು ಕಷ್ಟ’ ಎಂದು ರವಿಚಂದ್ರನ್ ಹೊಗಳಿದರು.
View this post on Instagram
View this post on Instagram
View this post on Instagram
‘ನನ್ನ ಕಡೇ ಉಸಿರು ಇರೋವರೆಗೂ ನಮ್ಮ ಜೊತೆಗೆ ಇರೋರು ನಗ್ತಾ ಇರಬೇಕು. ಜೀವನ ಒಂದು ಸಲ ಸಿಗುತ್ತೆ, ಜೀವ ಒಂದು ಸಲ ಸಿಗುತ್ತೆ. ನಮ್ಮಿಂದ ನಾಲ್ಕು ಜನ ನಗ್ತಾ ಇದ್ರೆ, ಅವರ ನಗುವಿನಲ್ಲಿ ನನ್ನ ನಗು ಕಾಣುತ್ತೇನೆ’ ಎನ್ನುವಾಗ ರಚಿತಾ ರಾಮ್ ಅವರು ಬಂದು ಸಮಾಧಾನ ಮಾಡಿದರು. ಆ ಬಳಿಕ ಎಲ್ಲರು ಬಂದು ಅವರನ್ನು ನಗಿಸಿದರು.
ಇದನ್ನೂ ಓದಿ: ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ತಂದೆ-ತಾಯಿಯ ಪಾದ ಪೂಜೆ ಮಾಡಿದ ಡ್ರೋನ್ ಪ್ರತಾಪ್
ಆ ಬಳಿಕ ಜೀ ಕನ್ನಡ ವಾಹಿನಿಯವರು ತಂದೆಯ ಜೊತೆ ಫೋನ್ ಕರೆ ಮೂಲಕ ಮಾತನಾಡಿಸಿದರು. ಈ ವೇಳೆ ನಿರಂಜನ್ ಅವರು ತಂದೆಯ ಜೊತೆ ಮಾತನಾಡಿದರು. ಮಗನ ಬಗ್ಗೆ ಅವರ ತಂದೆ ಸಾಕಷ್ಟು ಹೆಮ್ಮೆ ಹೊರಹಾಕಿದರು. ಆ ಸಂದರ್ಭದ ವಿಡಿಯೋಗಳನ್ನು ಮೇಲೆ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







