ಅಂದುಕೊಂಡಷ್ಟು ಗಳಿಕೆ ಮಾಡದ ‘GOAT’; ಮೊದಲ ದಿನವೇ ಡಲ್ ಆಯ್ತು ಕಲೆಕ್ಷನ್

‘ದಿ ಗ್ರೇಟೆಸ್ಟ್​ ಆಫ್ ಆಲ್ ಟೈಮ್’ ಸಿನಿಮಾ ಸೆಪ್ಟೆಂಬರ್ 5ರಂದು ಬಿಡುಗಡೆ ಕಂಡಿದೆ. ದಳಪತಿ ವಿಜಯ್ ನಟನೆಯ ಈ ಚಿತ್ರಕ್ಕೆ ವೆಂಕಟ್ ಪ್ರಭು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆ ಕೈಕೊಡುವ ಲಕ್ಷಣ ಗೋಚರವಾಗಿದೆ. ಸಿನಿಮಾದ ಮೊದಲ ದಿನದ ಗಳಿಕೆ ಲೆಕ್ಕ ಸಿಕ್ಕಿದೆ.

ಅಂದುಕೊಂಡಷ್ಟು ಗಳಿಕೆ ಮಾಡದ ‘GOAT’; ಮೊದಲ ದಿನವೇ ಡಲ್ ಆಯ್ತು ಕಲೆಕ್ಷನ್
ವಿಜಯ್
Follow us
|

Updated on: Sep 06, 2024 | 6:55 AM

ದಳಪತಿ ವಿಜಯ್ ನಟನೆಯ ಸಿನಿಮಾಗಳು ರಿಲೀಸ್ ಆದ ದಿನ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡಿದ ಸಾಕಷ್ಟು ಉದಾಹರಣೆ ಇದೆ. ಆದರೆ, ‘GOAT’ ಸಿನಿಮಾ ಏಕೋ ಅಂದುಕೊಂಡ ಮಟ್ಟಿಗೆ ಗಳಿಕೆ ಮಾಡುತ್ತಿಲ್ಲ. ಇದು ವಿಜಯ್ ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ. ಈ ಸಿನಿಮಾದ ಮೊದಲ ದಿನದ ಗಳಿಕೆ ಲೆಕ್ಕ ಲಭ್ಯವಾಗಿದೆ. ಈ ಚಿತ್ರದ ಪರಿಸ್ಥಿತಿ ‘ಲಿಯೋ’ ಮಾದರಿಯಲ್ಲೇ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.

‘ಲಿಯೋ’ ಸಿನಿಮಾ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆಯಿತು. ಸಿನಿಮಾ ಕೂಡ ಅಂದುಕೊಂಡಷ್ಟು ಕಲೆಕ್ಷನ್ ಮಾಡಲಿಲ್ಲ. ‘GOAT’ ಚಿತ್ರಕ್ಕೆ ಸದ್ಯ ಎಲ್ಲ ಕಡೆಗಳಿಂದ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ. ಹೀಗಾಗಿ ಅಂದುಕೊಂಡ ರೀತಿಯಲ್ಲಿ ಜನರು ಸಿನಿಮಾ ನೋಡುತ್ತಿಲ್ಲ. ‘GOAT’ ಸಿನಿಮಾದ ಮೊದಲ ದಿನದ ಕಲೆಕ್ಷನ್ 43 ಕೋಟಿ ರೂಪಾಯಿ. ತಮಿಳಿನಲ್ಲಿ 38 ಕೋಟಿ ರೂಪಾಯಿ, ಹಿಂದಿಯಲ್ಲಿ 1.7 ಕೋಟಿ ರೂಪಾಯಿ ಹಾಗೂ ತೆಲುಗಿನಿಂದ 3 ಕೋಟಿ ರೂಪಾಯಿ ಗಳಿಕೆ ಆಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಿನಿಮಾ ಭರ್ಜರಿ ಗಳಿಕೆ ಮಾಡಬೇಕಿತ್ತು. ಏಕೆಂದರೆ ಬೆಂಗಳೂರು ಒಂದರಲ್ಲೇ ಈ ಚಿತ್ರಕ್ಕೆ ಬರೋಬ್ಬರಿ 1200 ಶೋಗಳನ್ನು ನೀಡಲಾಗಿತ್ತು. ಚೆನ್ನೈ, ಹೈದರಾಬಾದ್​ನಲ್ಲೂ ಹೆಚ್ಚಿನ ಶೋ ನೀಡಲಾಗಿತ್ತು. ಆದರೆ, ಗಳಿಕೆ ಮಾತ್ರ ಅಂದುಕೊಂಡ ರೀತಿಯಲ್ಲಿ ಆಗಿಲ್ಲ.

ಸ್ಟಾರ್​ ಹೀರೋಗಳ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಇದೆ ಎಂದಾದರೆ ‘ಬುಕ್ ಮೈ ಶೋ’ನಲ್ಲಿ 9+ ರೇಟಿಂಗ್ ಇರುತ್ತದೆ. ಆದರೆ, ‘GOAT’ ಚಿತ್ರಕ್ಕೆ 8.2 ರೇಟಿಂಗ್ ಸಿಕ್ಕಿದೆ. ಐಎಂಡಿಬಿಯಲ್ಲಿ ಕೇವಲ 7.4 ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ‘GOAT’ ಸಿನಿಮಾ ಅಭಿಮಾನಿಗಳಿಗೆ ದಳಪತಿ ವಿಜಯ್ ಸರ್​ಪ್ರೈಸ್; ಎರಡು ಹಾಡು ಹಾಡಿದ ನಟ

‘GOAT’ ಚಿತ್ರದಲ್ಲಿ ದಳಪತಿ ವಿಜಯ್, ಪ್ರಭುದೇವ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ವೆಂಕಟ್ ಪ್ರಭು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.