AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆ ಸೇರಿದ ಉರ್ಫಿ ಜಾವೇದ್; ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ನಟಿಯ ಪೋಸ್ಟ್

ಸಾಮಾಜಿಕ ಜಾಲತಾಣದ ನಟಿ ಉರ್ಫಿ ಜಾವೇದ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಮಂಚದ ಮೇಲಿದ್ದುಕೊಂಡೇ ಐವಿ ಕ್ಯಾನುಲಾ ಹಾಕಿರುವ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅನಾರೋಗ್ಯ ಮತ್ತು ಆಸ್ಪತ್ರೆ ವಾಸದ ಬಗ್ಗೆ ನಟಿ ಬರೆದುಕೊಂಡಿದ್ದು, ಅವರ ಅಭಿಮಾನಿಗಳಲ್ಲಿ ತೀವ್ರ ಆತಂಕ ಹಾಗೂ ಕಳವಳ ಮೂಡಿಸಿದೆ.

ಆಸ್ಪತ್ರೆ ಸೇರಿದ ಉರ್ಫಿ ಜಾವೇದ್; ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ನಟಿಯ ಪೋಸ್ಟ್
ಉರ್ಫಿ
ರಾಜೇಶ್ ದುಗ್ಗುಮನೆ
|

Updated on: Aug 28, 2026 | 9:43 AM

Share

ಮುಖ್ಯಾಂಶಗಳು

  • ದಿಢೀರ್ ಆಸ್ಪತ್ರೆಗೆ ದಾಖಲಾದ ಉರ್ಫಿ ಜಾವೇದ್
  • ಆಸ್ಪತ್ರೆ ಮಂಚದಿಂದಲೇ ಐವಿ ಕ್ಯಾನುಲಾ ಫೋಟೋ ಹಂಚಿಕೊಂಡ ಉರ್ಫಿ
  • ತೀವ್ರ ಖಿನ್ನತೆ ಮತ್ತು ಆರೋಗ್ಯ ಸಮಸ್ಯೆಯ ಬಗ್ಗೆ ಉರ್ಫಿ ಓಪನ್ ಟಾಕ್

ಸಾಮಾಜಿಕ ಜಾಲತಾಣದ ಖ್ಯಾತ ನಟಿ ಉರ್ಫಿ ಜಾವೇದ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾವು ಆಸ್ಪತ್ರೆಯ ಮಂಚದ ಮೇಲೆ ಮಲಗಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಪ್ರತಿ ವರ್ಷವೂ ತಮಗೆ ಆಸ್ಪತ್ರೆ ವಾಸ ತಪ್ಪಿದ್ದಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ನಟಿ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

ಉರ್ಫಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸರಣಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಹಿನ್ನೆಲೆಯಲ್ಲಿ ‘ಇತ್ನಿ ಶಕ್ತಿ ಹಮೇ ದೇ ನಾ ದಾತಾ’ ಹಾಡು ಪ್ಲೇ ಆಗುತ್ತಿದೆ. ಕೈಗೆ ಐವಿ ಕ್ಯಾನುಲಾ ಹಾಕಿಕೊಂಡಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಹಂತವೇ ಅತ್ಯಂತ ಕೆಟ್ಟದ್ದು ಎಂದು ಅವರು ಬರೆದಿದ್ದಾರೆ. ಅನೆಸ್ಥೇಷಿಯಾ ತಗೊಂಡಾಗ ಸಿಗುವ ಮಜಾವೇ ಬೇರೆ ಎಂದು ನಟಿ ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಾಗಲು ನಿಖರ ಕಾರಣ ಏನೆಂದು ಉರ್ಫಿ ತಿಳಿಸಿಲ್ಲ. ಅವರ ತಂಡ ಕೂಡ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಉರ್ಫಿ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುತ್ತಾರೆ. ತಮ್ಮ ಆರೋಗ್ಯದ ಸಮಸ್ಯೆಗಳ ಬಗ್ಗೆ ಅವರು ಈ ಹಿಂದೆಯೂ ಮುಕ್ತವಾಗಿ ಮಾತನಾಡಿದ್ದರು.

2026ರ ಜನವರಿಯಲ್ಲಿ ತಾವು ತೀವ್ರ ಖಿನ್ನತೆ ಮತ್ತು ಅನಾರೋಗ್ಯದಿಂದ ಬಳಲಿದ್ದಾಗಿ ಹೇಳಿದ್ದರು. ‘ಆ ಸಮಯದಲ್ಲಿ ದೇಹದ ತೂಕ 38 ಕೆಜಿಗೆ ಕುಸಿದಿತ್ತು. ಆಗ ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡುತ್ತಿದ್ದೆ. ಕಾರ್ಬೋಹೈಡ್ರೇಟ್ಸ್ ಸಂಪೂರ್ಣವಾಗಿ ತ್ಯಜಿಸಿದ್ದರಿಂದ ಕೋಪ ಮತ್ತು ಕಿರಿಕಿರಿ ಹೆಚ್ಚಾಗಿತ್ತು. ನಂತರ ವೇಟ್ ಟ್ರೈನಿಂಗ್ ಮೂಲಕ ಚೇತರಿಸಿಕೊಂಡಿದ್ದಾಗಿ’ ಹೇಳಿದ್ದರು.

ಇದನ್ನೂ ಓದಿ: ಬಿಯರ್ ಕ್ಯಾನಿನಲ್ಲಿ ಮಾಡಿದ ಉಡುಪು ಧರಿಸಿದ ನಟಿ ಉರ್ಫಿ ಜಾವೇದ್: ವಿಡಿಯೋ

ಜೂನ್‌ನಲ್ಲಿ ಉರ್ಫಿ ಮುಖ ಊದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಫಿಲ್ಲರ್ಸ್ ಕಾರಣಕ್ಕೆ ಮುಖ ಊದಿಕೊಂಡಿದೆ ಎಂಬ ವದಂತಿಯನ್ನು ಅವರು ನಿರಾಕರಿಸಿದ್ದರು. ಅ ಅಲರ್ಜಿ ಮತ್ತು ಮಾನಸಿಕ ಒತ್ತಡವೇ ಇದಕ್ಕೆ ಮುಖ್ಯ ಕಾರಣವಾಗಿತ್ತು. ಮೂರು ಬೆಕ್ಕುಗಳಿದ್ದು ತಮಗೆ ಬೆಕ್ಕುಗಳ ಅಲರ್ಜಿ ಇದೆ ಎಂದು ಅವರು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More