ಎಲ್ಲರೆದುರು ಡೇವಿಡ್ ವಾರ್ನರ್ ಅನ್ನು ನಿಂದಿಸಿದ ಹಿರಿಯ ನಟ: ಆಗಿದ್ದೇನು?
David Warner: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ತೆಲುಗು ಸಿನಿಮಾ, ಹಾಡುಗಳ ಅಭಿಮಾನಿ, ಹಿಂದೆಲ್ಲ ಅವರು ಜನಪ್ರಿಯ ತೆಲುಗು ಸಿನಿಮಾಗಳ ಹಾಡುಗಳು, ಡೈಲಾಗ್ಗಳನ್ನು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಇದೀಗ ತೆಲುಗು ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ರಾಬಿನ್ಹುಡ್’ ಸಿನಿಮಾದಲ್ಲಿ ಡೇವಿಡ್ ವಾರ್ನರ್ ನಟಿಸಿದ್ದಾರೆ. ಆದರೆ ಅದೇ ಸಿನಿಮಾದಲ್ಲಿ ನಟಿರುವು ಹಿರಿಯ ನಟರೊಬ್ಬರು ವಾರ್ನರ್ ಅನ್ನು ಎಲ್ಲರೆದುರು ನಿಂದಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಈಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೋವಿಡ್ ಸಮಯದಲ್ಲೆಲ್ಲ ತೆಲುಗು ಸಿನಿಮಾದ ಹಾಡುಗಳಿಗೆ ರೀಲ್ಸ್ಗಳನ್ನು ಅಪ್ಲೋಡ್ ಮಾಡಿ ತೆಲುಗು ಸಿನಿಮಾ ಪ್ರೇಮಿಗಳ ಮನ ಗೆದ್ದಿದ್ದ ಡೇವಿಡ್ ವಾರ್ನರ್ ಈಗ ನೇರವಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನ ‘ರಾಬಿನ್ಹುಡ್’ ಸಿನಿಮಾದ ಖಳನಟನ ಪಾತ್ರದಲ್ಲಿ ಡೇವಿಡ್ ವಾರ್ನರ್ ನಟಿಸಿದ್ದಾರೆ. ಆದರೆ ಇದೇ ಸಿನಿಮಾದಲ್ಲಿ ನಟಿಸಿರುವ ಹಿರಿಯ ನಟರೊಬ್ಬರು ಎಲ್ಲರೆದುರು ಡೇವಿಡ್ ವಾರ್ನರ್ಗೆ ನಿಂದಿಸಿದ್ದಲ್ಲದೆ, ಎಚ್ಚರಿಕೆ ಸಹ ನೀಡಿದ್ದಾರೆ.
ಇತ್ತೀಚೆಗಷ್ಟೆ ‘ರಾಬಿನ್ಹುಡ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಹೈದರಾಬಾದ್ನಲ್ಲಿ ನಡೆದಿತ್ತು. ಕಾರ್ಯಕ್ರಮಕ್ಕೆ ಡೇವಿಡ್ ವಾರ್ನರ್ ಸಹ ಅತಿಥಿಯಾಗಿ ಆಗಮಿಸಿದ್ದರು. ಸಿನಿಮಾದಲ್ಲಿ ನಟಿಸಿರುವ ಹಲವರು ವೇದಿಕೆ ಮೇಲೆ ಮಾತನಾಡಿದರು. ಹಿರಿಯ ನಟ ರಾಜೇಂದ್ರ ಪ್ರಸಾದ್ ಸಹ ಮಾತನಾಡುತ್ತಾರೆ, ಡೇವಿಡ್ ವಾರ್ನರ್ ಅನ್ನು ವೇದಿಕೆ ಮೇಲಿಂದಲೇ ನಿಂದಿಸಿದ್ದರು. ಮಾತ್ರವಲ್ಲದೆ ಇದು ನಿನಗೆ ಕೊಡುತ್ತಿರುವ ವಾರ್ನಿಂಗ್ ಎಂದು ಎಚ್ಚರಿಕೆ ಸಹ ನೀಡಿದರು.
