AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಗ್ ಲೈಫ್ ಚಿತ್ರ: ಕರ್ನಾಟಕದಿಂದ ಕಮಲ್ ಹಾಸನ್​​ಗೆ ಆದ ನಷ್ಟ ಇಷ್ಟೊಂದಾ?

ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರವು ನಿರೀಕ್ಷೆಗಳನ್ನು ಮೀರಲಿಲ್ಲ. ಈ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಲಿಲ್ಲ. ಈ ಎರಡು ವಿಚಾರ ನಿರ್ಮಾಪಕರಿಗೆ ದೊಡ್ಡ ನಷ್ಟವನ್ನುಂಟು ಮಾಡಿತು. ಇದರಿಂದ ಚಿತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಥಗ್ ಲೈಫ್ ಚಿತ್ರ: ಕರ್ನಾಟಕದಿಂದ ಕಮಲ್ ಹಾಸನ್​​ಗೆ ಆದ ನಷ್ಟ ಇಷ್ಟೊಂದಾ?
Kamal Haasan
TV9 Web
| Edited By: |

Updated on: Jun 20, 2025 | 2:58 PM

Share

ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ (Thug Life Movie) ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಯಂತೆ ಸಿನಿಮಾ ಮೂಡಿ ಬಂದಿಲ್ಲ. ‘ಥಗ್ ಲೈಫ್’ ಚಿತ್ರ ಹೀನಾಯ ವಿಮರ್ಶೆ ಪಡೆಯಿತು. ಅಲ್ಲದೆ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಿಲ್ಲ. ಈ ಚಿತ್ರದಿಂದ ಕಮಲ್ ಹಾಸನ್ ದೊಡ್ಡ ನಷ್ಟ ಅನುಭವಿಸಿದರು. ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗದೇ ಇರುವುದಕ್ಕೆ ಅವರಿಗೆ ಆದ ನಷ್ಟ ಎಷ್ಟು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.

‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಕಮಲ್ ಹಾಸನ್ ಹೇಳಿಕೆ ನೀಡಿದರು. ಈ ಹೇಳಿಕೆ ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತು. ಅವರು ಕ್ಷಮೆ ಕೇಳಬೇಕು ಎಂದು ಹೇಳಿದರೂ ಕ್ಷಮೆ ಕೇಳಿಲ್ಲ. ಈ ಕಾರಣಕ್ಕೆ ಸಿನಿಮಾ ರಿಲೀಸ್​ಗೆ ಕರ್ನಾಟಕದಲ್ಲಿ ಅವಕಾಶ ನೀಡಿಲ್ಲ. ಕರ್ನಾಟಕದ ಕಲೆಕ್ಷನ್ ಸೇರಿದ್ದರೆ ಸಿನಿಮಾ ಸ್ವಲ್ಪ ಚೇತರಿಕೆ ಕಾಣುತ್ತಿತ್ತೇನೋ. ಆದರೆ, ಹಾಗಾಗಿಲ್ಲ.

ಜೂನ್ 5ರಂದು ‘ಥಗ್ ಲೈಫ್ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಈವರೆಗೆ ಕರ್ನಾಟಕದಲ್ಲಿ ಬಿಡುಗಡೆ ಕಂಡಿಲ್ಲ. ಈ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗದ ಕಾರಣ ಸುಮಾರು 30 ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿರಬಹುದು ಎಂದು ಊಹಿಸಲಾಗಿದೆ. ತಮಿಳು ಸಿನಿಮಾಗಳಿಗೆ ಬೆಂಗಳೂರಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ಈ ಮೊದಲು ಅನೇಕ ತಮಿಳು ಚಿತ್ರಗಳು ಕರ್ನಾಟಕದಿಂದ ಒಳ್ಳೆಯ ಕಮಾಯಿ ಮಾಡಿದ ಉದಾಹರಣೆ ಇದೆ.

ಇದನ್ನೂ ಓದಿ
Image
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು
Image
ಸೆಲೆಬ್ರಿಟಿಗಳು ಎಷ್ಟು ಗಂಟೆಗೆ ಕೊನೆಯ ಊಟ ಮಾಡುತ್ತಾರೆ? ಇಲ್ಲಿದೆ ಮಾಹಿತಿ
Image
ಲಕ್ಷ್ಮೀ ನಿವಾಸದ ಲಕ್ಷ್ಮೀ ಪಾತ್ರಕ್ಕೆ ಶ್ವೇತಾ ಗುಡ್​ಬೈ; ಹೊಸ ಕಲಾವಿದೆ ಇವರೇ
Image
ರುಕ್ಮಿಣಿ ವಸಂತ್ ಶರ್ಟ್​ ಮೇಲೆ ಟೈಗರ್ ಚಿತ್ರ; ಇದರ ಹಿಂದಿದೆ ದೊಡ್ಡ ರಹಸ್ಯ

ಈ ಪ್ರಕರಣದಲ್ಲಿ ಕಮಲ್ ಹಾಸನ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ ಸಿನಿಮಾ ರಿಲೀಸ್ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ. ಯಾವುದೇ ಕಾನೂನು ಸುವ್ಯವಸ್ಥೆಗೆ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಸರ್ಕಾರದ ಕಡೆಯಿಂದ ಸೂಕ್ತ ಭದ್ರತೆ ಒದಗಿಸುವಂತೆ ಕೋರ್ಟ್ ಸೂಚಿಸಿದೆ.

ಇದನ್ನೂ ಓದಿ: ‘ಥಗ್ ಲೈಫ್’ ಬಿಡುಗಡೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಸುಪ್ರೀಂ ಮಹತ್ವದ ಸೂಚನೆ

‘ಥಗ್ ಲೈಫ್’ ಚಿತ್ರದಲ್ಲಿ ಕಮಲ್ ಹಾಸನ್, ತ್ರಿಷಾ, ಅಭಿರಾಮಿ, ಸಿಂಬು ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾಗೆ ಕಮಲ್ ಹಾಸನ್ ಅವರದ್ದೇ ನಿರ್ಮಾಣ ಇದೆ. ಮಣಿರತ್ನ. ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು