20 ಮಿಲಿಯನ್​ ವೀವ್ಸ್​, 5 ಲಕ್ಷ ಲೈಕ್ಸ್​ ಪಡೆದ ‘ಲೈಗರ್​’ ಗ್ಲಿಂಪ್ಸ್​; ವಿಜಯ್​ ದೇವರಕೊಂಡಗೆ ಫ್ಯಾನ್ಸ್​ ಉಘೇ ಉಘೇ

20 ಮಿಲಿಯನ್​ ವೀವ್ಸ್​, 5 ಲಕ್ಷ ಲೈಕ್ಸ್​ ಪಡೆದ ‘ಲೈಗರ್​’ ಗ್ಲಿಂಪ್ಸ್​; ವಿಜಯ್​ ದೇವರಕೊಂಡಗೆ ಫ್ಯಾನ್ಸ್​ ಉಘೇ ಉಘೇ
ವಿಜಯ್ ದೇವರಕೊಂಡ

Glimpse of Liger: ‘ಲೈಗರ್​’ ಚಿತ್ರದಲ್ಲಿ ವಿಜಯ್​ ದೇವರಕೊಂಡ ಅವರು ಬಾಕ್ಸಿಂಗ್​ ಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಝಲಕ್​ ಹೇಗಿರಲಿದೆ ಎಂಬುದನ್ನು ತೋರಿಸುವಲ್ಲಿ ಈ ಗ್ಲಿಂಪ್ಸ್​ ಯಶಸ್ವಿ ಆಗಿದೆ.

TV9kannada Web Team

| Edited By: Madan Kumar

Jan 02, 2022 | 7:29 PM


ನಟ ವಿಜಯ್​ ದೇವರಕೊಂಡ (Vijay Deverakonda) ಅವರು ದೊಡ್ಡ ಮಟ್ಟದಲ್ಲಿ ಸೌಂಡು ಮಾಡುತ್ತಿದ್ದಾರೆ. ‘ಗೀತಾ ಗೋವಿಂದಂ’, ‘ಡಿಯರ್​ ಕಾಮ್ರೇಡ್​’, ‘ಅರ್ಜುನ್​ ರೆಡ್ಡಿ’ ಸೇರಿದಂತೆ ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ರೀತಿಯಲ್ಲಿ ಜನರನ್ನು ರಂಜಿಸಿದ್ದ ಅವರು ಈಗ ‘ಲೈಗರ್​’ (Liger Movie) ಸಿನಿಮಾ ಮೂಲಕ ಬೇರೆಯದೇ ಗೆಟಪ್​ ತಾಳಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಲು ಹಲವು ಕಾರಣಗಳಿವೆ. ಇತ್ತೀಚೆಗಷ್ಟೇ ‘ಲೈಗರ್’​ ಸಿನಿಮಾದ ಗ್ಲಿಂಪ್ಸ್​ (Liger First Glimpse) ಬಿಡುಗಡೆ ಮಾಡಲಾಗಿತ್ತು. ಅದನ್ನು ಕಂಡು ವಿಜಯ್​ ದೇವರಕೊಂಡ ಫ್ಯಾನ್ಸ್​ ಫಿದಾ ಆಗಿದ್ದಾರೆ. ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಈ ದೃಶ್ಯ ತುಣುಕಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್​ (Puri Jagannadh) ನಿರ್ದೇಶನ ಮಾಡುತ್ತಿದ್ದು, ವಿಜಯ್​ ದೇವರಕೊಂಡಗೆ ಜೋಡಿಯಾಗಿ ಅನನ್ಯಾ ಪಾಂಡೆ (Ananya Pandey) ನಟಿಸುತ್ತಿದ್ದಾರೆ.