ಹಿರಿಯ ನಟ ರಾಜೇಂದ್ರ ಪ್ರಸಾದ್, ‘ರಾಬಿನ್ ಹುಡ್’ ಸಿನಿಮಾದ ಪಾತ್ರವರ್ಗ, ನಿರ್ದೇಶಕರು, ನಿರ್ಮಾಪಕರ ಬಗ್ಗೆ ಮಾತನಾಡುತ್ತಾ, ಡೇವಿಡ್ ವಾರ್ನರ್ ಬಗ್ಗೆ ಮಾತನಾಡುವ ಸರದಿ ಬಂದಾಗ, ‘ನಮ್ಮ ನಿರ್ದೇಶಕ ವೆಂಕಿ ಮತ್ತು ನಿತಿನ್ ಸೇರಿಕೊಂಡು ಡೇವಿಡ್ ವಾರ್ನರ್ ಅವರನ್ನೇ ಸಿನಿಮಾಕ್ಕೆ ಕರೆದುಕೊಂಡು ಬಂದಿದ್ದಾರೆ’ ಎಂದರು ರಾಜೇಂದ್ರ, ಮಾತು ಮುಂದುವರೆಸಿ, ‘ಈ ವಾರ್ನರ್ ಎಷ್ಟು ಡೇಂಜರ್ ಎಂದರೆ ಕ್ರಿಕೆಟ್ ಆಡು ಎಂದರೆ ‘ಪುಷ್ಪ’ ರೀತಿ ಸ್ಟೆಪ್ಪು ಹಾಕಿಕೊಂಡಿದ್ದ ಎಂದು ಕೆಟ್ಟದಾಗಿ ‘ಪುಷ್ಪ’ ಸ್ಟೆಪ್ಪು ಹಾಕಿ ತೋರಿಸಿದರು.
ಇದನ್ನೂ ಓದಿ:David Warner: ಡೇವಿಡ್ ವಾರ್ನರ್ಗೆ ಒಲಿದ ನಾಯಕತ್ವ..!
ಅಷ್ಟಕ್ಕೆ ಸುಮ್ಮನಾಗದೆ, ‘ಈ ವಾರ್ನರ್ ಇದ್ದಾನಲ್ಲ ಮಹಾ ಅಪಾಯಕಾರಿ ಎಂದವರೆ ಅಶ್ಲೀಲ ಪದವೊಂದನ್ನು ಬಳಸಿ ವಾರ್ನರ್ಗೆ ಬೈದರು. ಬಳಿಕ ‘ಲೇ ವಾರ್ನರ್ರು ಇದು ನಿನಗೆ ವಾರ್ನಿಂಗು’ ಎಂದರು ರಾಜೇಂದ್ರ ಪ್ರಸಾದ್. ಆದರೆ ಹಿರಿಯ ನಟ ರಾಜೇಂದ್ರ ಪ್ರಸಾದ್ ವಾರ್ನರ್ ಬಗ್ಗೆ ಆಡಿದ ಮಾತುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ವಾರ್ನರ್ ಒಬ್ಬ ಅದ್ಭುತ ಕ್ರಿಕೆಟಿಗ, ಆ ವ್ಯಕ್ತಿಗೆ ತೆಲುಗು ಭಾಷೆ ಬರುವುದಿಲ್ಲ ಎಂಬ ಕಾರಣಕ್ಕೆ ಹೀಗೆ ಅವಾಚ್ಯ ಶಬ್ದಗಳಿಂದ ಟೀಕೆ ಮಾಡುವುದು ಸರಿಯಲ್ಲ’ ಎಂದು ಹಲವರು ಟೀಕಿಸಿದ್ದಾರೆ.
ಬಳಿಕ ಸಿನಿಮಾದ ನಿರ್ದೇಶಕ ವೆಂಕಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ರಾಜೇಂದ್ರ ಅವರು ಸಲುಗೆಯಿಂದ ಹಾಗೆ ಮಾತನಾಡಿದರು. ಅವರು ಕೆಟ್ಟ ಉದ್ದೇಶದಿಂದ ಮಾತನಾಡಿಲ್ಲ. ವಾರ್ನರ್ ಸಹ ಅದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡಿದ್ದಾರೆ. ಕ್ರಿಕೆಟ್ ಸ್ಲೆಡ್ಜಿಂಗ್ ರೀತಿ ಅವರು ಆ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದಿದ್ದಾರೆ. ‘ರಾಬಿನ್ಹುಡ್’ ಸಿನಿಮಾದಲ್ಲಿ ನಿತಿನ್ ನಾಯಕನಾಗಿ ನಟಿಸಿದ್ದಾರೆ. ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 28ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Tue, 25 March 25