AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thalapathy 67: ‘ದಳಪತಿ’ ವಿಜಯ್​ ನಟನೆಯ 67ನೇ ಚಿತ್ರದ ಶೀರ್ಷಿಕೆ ಅನಾವರಣಕ್ಕೆ ಕ್ಷಣಗಣನೆ; ರಗಡ್​ ಆಗಿದೆ ಪೋಸ್ಟರ್​

Thalapathy Vijay New Movie Title: ‘ದಳಪತಿ’ ವಿಜಯ್​ ಅವರ 67ನೇ ಸಿನಿಮಾದ ಟೈಟಲ್​ ಅನೌನ್ಸ್​ ಆಗಲಿದೆ ಎಂಬುದನ್ನು ತಿಳಿಸಲು ರಗಡ್​ ಆದಂತಹ ಪೋಸ್ಟರ್​ ಹಂಚಿಕೊಳ್ಳಲಾಗಿದೆ. ಇದನ್ನು ಕಂಡು ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ.

Thalapathy 67: ‘ದಳಪತಿ’ ವಿಜಯ್​ ನಟನೆಯ 67ನೇ ಚಿತ್ರದ ಶೀರ್ಷಿಕೆ ಅನಾವರಣಕ್ಕೆ ಕ್ಷಣಗಣನೆ; ರಗಡ್​ ಆಗಿದೆ ಪೋಸ್ಟರ್​
ದಳಪತಿ ವಿಜಯ್ 67ನೇ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
| Edited By: |

Updated on:Feb 03, 2023 | 7:09 AM

Share

ಕಾಲಿವುಡ್​ ನಟ ದಳಪತಿ ವಿಜಯ್​ (Thalapathy Vijay) ಅವರು ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ವರ್ಷ ಆರಂಭದಲ್ಲಿಯೇ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ವಿಜಯ್​ ನಟನೆಯ ‘ವಾರಿಸು’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಅದರ ಬೆನ್ನಲ್ಲೇ ಅವರ ಹೊಸ ಸಿನಿಮಾದ (Thalapathy Vijay New Movie) ಕೆಲಸಗಳು ಆರಂಭ ಆಗಿವೆ. ದಳಪತಿ ವಿಜಯ್​ ನಟನೆಯ 67ನೇ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮನೆ ಮಾಡಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ತಾತ್ಕಾಲಿಕವಾಗಿ ಈ ಸಿನಿಮಾವನ್ನು ‘ದಳಪತಿ 67’ (Thalapathy 67) ಎಂದು ಕರೆಯಲಾಗುತ್ತಿತ್ತು. ಈಗ ಈ ಚಿತ್ರದ ಶೀರ್ಷಿಕೆ ಅನೌನ್ಸ್​ ಮಾಡುವ ಕ್ಷಣ ಹತ್ತಿರವಾಗಿದೆ. ಇಂದು (ಫೆ.3) ಸಂಜೆ 5 ಗಂಟೆಗೆ ಟೈಟಲ್​​ ಅನಾವರಣ ಆಗಲಿದೆ.

ದಳಪತಿ ವಿಜಯ್​ ಅವರ ಹೊಸ ಸಿನಿಮಾದ ಟೈಟಲ್​ ಅನೌನ್ಸ್​ ಆಗಲಿದೆ ಎಂಬುದನ್ನು ತಿಳಿಸಲು ರಗಡ್​ ಆದಂತಹ ಒಂದು ಪೋಸ್ಟರ್​ ಹಂಚಿಕೊಳ್ಳಲಾಗಿದೆ. ಇದನ್ನು ಕಂಡು ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ಇದೊಂದು ಪಕ್ಕಾ ಮಾಸ್​ ಸಿನಿಮಾ ಎಂಬುದಕ್ಕೆ ಈ ಪೋಸ್ಟರ್​ ವಿನ್ಯಾಸವೇ ಸಾಕ್ಷಿ ನೀಡುತ್ತಿದೆ. ಕೈಗೆ ರಕ್ತ ಮೆತ್ತಿಕೊಂಡಂತೆ ಇರುವ ದಳಪತಿ ವಿಜಯ್​ ಅವರ ಸ್ಕೆಚ್​ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ
Image
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Image
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