‘ಲೈಗರ್​’ ಚಿತ್ರದಲ್ಲಿ ವಿಜಯ್​ ದೇವರಕೊಂಡ ಅವರು ಬಾಕ್ಸಿಂಗ್​ ಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಝಲಕ್​ ಹೇಗಿರಲಿದೆ ಎಂಬುದನ್ನು ತೋರಿಸುವಲ್ಲಿ ಈ ಗ್ಲಿಂಪ್ಸ್​ ಯಶಸ್ವಿ ಆಗಿದೆ. ಬಿಡುಗಡೆಯಾಗಿ ಎರಡು ದಿನ ಕಳೆಯುವುದರೊಳಗೆ ಇದನ್ನು 20 ಮಿಲಿಯನ್​ ಬಾರಿ ವೀಕ್ಷಣೆ ಮಾಡಲಾಗಿದೆ. 5 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಆ ಮೂಲಕ ‘ಲೈಗರ್​’ ಚಿತ್ರ ದಾಖಲೆ ಬರೆದಿದೆ. ಯೂಟ್ಯೂಬ್​ನಲ್ಲಿ ಈ ವಿಡಿಯೋ ನಂ.1 ಟ್ರೆಂಡಿಂಗ್​ ಕೂಡ ಆಗಿತ್ತು.

ಈ ಚಿತ್ರವನ್ನು ಕರಣ್​ ಜೋಹರ್​ ನಿರ್ಮಾಣ ಮಾಡುತ್ತಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ವಿಶ್ವ ವಿಖ್ಯಾತ ಬಾಕ್ಸರ್​ ಮೈಕ್​ ಟೈಸನ್​ ಕೂಡ ಅಭಿನಯಿಸಿರುವುದು ವಿಶೇಷ. ಬಾಕ್ಸಿಂಗ್​ ಜಗತ್ತಿನಲ್ಲಿ ಮೈಕ್​ ಟೈಸನ್​ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್​ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಅಂಥ ದಿಗ್ಗಜನನ್ನು ‘ಲೈಗರ್​’ ಸಿನಿಮಾ ತಂಡ ಭಾರತಕ್ಕೆ ಕರೆತರುತ್ತಿದೆ.

ಆಗಸ್ಟ್ ತಿಂಗಳಲ್ಲಿ ‘ಲೈಗರ್​’ ಸಿನಿಮಾ ತೆರೆಗೆ ಬರುತ್ತಿದೆ. ಇದಕ್ಕೆ ಇನ್ನೂ 8 ತಿಂಗಳು ಬಾಕಿ ಇದೆ. ಈಗ ಸಿನಿಮಾ ಬಗ್ಗೆ ಒಂದೊಂದೇ ಅಪ್​ಡೇಟ್​ ನೀಡಲಾಗುತ್ತಿದೆ. ಹೊಸ ವರ್ಷಕ್ಕೂ ಮುನ್ನ, ‘ಲೈಗರ್​’ ಚಿತ್ರದಿಂದ ಚಿಕ್ಕ ವಿಡಿಯೋ ರಿಲೀಸ್​ ಆಗಿತ್ತು. ಈ ವಿಡಿಯೋದಲ್ಲಿ ವಿಜಯ್​ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಅಚ್ಚರಿ ಹೊರಹಾಕಿದ್ದಾರೆ. ಈ ಗ್ಲಿಂಪ್ಸ್​ ಬಗ್ಗೆ ಅಭಿಮಾನಿಗಳಿಂದ ಪ್ರತಿಕ್ರಿಯೆ ಪಡೆಯಲಾಯಿತು. ಈ ವೇಳೆ ಎಲ್ಲಾ ಅಭಿಮಾನಿಗಳು ಈ ವಿಡಿಯೋ ಬಗ್ಗೆ ಪಾಸಿಟಿವ್​ ಆಗಿ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಅದ್ಭುತವಾಗಿದೆ ಎಂಬಿತ್ಯಾದಿ ಮಾತುಗಳನ್ನು ಹೇಳಿದ್ದಾರೆ.

ಇದನ್ನೂ ಓದಿ:

Liger First Glimpse : ‘ಲೈಗರ್​’ ಗ್ಲಿಂಪ್ಸ್​​ ನೋಡಿ ಅಭಿಮಾನಿಗಳ ರಿಯಾಕ್ಷನ್​ ಹೇಗಿತ್ತು? ಇಲ್ಲಿದೆ ವಿಡಿಯೋ

 ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ ದಕ್ಷಿಣದ ಹೀರೋಗಳು; ಯಶಸ್ಸಿನ ನಿರೀಕ್ಷೆಯಲ್ಲಿ ವಿಜಯ್​ ದೇವರಕೊಂಡ

Follow us on

Related Stories

Most Read Stories

Click on your DTH Provider to Add TV9 Kannada