AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಶ್ಚಿತಾರ್ಥ ಮಾಡಿಕೊಂಡು ನಂತರ ಬೇಡ ಎಂದಿದ್ದ ನಟಿ ತ್ರಿಷಾ; ಕಾರಣವೇನು?

ಇಂದು ತ್ರಿಷಾ ಅವರ 42ನೇ ಜನ್ಮದಿನ. ಈ ವೇಳೆ ಅವರ ನಿಶ್ಚಿತಾರ್ಥದ ಬಗ್ಗೆ ಕೆಲವು ವಿಷಯಗಳು ವೈರಲ್ ಆಗಿವೆ. ಉದ್ಯಮಿ ವರುಣ್ ಜೊತೆಗಿನ ಅವರ ಸಂಬಂಧ ಕುಟುಂಬದ ವಿರೋಧ ಮತ್ತು ತ್ರಿಷಾ ಅವರ ವೃತ್ತಿಜೀವನದ ಮೇಲಿನ ನಿಯಂತ್ರಣದಿಂದಾಗಿ ಮುರಿದು ಬಿದ್ದಿತ್ತು. ನಿಶ್ಚಿತಾರ್ಥದ ನಂತರ ಅವರು ಮದುವೆ ಆಗುವ ಬಗ್ಗೆ ಆಲೋಚಿಸಿಲ್ಲ.

ನಿಶ್ಚಿತಾರ್ಥ ಮಾಡಿಕೊಂಡು ನಂತರ ಬೇಡ ಎಂದಿದ್ದ ನಟಿ ತ್ರಿಷಾ; ಕಾರಣವೇನು?
ತ್ರಿಷಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: May 04, 2025 | 6:30 AM

Share

ನಟಿ ತ್ರಿಷಾ (Trisha) ಅವರಿಗೆ ಇಂದು (ಮೇ 4) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ಹೇಳುತ್ತಿರುವುದನ್ನು ನೀವು ಕಾಣಬಹುದು. ತ್ರಿಷಾ ಅವರು 1983ರ ಮೇ 4ರಂದು ಜನಿಸಿದರು. ಅವರಿಗೆ ಈಗ 42 ವರ್ಷ. ತ್ರಿಷಾ ಇನ್ನೂ ವಿವಾಹ ಆಗಿಲ್ಲ. ಹಾಗಂತ ಅವರು ಈ ಬಗ್ಗೆ ಆಲೋಚನೆ ಮಾಡಿಯೇ ಇಲ್ಲ ಎಂದು ಹೇಳೋಕೆ ಆಗುವುದಿಲ್ಲ. ಏಕೆಂದರೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಅವರಿಗೆ ವಿವಾಹ ಆಗಿ 10 ವರ್ಷ ಆಗಿರುತ್ತಿತ್ತು ಎನ್ನುವ ವಿಚಾರ ಅನೇಕರಿಗೆ ತಿಳಿದೇ ಇಲ್ಲ ಎನ್ನಬಹುದು.

ತ್ರಿಷಾ ಅವರು ವರುಣ್ ಅವರನ್ನು ಮದುವೆ ಆಗ ಬಯಸಿದ್ದರು. 2015ರ ಜನವರಿ 23ರಂದು ಕುಟುಂಬದವರ ಸಮ್ಮುಖದಲ್ಲಿ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ತ್ರಿಷಾ ಅವರು ಮದುವೆ ಆಗ ಬಯಸ್ಸಿದ್ದ ವ್ಯಕ್ತಿ ವರುಣ್ ಅವರು ಉದ್ಯಮಿ ಎಂದು ತಿಳಿದು ಬಂದಿತ್ತು. ನಿಶ್ಚಿತಾರ್ಥದ ಫೋಟೋಗಳು ವೈರಲ್ ಆದವು. ತ್ರಿಷಾ ಹಾಗೂ ವರುಣ್ ಅವರು ಸುತ್ತಾಡಲು ಆರಂಭಿಸಿದರು ಎನ್ನಿ. ಆದರೆ, ಅವರು ಒಂದು ನಿರ್ಧಾರ ತೆಗೆದುಕೊಂಡರು.

