AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಸಂಭಾವನೆ ಬಗ್ಗೆ ಬಹಿರಂಗವಾಗಿ ಮಾತನಾಡಿದ ಮಲಯಾಳಂ ಸ್ಟಾರ್ ನಟ

Tovino Thomas: ಮಲಯಾಳಂನ ಸ್ಟಾರ್ ಯುವನಟರುಗಳಲ್ಲಿ ಒಬ್ಬರಾದ ಟೊವಿನೊ ಥಾಮಸ್ ತಾವು ಸಿನಿಮಾಕ್ಕೆ ಪಡೆಯುವ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಸಂಭಾವನೆ ಬಗ್ಗೆ ಬಹಿರಂಗವಾಗಿ ಮಾತನಾಡಿದ ಮಲಯಾಳಂ ಸ್ಟಾರ್ ನಟ
ಟೊವಿನೊ ಥಾಮಸ್
ಮಂಜುನಾಥ ಸಿ.
|

Updated on: Nov 16, 2023 | 8:02 PM

Share

ಕೋವಿಡ್​ ಬಳಿಕ ಮಲಯಾಳಂ (Malayalam) ಚಿತ್ರರಂಗಕ್ಕೆ ದೊಡ್ಡ ಮುನ್ನಡೆ ದೊರೆತಿದೆ. ಕೋವಿಡ್ ಸಮಯದಲ್ಲಿ ಮಲಯಾಳಂ ಚಿತ್ರರಂಗ ಸಿನಿಪ್ರೇಮಿಗಳಿಗೆ ಇನ್ನಷ್ಟು-ಮತ್ತಷ್ಟು ಪರಿಚಯವಾಗಿದೆ. ಎಷ್ಟೋ ಜನಕ್ಕೆ ಮಮ್ಮುಟಿ, ಮೋಹನ್​ಲಾಲ್ ಹೊರತಾಗಿ ಇನ್ನೊಬ್ಬ ಮಲಯಾಳಂ ನಟನ ಹೆಸರು ಸಹ ಕೋವಿಡ್​ಗೆ ಮುಂಚೆ ಗೊತ್ತಿರಲಿಲ್ಲ, ಆದರೆ ಈಗ ಮಲಯಾಳಂನ ಕೆಲವು ನಟರ ಸಿನಿಮಾಗಳಿಗಾಗಿ ಕಾದು ಚಿತ್ರಮಂದಿರದಲ್ಲಿ ಮೊದಲ ದಿನ ನೋಡುವಂತೆ ಪರಿಸ್ಥಿತಿ ಬದಲಾಗಿದೆ. ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್, ನಿವಿನ್ ಪೌಲಿ, ಬಿಜು ಇನ್ನೂ ಕೆಲವರು ಮಲಯಾಳಂ ಚಿತ್ರರಂಗದ ಹೊರಗೂ ಸ್ಟಾರ್​ಗಳಾಗಿದ್ದಾರೆ. ಇದೇ ಸ್ಟಾರ್ ಮಲಯಾಳಂ ನಟರ ಪಟ್ಟಿಗೆ ಸೇರುವ ಮತ್ತೊಂದು ಹೆಸರು ಟೊವಿನೊ ಥಾಮಸ್.

ಫಹಾದ್ ಫಾಸಿಲ್​ ರೀತಿಯಲ್ಲಿ, ಟೊವಿನೊ ಥಾಮಸ್ ಸಹ ಸ್ಟಾರ್​ ಗಿರಿ, ಹೀರೋಗಿರಿಯ ಸಿನಿಮಾಗಳಿಗೆ ಕಟ್ಟು ಬೀಳದೆ ತಮ್ಮದೇ ಆದ ಮಾದರಿಯಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆ ಮೂಲಕ ಒಂದರ ಮೇಲೊಂದು ಹಿಟ್ ಸಿನಿಮಾ ನೀಡುವ ಜೊತೆಗೆ ಅಭಿಮಾನಿಗಳನ್ನೂ ಸಹ ಸಂಪಾದಿಸುತ್ತಾ ಸಾಗುತ್ತಿದ್ದಾರೆ. ಮಲಯಾಳಂ ಚಿತ್ರರಂಗದ ಮಾರುಕಟ್ಟೆಯನ್ನು ಹಿರಿದು ಮಾಡುವ ಬಗ್ಗೆ, ತಮ್ಮ ಚಿತ್ರರಂಗದಲ್ಲಿ ವಿಶ್ವಮಟ್ಟದ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಬೇಕೆಂಬ ಕನಸು ಹೊಂದಿರುವ ಟೊವಿನೋ ಥಾಮಸ್, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮ್ಮ ಸಂಭಾವನೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ:Salman Khan: ಸಲ್ಮಾನ್ ಭೇಟಿಯಾದ ಮೇಲೆ ಅವರೆಡೆಗಿನ ದೃಷ್ಟಿಕೋನ ಬದಲಾಯಿತು; ಮಲಯಾಳಂ ನಟ ಟೊವಿನೊ

