ಉರಿಯುವ ಮಂಜು ಎದುರು ಜ್ವಾಲಾಮುಖಿಯಾದ ಸೌಂದರ್ಯಾ; ನಡುಗಿಹೋದ ಮಹಾಕವಿ
ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಹೆದರದೆ ಮಾತನಾಡುವ ಮಂಜುಗೆ ಸೌಂದರ್ಯಾ ಖಡಕ್ ಉತ್ತರ ನೀಡಿದ್ದಾರೆ. ಕಳಪೆ ಪಟ್ಟ ನೀಡುವ ಪ್ರಕ್ರಿಯೆಯ ವೇಳೆ ಇಬ್ಬರ ನಡುವೆ ತೀವ್ರತರವಾದ ವಾಗ್ವಾದ ನಡೆದಿದೆ. ಮಂಜುಗೆ ಎದುರಾಗಿ ಮಾತನಾಡುವವರೇ ಇಲ್ಲವೆಂಬ ಮಾತಿಗೆ ಸೌಂದರ್ಯಾ ದಿಟ್ಟ ತಿರುಗೇಟು ನೀಡಿರುವುದು ಈಗ ಬಿಗ್ ಬಾಸ್ ಮನೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು
- ಮಂಜು ಮಾತಿಗೆ ಯಾರೂ ಎದುರಿಲ್ಲ ಎಂಬ ಮಾತಿಗೆ ಬ್ರೇಕ್
- ಕಳಪೆ ಪ್ರಕ್ರಿಯೆಯಲ್ಲಿ ಸೌಂದರ್ಯಾ-ಮಂಜು ನಡುವೆ ತೀವ್ರ ವಾಗ್ವಾದ
- ಮಂಜುಗೆ ದಿಟ್ಟ ತಿರುಗೇಟು ನೀಡಿ ಎಲ್ಲರ ಹುಬ್ಬೇರಿಸಿದ ಸೌಂದರ್ಯಾ
ಬಿಗ್ ಬಾಸ್ ಮನೆಯಲ್ಲಿ ಮಾಡರ್ನ್ ಮಹಾಕವಿ ಮಂಜು ಆಟ ಮತ್ತು ಮಾತಿನ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು. ಮಂಜು ಅವರ ಮಾತಿಗೆ ಎದುರು ಉತ್ತರ ನೀಡುವವರೇ ಇಲ್ಲ ಎಂಬ ಪರಿಸ್ಥಿತಿಯಲ್ಲಿ ಈಗ ಸೌಂದರ್ಯಾ ತಕ್ಕ ತಿರುಗೇಟು ನೀಡಿದ್ದಾರೆ. ಇಬ್ಬರ ನಡುವೆ ನಡೆದ ಈ ವಾಗ್ವಾದ ಮನೆಯಲ್ಲಿ ದೊಡ್ಡ ಮಟ್ಟದ ಕಿರಿಕ್‌ಗೆ ಕಾರಣವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಕಳಪೆ ಕೊಡುವ ಪ್ರಕ್ರಿಯೆ ಆರಂಭವಾದಾಗ ವಾತಾವರಣ ಸಂಪೂರ್ಣ ಬಿಸಿಯಾಯಿತು. ಸ್ಪರ್ಧಿಗಳು ಒಬ್ಬರಾದ ಮೇಲೊಬ್ಬರು ಕಳಪೆ ಪಟ್ಟ ನೀಡುವವರ ಹೆಸರನ್ನು ಸೂಚಿಸುತ್ತಿದ್ದರು. ಈ ವೇಳೆ ಸೌಂದರ್ಯಾ ಅವರು ಮಂಜು ಅವರನ್ನು ಕಳಪೆ ಸ್ಥಾನಕ್ಕೆ ಆಯ್ಕೆ ಮಾಡಿದರು. ಇದು ಮಂಜು ಅವರ ಕೋಪಕ್ಕೆ ಕಾರಣವಾಯಿತು.
ಸೌಂದರ್ಯಾ ತಮಗೆ ಕಳಪೆ ನೀಡಿದ್ದಕ್ಕೆ ಸಿಟ್ಟಾದ ಮಂಜು, ಪ್ರತಿಕಾರ ಎಂಬಂತೆ ಸೌಂದರ್ಯಾ ಅವರ ಹೆಸರನ್ನೇ ಕಳಪೆಗೆ ತೆಗೆದುಕೊಂಡರು. ಇದರಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಮಂಜು ಅವರ ಧಾಟಿಗೆ ಜಗ್ಗದೆ ಸೌಂದರ್ಯಾ ಖಡಕ್ ಉತ್ತರ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಮಂಜು ಮಾತಿಗೆ ಯಾರೂ ಎದುರು ನಿಲ್ಲಲಾಗದು ಎಂಬ ಸತ್ಯಕ್ಕೆ ಸೌಂದರ್ಯಾ ಕೌಂಟರ್ ಕೊಟ್ಟಿರುವುದು ಈಗ ಬಿಗ್ ಬಾಸ್ ಮನೆಯಲ್ಲಿ ಹಾಟ್ ಟಾಪಿಕ್ ಆಗಿದೆ.
ಇದನ್ನೂ ಓದಿ: ಗಾನವಿಗೆ ಹೊಡೆಯುವ ಹಂತಕ್ಕೆ ಹೋದ ಗಗನ್; ಅವಾಚ್ಯ ಶಬ್ದಗಳ ಸುರಿಮಳೆ ಇನ್ನು, ಮಂಜುಗೆ ತೊಡೆತಟ್ಟಿ ಮಾತನಾಡುವ ಅಭ್ಯಾಸ ಇದೆ. ಸೌಂದರ್ಯಾ ಶೆಟ್ಟಿ ಕೂಡ ತೊಡೆ ತಟ್ಟಿದ್ದಾರೆ. ಈ ವೇಳೆ ಇಬ್ಬರ ನಡುವೆ ಅವಾಚ್ಯ ಶಬ್ದ ಪದ ಬಳಕೆ ಆಗಿದೆ. ವೀಕೆಂಡ್ನಲ್ಲಿ ಈ ವಿಷಯ ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ. ಸೌಂದರ್ಯಾ ಅವರು ಇತ್ತೀಚೆಗೆ ಇಷ್ಟು ಸಿಟ್ಟಾಗಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