ಇದನ್ನೂ ಓದಿ: Trisha Krishnan: ದಳಪತಿ ಹೊಸ ಚಿತ್ರಕ್ಕೆ ತ್ರಿಷಾ ನಾಯಕಿ; ಇಲ್ಲಿದೆ ‘ದಳಪತಿ 67’ ಮುಹೂರ್ತದ ಫೋಟೋಗಳು

‘ದಳಪತಿ 67’ ಸಿನಿಮಾದಲ್ಲಿ ವಿಜಯ್​ಗೆ ಜೋಡಿಯಾಗಿ ತ್ರಿಷಾ ಕೃಷ್ಣನ್​ ನಟಿಸಲಿದ್ದಾರೆ. ಫೆಬ್ರವರಿ 1ರಂದು ಈ ಸಿನಿಮಾಗೆ ಮುಹೂರ್ತ ನೆರವೇರಿತು. ಈ ವೇಳೆ ಚಿತ್ರತಂಡದ ಹಲವರು ಭಾಗಿ ಆಗಿದ್ದರು. ಈ ಸಿನಿಮಾದಲ್ಲಿ ವಿಜಯ್​ ಮತ್ತು ತ್ರಿಷಾ ಜೊತೆ ಸಂಜಯ್​ ದತ್​, ಗೌತಮ್​ ವಾಸುದೇವ ಮೆನನ್​, ಮಿಸ್ಕಿನ್​, ಮನ್ಸೂರ್​ ಅಲಿ ಖಾನ್​, ಪ್ರಿಯಾ ಆನಂದ್​ ಮುಂತಾದವರು ನಟಿಸಲಿದ್ದಾರೆ. ಆ ಕಾರಣದಿಂದಾಗಿ ಹೈಪ್​ ಹೆಚ್ಚಾಗಿದೆ.

ಇದನ್ನೂ ಓದಿ: Thalapathy Vijay: ದಳಪತಿ ವಿಜಯ್​ ಕುಟುಂಬದಲ್ಲಿ ಕಲಹ? ‘ವಾರಿಸು’ ರಿಲೀಸ್​ ಸಮಯದಲ್ಲಿ ಹಬ್ಬಿದೆ ಡಿವೋರ್ಸ್​ ಸುದ್ದಿ

ಲೋಕೇಶ್​ ಕನಗರಾಜ್​ ಅವರು ದಳಪತಿ ವಿಜಯ್​ ಜೊತೆ ಈ ಹಿಂದೆ ‘ಮಾಸ್ಟರ್​’ ಸಿನಿಮಾ ಮಾಡಿದ್ದರು. ಅಲ್ಲದೇ ಅವರು ನಿರ್ದೇಶನ ಮಾಡಿದ್ದ ‘ಕೈದಿ’ ಹಾಗೂ ‘ವಿಕ್ರಮ್​’ ಸಿನಿಮಾಗಳ ಕಥೆಗೆ ಲಿಂಕ್​ ನೀಡಲಾಗಿತ್ತು. ಈಗ ಆ ಚಿತ್ರಗಳ ಜೊತೆಗೆ ‘ದಳಪತಿ 67’ ಕಥೆ ಕೂಡ ಕನೆಕ್ಟ್​ ಆಗಲಿದೆ ಎಂದು ಹೇಳಲಾಗುತ್ತಿದೆ.

ಈ ಚಿತ್ರಕ್ಕೆ ‘ಸೆವೆನ್​ ಗ್ರೀನ್​ ಸ್ಟುಡಿಯೋ’ ಬಂಡವಾಳ ಹೂಡುತ್ತಿದೆ. ಚಿತ್ರೀಕರಣ ಆರಂಭ ಆಗುತ್ತಿದ್ದಂತೆಯೇ ಈ ಸಿನಿಮಾದ ಬಿಸ್ನೆಸ್​ ಕೂಡ ಭರ್ಜರಿಯಾಗಿ ನಡೆದಿದೆ. ಇದರ ಕಿರುತೆರೆ ಪ್ರಸಾರ ಹಕ್ಕನ್ನು ಸನ್​ ಟಿವಿ ಖರೀದಿಸಿದೆ. ಒಟಿಟಿ ಹಕ್ಕುಗಳು ನೆಟ್​​ಫ್ಲಿಕ್ಸ್​ ಪಾಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:05 am, Fri, 3 February 23

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