ಟೊವಿನೋ ಥಾಮಸ್ ನಟನೆಯ ‘ಅದೃಶ್ಯ ಜಲಕಂಗಲ್’ ಸಿನಿಮಾ ಇದೇ ನವೆಂಬರ್ 24ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾದ ಪ್ರಚಾರದಲ್ಲಿ ನಿರತರಾಗಿರುವ ಟೊವಿನೋ ಥಾಮಸ್, ತಾವು ಸಿನಿಮಾಗಳಿಗೆ ಪಡೆಯುವ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ”ನಾನು ಎಲ್ಲ ಸಿನಿಮಾಕ್ಕೂ ಒಂದೇ ಸಂಭಾವನೆ ಪಡೆಯುವುದಿಲ್ಲ. ಸಿನಿಮಾ ಎಷ್ಟು ದೊಡ್ಡದು, ನಿರ್ಮಾಣ ಸಂಸ್ಥೆ, ಸಿನಿಮಾಕ್ಕೆ ನಾನು ಹಾಕಬೇಕಾದ ಸಮಯ, ಶ್ರಮ, ಸಿನಿಮಾ ಯಾವ ರೀತಿಯ ಬ್ಲಾಕ್ ಬಸ್ಟರ್ ಆಗಬಹುದು ಎಂಬುದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪ್ರತಿ ಸಿನಿಮಾಕ್ಕೂ ಬೇರೆ-ಬೇರೆ ಮೊತ್ತದ ಹಣವನ್ನು ಸಂಭಾವನೆಯಾಗಿ ಪಡೆಯುತ್ತೇನೆ” ಎಂದಿದ್ದಾರೆ.

‘ಅದೃಶ್ಯ ಜಲಕಂಗಲ್’ ಸಿನಿಮಾಕ್ಕೆ ಕಡಿಮೆ ಸಂಭಾವನೆ ಪಡೆದಿದ್ದೇನೆ. ಇದು ಹಿಟ್ ಆಗುವ ಸಿನಿಮಾ ಆಗಿದ್ದರೂ ಸಹ, ಸಾಂಪ್ರದಾಯಿಕ ಮಾದರಿ ಹಿಟ್ ಆಗುವ ಸಿನಿಮಾ ಅಲ್ಲ. ಹಾಗಾಗಿ ಈ ಸಿನಿಮಾಕ್ಕೆ ಸಂಭಾವನೆ ಕಡಿಮೆ ತೆಗೆದುಕೊಂಡಿದ್ದೇನೆ ಎಂದಿದ್ದಾರೆ. ‘ಅದೃಶ್ಯ ಜಲಕಂಗಲ್’ ಸಿನಿಮಾದಲ್ಲಿ ಸತ್ತವರೊಟ್ಟಿಗೆ ಮಾತನಾಡುವ ವಿಚಿತ್ರ ಮನಸ್ಥಿತಿಯ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಟೊವಿನೊ ಥಾಮಸ್ ಜೊತೆಗೆ ನಿಮಿಷಾ ಸಜಯನ್ ಸಹ ನಟಿಸಿದ್ದಾರೆ.

ಟೊವಿನೋ ಥಾಮಸ್, ‘ಮಿನ್ನಲ್ ಮುರಲಿ’, ‘ತಲ್ಲುಮಾಲ’ ಈ ವರ್ಷ ಆಸ್ಕರ್​ಗೆ ಅಧಿಕೃತ ಪ್ರವೇಶ ಪಡೆದಿರುವ ‘2018’ ಸಿನಿಮಾಗಳು ಮಾತ್ರವಲ್ಲದೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅದೃಶ್ಯ ಜಲಕಂಗಲ್’ ಸಿನಿಮಾದ ಜೊತೆಗೆ ಇನ್ನೂ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್