ಸಂಗೀತಾ ಶೃಂಗೇರಿನ ಮದುವೆ ಆಗೋ ಹುಡುಗ ಇರೋದು ಹೊಸಪೇಟೆಯಲ್ಲಿ?

ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಸ್ಪರ್ಧಿಗಳು ಕಲರ್ಸ್ ಕನ್ನಡದ ನಾನಾ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾ ಇದ್ದಾರೆ. ತುಕಾಲಿ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ‘ಗಿಚ್ಚಿ ಗಿಲಿ ಗಿಲಿ’ಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತಾ ಅವರು ‘ಕೆಂಡಸಂಪಿಗೆ’ ಸೀರಿಯಲ್ ಸಂತೆಯಲ್ಲಿ ಭಾಗಿ ಆಗಿದ್ದಾರೆ. ನೆರೆದವರಿಗೆ ಯೆಸ್ ಆರ್​ ನೋ ಕೇಳಲಾಗಿದೆ.

ಸಂಗೀತಾ ಶೃಂಗೇರಿನ ಮದುವೆ ಆಗೋ ಹುಡುಗ ಇರೋದು ಹೊಸಪೇಟೆಯಲ್ಲಿ?
ಸಂಗೀತಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Feb 22, 2024 | 9:12 PM

ಸಂಗೀತಾ ಶೃಂಗೇರಿ (Sangeetha Sringeri) ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಎರಡನೇ ರನ್ನರ್​ ಅಪ್ ಆದರು ಅವರು. ಸಂಗೀತಾ ಅಭಿಮಾನಿ ಬಳಗ ದೊಡ್ಡದಾಗಿದೆ. ಇನ್​​ಸ್ಟಾಗ್ರಾಮ್​ನಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ. ಅಚ್ಚರಿಯ ವಿಚಾರ ಎಂದರೆ ಅವರು ಮದುವೆ ಆಗೋ ಹುಡುಗ ಇರೋದು ಹೊಸಪೇಟೆಯಲ್ಲಾ? ಹೀಗೊಂದು ಪ್ರಶ್ನೆ ಮೂಡಲು ಕಾರಣ ಆಗಿದ್ದು ‘ಕೆಂಡಸಂಪಿಗೆ’ ಸೀರಿಯಲ್ ಸಂತೆ.

ಕಲರ್ಸ್ ಕನ್ನಡದಲ್ಲಿ ಸೀರಿಯಲ್ ಸಂತೆ ನಡೆಯುತ್ತದೆ. ಅನೇಕ ಧಾರಾವಾಹಿ ತಂಡಗಳು ಬೇರೆ ಬೇರೆ ಊರುಗಳಿಗೆ ತೆರಳಿ ಕಾರ್ಯಕ್ರಮ ನಡೆಸುತ್ತವೆ. ಈ ವೇಳೆ ಧಾರಾವಾಹಿ ತಂಡಗಳು ಡ್ಯಾನ್ಸ್ ಮಾಡುತ್ತವೆ. ಅದೇ ರೀತಿ ‘ಕೆಂಡಸಂಪಿಗೆ’ ಸೀರಿಯಲ್ ಸಂತೆ ಹೊಸಪೇಟೆಯಲ್ಲಿ ನಡೆದಿದೆ. ಇದರಲ್ಲಿ ಇಡೀ ಧಾರಾವಾಹಿ ತಂಡ ಭಾಗಿ ಆಗಿದೆ. ಅಷ್ಟೇ ಅಲ್ಲ ಸಂಗೀತಾ ಶೃಂಗೇರಿ ಅವರು ಕೂಡ ತಂಡಕ್ಕೆ ಸಾಥ್ ನೀಡಿದ್ದಾರೆ.

ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಸ್ಪರ್ಧಿಗಳು ಕಲರ್ಸ್ ಕನ್ನಡದ ನಾನಾ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾ ಇದ್ದಾರೆ. ತುಕಾಲಿ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ‘ಗಿಚ್ಚಿ ಗಿಲಿ ಗಿಲಿ’ಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತಾ ಅವರು ‘ಕೆಂಡಸಂಪಿಗೆ’ ಸೀರಿಯಲ್ ಸಂತೆಯಲ್ಲಿ ಭಾಗಿ ಆಗಿದ್ದಾರೆ. ನೆರೆದವರಿಗೆ ಯೆಸ್ ಆರ್​ ನೋ ಕೇಳಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಯೆಸ್ ಆರ್ ನೋ ರೌಂಡ್ ನಡೆಸಲಾಗುತ್ತದೆ. ಕೆಂಡಸಂಪಿಗೆ ಸೀರಿಯಲ್ ಸಂತೆಯಲ್ಲೂ ನಿರೂಪಕ ನಿರಂಜನ್ ಅವರು ‘ಯೆಸ್ ಆರ್ ನೋ’ ರೌಂಡ್ ನಡೆಸಿದ್ದಾರೆ. ಸಂಗೀತಾ ಅವರು ರೆಬೆಲ್ ಆಗಿದ್ದರು ಎಂದು ಕೇಳಿದಾಗ ಅನೇಕರು ಯೆಸ್ ಎಂದಿದ್ದಾರೆ. ಅವರು ದೊಡ್ಮನೆಯಲ್ಲಿ ಅದೇ ರೀತಿ ಇದ್ದರು. ಹೀಗಾಗಿ, ಈ ರೀತಿಯ ಉತ್ತರ ಬಂದಿದೆ. ಅವರಿಗೆ ಕೋಪ ಜಾಸ್ತಿ ಎಂದು ಕೇಳಲಾಯಿತು. ಇದಕ್ಕೂ ಯೆಸ್ ಉತ್ತರ ಬಂದಿದೆ. ಸಂಗೀತಾ ಅನೇಕ ಬಾರಿ ಸಿಟ್ಟು ಮಾಡಿಕೊಂಡಿದ್ದರು.

ಇದನ್ನೂ ಓದಿ: ಟ್ರೆಂಡ್ ಆಯ್ತು ಸಂಗೀತಾ ಶೃಂಗೇರಿ ಅವರು ಹೇಳಿದ್ದ ಆ ಡೈಲಾಗ್; ಹೋದಲ್ಲಿ ಬಂದಲ್ಲಿ ಅದೇ ಮಾತು

‘ಸಂಗೀತಾ ಶೃಂಗೇರಿ ಮದುವೆ ಆಗೋ ಹುಡುಗ ಇರೋದು ಹೊಸಪೇಟೆಯಲ್ಲಿ’ ಎಂದು ಪ್ರಶ್ನೆ ಮಾಡಿದ್ದಾರೆ ನಿರಂಜನ್. ಇದಕ್ಕೆ ಸಂಗೀತಾ ಹುಸಿ ಕೋಪ ಮಾಡಿಕೊಂಡಿದ್ದಾರೆ. ಅವರನ್ನು ಗುರಾಯಿಸಿ ನೋಡಿದ್ದಾರೆ ಸಂಗೀತಾ. ಇದರಿಂದ ನಿರಂಜನ್ ಭಯಗೊಂಡಿದ್ದಾರೆ. ‘ಅಯ್ಯೋ ಸುಮ್ಮನಿರ್ರಪ್ಪ’ ಎಂದು ಕೋರಿಕೊಂಡಿದ್ದಾರೆ ಅವರು.

ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್’ ಮನೆಯಲ್ಲಿ ಸಖತ್ ರೆಬೆಲ್ ಆಗಿ ನಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಅನೇಕರಿಗೆ ಅವರು ಇಷ್ಟ ಆಗಿದ್ದರು. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗಿದ್ದರು. ಕಾರ್ತಿಕ್ ಜೊತೆ ಅವರು ದ್ವೇಷ ಕಟ್ಟಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:00 pm, Thu, 22 February 24