ಆತನಿಗೆ ಅನೈತಿಕ ಸಂಬಂಧವಿದೆ, ನನಗೆ ಕಿರುಕುಳ ನೀಡುತ್ತಿದ್ದಾನೆ; ಕಿರುತೆರೆ ನಟನ ವಿರುದ್ಧ ಪತ್ನಿ ದೂರು
ಮದುವೆ ಆಗುವ ಸಂದರ್ಭದಲ್ಲಿ ಅರುಣಾ ಅವರಿಂದ ವರದಕ್ಷಿಣೆಯಾಗಿ ರಾಜೇಶ್ 15 ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಗಟ್ಟಿ ತೆಗೆದುಕೊಂಡಿದ್ದರಂತೆ. ಮೂರು ತಿಂಗಳ ಕಾಲ ಹೈದರಾಬಾದ್ನಲ್ಲಿ ಇಬ್ಬರೂ ಸಂಸಾರ ನಡೆಸಿದ್ದರು.
ಟಾಲಿವುಡ್ನ ಖ್ಯಾಟ ನಟ ರಾಜೇಶ್ ದತ್ತ ವಿರುದ್ಧ ಅವರ ಪತ್ನಿಯೇ ದೂರು ದಾಖಲಿಸಿದ್ದಾರೆ. ಪತಿ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ಆತನಿಗೆ ಬೇರೆಯವರ ಜತೆ ಅನೈತಿಕ ಸಂಬಂಧ ಇದೆ ಎಂದು ರಾಜೇಶ್ ದತ್ತ ಹೆಂಡತಿ ದೂರು ನೀಡಿದ್ದಾರೆ.
ಅರುಣಾ ಅಲಿಯಾಸ್ ಸಾಧನಾ 2015ರ ಜೂನ್ 6ರಂದು ಮದುವೆ ಆಗಿದ್ದರು. ವಿಜಯವಾಡದಲ್ಲಿ ದೊಡ್ಡದಾಗಿ ಮದುವೆ ಸಮಾರಂಭ ನಡೆದಿತ್ತು. ಇದಕ್ಕೆ ಅನೇಕ ಧಾರಾವಾಹಿ ನಟ-ನಟಿಯರು ಪಾಲ್ಗೊಂಡಿದ್ದರು. ಮದುವೆ ಆದ ನಂತರ ರಾಜೇಶ್ ಅಕ್ರಮ ಸಂಬಂಧದ ವಿಚಾರ ಗೊತ್ತಾಗಿದೆ ಎಂದು ಅರುಣಾ ಆರೋಪಿಸಿದ್ದಾರೆ.
ಮದುವೆ ಆಗುವ ಸಂದರ್ಭದಲ್ಲಿ ಅರುಣಾ ಅವರಿಂದ ವರದಕ್ಷಿಣೆಯಾಗಿ ರಾಜೇಶ್ 15 ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಗಟ್ಟಿ ತೆಗೆದುಕೊಂಡಿದ್ದರಂತೆ. ಮೂರು ತಿಂಗಳ ಕಾಲ ಹೈದರಾಬಾದ್ನಲ್ಲಿ ಇಬ್ಬರೂ ಸಂಸಾರ ನಡೆಸಿದ್ದರು. ನಂತರ ಚೆನ್ನೈಗೆ ತೆರಳಿದ್ದರು. ಆದರೆ, ಶೂಟಿಂಗ್ ನೆಪ ಹೇಳಿಕೊಂಡು ರಾಜೇಶ್ ಹೈದರಾಬಾದ್ಗೆ ಬರುತ್ತಿದ್ದರು ಎಂಬುದು ಅರುಣಾ ಆರೋಪ.
ನನ್ನ ಪತಿ ಅನೇಕ ಮಹಿಳೆಯರ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ. ನಾನಿಲ್ಲದಾಗ ಕೆಲವರನ್ನು ಆತ ಮನೆಗೂ ಕರೆದುಕೊಂಡು ಬರುತ್ತಿದ್ದ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಆತ ನನಗೆ ಕಿರುಕುಳ ನೀಡಿದ್ದಾನೆ. ನನಗೆ ನ್ಯಾಯ ಬೇಕು ಎಂದು ಅರುಣಾ ಪೊಲೀಸರ ಬಳಿ ಪಟ್ಟು ಹಿಡಿದಿದ್ದಾರೆ.
ಚಂದ್ರಲೇಖಾ ಸೇರಿ ಸಾಕಷ್ಟು ತೆಲುಗು ಧಾರಾವಾಹಿಗಳಲ್ಲಿ ರಾಜೇಶ್ ನಟಿಸುತ್ತಿದ್ದಾರೆ. ಈ ವರೆಗೆ ಅವರು ಸುಮಾರು 28ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ, ಅವರ ಪತ್ನಿಯೇ ರಾಜೇಶ್ ವಿರುದ್ಧ ದೂರು ನೀಡಿರುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:
ಮೈಸೂರಿನ 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, 50 ಸಾವಿರ ದಂಡ