ತ್ರಿಷಾ ಅವರು ಮೇ ತಿಂಗಳಲ್ಲಿ ನಿಶ್ಚಿತಾರ್ಥವನ್ನು ಕೊನೆ ಮಾಡಿಕೊಂಡರು. ನಿರೀಕ್ಷೆಗಳು ಇಬ್ಬರಿಗೂ ಹೆಚ್ಚೇ ಇದ್ದವು. ಇದುವೇ ಡಿವೋರ್ಸ್​ಗೆ ಕಾರಣ ಎನ್ನಲಾಗಿದೆ. ಇವರು ಬೇರೆ ಆಗಲು ಮತ್ತೊಂದು ಕಾರಣವೂ ಇತ್ತು. ವರುಣ್ ಕುಟುಂಬ ಉದ್ಯಮದ ಹಿನ್ನೆಲೆ ಹೊಂದಿತ್ತು. ಅವರು ನಟಿಯನ್ನು ಮದುವೆ ಆಗುತ್ತಿರುವುದು ಕುಟುಂಬದವರಿಗೆ ಇಷ್ಟವೇ ಇರಲಿಲ್ಲವಂತೆ. ಹೀಗಾಗಿ, ಕುಟುಂಬದವರು ಅಸಮಾಧಾನ ಹೊರಹಾಕಿದ್ದರು. ಇದೇ ಕುಟುಂಬದ ಹಿನ್ನೆಲೆ ಹೊಂದಿರುವವರನ್ನು ಕರೆತರುವಂತೆ ಅವರು ಒತ್ತಾಯ ಹೇರಿದ್ದರು.

ಇದನ್ನೂ ಓದಿ
Image
ನಟಿ ಮಾಡಿದ ಕುಹಕದ ಮಾತಿನಿಂದ ಸಿಕ್ಸ್ ಪ್ಯಾಕ್​ ಮಾಡಿದ್ದ ಅಲ್ಲು ಅರ್ಜುನ್
Image
ಬುಡಕಟ್ಟು ಜನಾಂಗದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆ ಕೇಳಿದ ವಿಜಯ್
Image
‘ಕೆಜಿಎಫ್ 2’ ರಿಲೀಸ್ ಆಗಿ 3 ವರ್ಷವಾದರೂ ನಿಂತಿಲ್ಲ ಟಾಕ್
Image
ಖ್ಯಾತ ನಿರ್ದೇಶಕ ರಾಜಮೌಳಿಯ ನೆಚ್ಚಿನ ನಟಿ ಯಾರು ಗೊತ್ತಾ?

ತ್ರಿಷಾಗೂ ವರುಣ್​ನ ಮದುವೆ ಆಗಿದ್ದರೆ ಸಾಕಷ್ಟು ತೊಂದರೆ ಆಗುತ್ತಿತ್ತಂತೆ. ಇದಕ್ಕೆ ಕಾರಣವೂ ಇದೆ. ತ್ರಿಷಾ ಅವರನ್ನು ನಿಯಂತ್ರಿಸಲು ವರುಣ್ ಇಷ್ಟಪಡುತ್ತಿದ್ದರು. ಅಲ್ಲದೆ, ನಟನೆಯನ್ನು ತೊರೆಯುವಂತೆ ಅವರು ಒತ್ತಡ ಹೇರಿದ್ದರು. ಇದನ್ನು ಗಮನಿಸಿದ ಅವರು ನಿಶ್ಚಿತಾರ್ಥದಿಂದ ದೂರವೇ ಇರಲು ನಿರ್ಧರಿಸಿದರು.

ಇದನ್ನೂ ಓದಿ: ಪ್ರತಿ ದಿನ ಮಲಗುವ ಮುನ್ನ ಈ ಅಭ್ಯಾಸ ತಪ್ಪಿಸುವುದಿಲ್ಲ ನಟಿ ತ್ರಿಷಾ

ಈ ಎರಡೂ ವಿಚಾರಕ್ಕೆ ಇಬ್ಬರ ಮಧ್ಯೆ ತಿಕ್ಕಾಟ ಆರಂಭ ಆಯಿತು. ಇದು ಬೇರೆಯದೇ ಹಂತಕ್ಕೆ ಹೋಯಿತು. ಮದುವೆ ಆದರೆ ಜೀವನ ನಡೆಸಲು ಸಾಧ್ಯವೇ ಇಲ್ಲ ಎಂದು ಇವರಿಗೆ ಅನಿಸಿದೆ. ಈ ಕಾರಣದಿಂದ ಇಬ್ಬರೂ ದೂರ ಆದರು. ತ್ರಿಷಾ ಆ ಬಳಿಕ ವಿವಾಹ ಆಗಲೇ ಇಲ್ಲ. ಆ ಬಗ್ಗೆ ಅವರು ಯೋಚಿಸಿಯೂ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.