AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ದೇವರಕೊಂಡ ವಾಟ್ಸಾಪ್ ಚಾಟ್ ಸ್ಕ್ರೀನ್​ಶಾಟ್ ವೈರಲ್; ಪ್ರಮುಖ ವಿಷಯ ಲೀಕ್

ವಿಜಯ್ ದೇವರಕೊಂಡ ಅವರ ಜೀವನದಲ್ಲಿ ಸಿನಿಮಾ ಮತ್ತು ಕುಟುಂಬ ಎರಡರ ಸಮತೋಲನವನ್ನು ಕಾಪಾಡಿಕೊಂಡು ಹೋಗುತ್ತಿದ್ದಾರೆ.ತಮ್ಮ ಬಿಡುವಿನ ಸಮಯದಲ್ಲಿ ತಾಯಿಯೊಂದಿಗೆ ಹೊರಗೆ ಊಟ ಮಾಡಿದ ಘಟನೆಯನ್ನು ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬದೊಂದಿಗೆ ಸಮಯ ಕಳೆಯುವುದರ ಬಗ್ಗೆ ಅವರು ಮಾತನಾಡಿದ್ದಾರೆ ಅನ್ನೋದು ವಿಶೇಷ.

ವಿಜಯ್ ದೇವರಕೊಂಡ ವಾಟ್ಸಾಪ್ ಚಾಟ್ ಸ್ಕ್ರೀನ್​ಶಾಟ್ ವೈರಲ್; ಪ್ರಮುಖ ವಿಷಯ ಲೀಕ್
ವಿಜಯ್
ರಾಜೇಶ್ ದುಗ್ಗುಮನೆ
|

Updated on:May 17, 2025 | 9:18 AM

Share

ವಿಜಯ್ ದೇವರಕೊಂಡ (Vijay Devarakonda) ಅವರು ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಕುಟುಂಬಕ್ಕೆ ಹೆಚ್ಚು ಸಮಯ ಕೊಡೋಕೆ ಆಗುತ್ತಿಲ್ಲ. ಇದಕ್ಕೆ ಸಂಬಂಧಿಸಿದ ವಾಟ್ಸಾಪ್ ಚಾಟ್​ನ ಸ್ಕ್ರೀನ್​ಶಾಟ್ ಫೋಟೋ ವೈರಲ್ ಆಗಿದೆ. ಇದರಲ್ಲಿ ವಿಜಯ್ ಹಾಗೂ ಅವರ ತಾಯಿ ನಡುವೆ ಮನೆಯ ಗ್ರೂಪ್​ನಲ್ಲಿ ನಡೆದ ಸಂಭಾಷಣೆಯ ವಿಷಯ ಇದೆ. ತಾಯಿ ಆಸೆಯನ್ನು ಈಡೇರಿಸಿದ ಖುಷಿಯಲ್ಲಿ ವಿಜಯ್ ದೇವರಕೊಂಡ ಇದ್ದಾರೆ. ಈ ಚಾಟ್ ಮೂಲಕ ಅವರು ಕುಟುಂಬವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಕೂಡ ರಿವೀಲ್ ಆದಂತೆ ಆಗಿದೆ.

ವಿಜಯ್ ದೇವರಕೊಂಡ ಅವರು ತಮ್ಮ ಕುಟುಂಬದ ಜೊತೆ ಹೈದರಾಬಾದ್​ನಲ್ಲಿ ವಾಸವಾಗಿದ್ದಾರೆ. ಆದರೆ, ಹೊರಗೆ ಊಟಕ್ಕೆ ಹೊಗಿ ಅವರು ಸಾಕಷ್ಟು ಸಮಯವೇ ಕಳೆದು ಹೋಗಿತ್ತು. ಈ ಕಾರಣದಿಂದಲೇ ಅವರ ತಾಯಿ ಕುಟುಂಬದ ವಾಟ್ಸಾಪ್ ಗ್ರೂಪ್​ನಲ್ಲಿ ರಾತ್ರಿ ಊಟಕ್ಕೆ ಹೋಟೆಲ್​ಗೆ ಹೋಗುವ ಬಗ್ಗೆ ಕೇಳಿದ್ದಾರೆ.

ಇದನ್ನೂ ಓದಿ
Image
ಅಮಿತಾಭ್​ಗೆ 200 ಜನರಿಂದ ರಕ್ತದಾನ; ಅವರ ಜೀವನವನ್ನೇ ನಾಶ ಮಾಡಿತು ಆ ಘಟನೆ
Image
ದಾದಾಸಾಹೇಬ್ ಫಾಲ್ಕೆ ಬಯೋಪಿಕ್ ಮಾಡ ಹೊರಟ ರಾಜಮೌಳಿಗೆ ಹಿನ್ನಡೆ
Image
ಸುಳ್ಳು ಹೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಚೈತ್ರಾ ಕುಂದಾಪುರ ತಂದೆ
Image
ಸಿನಿಮಾ ರಂಗದ ಹರಿಕಾರ ದಾದಾಸಾಹೇಬ್ ಫಾಲ್ಕೆ ಬಯೋಪಿಕ್​ನಲ್ಲಿ ಜೂ.ಎನ್​ಟಿಆರ್?

‘ಈ ವಾರಾಂತ್ಯದಲ್ಲಿ ಹೊರಗೆ ಊಟಕ್ಕೆ ಹೋಗೋಣವೇ’ ವಿಜಯ್ ತಾಯಿ ಗ್ರೂಪ್​ನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವಿಜಯ್ ಮರುಕ್ಷಣವೇ ಓಕೆ ಎಂದಿದ್ದಾರೆ. ‘ಚಿನ್ನುಗೆ (ವಿಜಯ್) ಯಾವಾಗ ಆಗುತ್ತದೆಯೋ ಆಗ ಹೋಗೋಣ’ ಎಂದು ವಿಜಯ್ ತಾಯಿ ಉತ್ತರಿಸಿದ್ದಾರೆ. ನಂತರ ಡಿನ್ನರ್ ಪ್ಲ್ಯಾನ್ ಮಾಡಿದ್ದಾರೆ ವಿಜಯ್.

ಊಟಕ್ಕೆ ತೆರಳಿದ ಫೋಟೋಗಳನ್ನು ಹಂಚಿಕೊಂಡಿರೋ ವಿಜಯ್ ಅವರು, ‘ಅಮ್ಮ ಇದ್ದಕ್ಕಿದ್ದಂತೆ ಊಟಕ್ಕೆ ಹೊರಗೆ ಹೋಗಬಹುದೇ ಎಂದು ಕೇಳಿದರು. ನಾವು ಹೊರಗೆ ಊಟಕ್ಕೆ ಹೋಗಿ ಬಹಳ ಸಮಯವಾಗಿತ್ತು. ನಾವೆಲ್ಲರೂ ಯಾವಾಗಲೂ ಕೆಲಸ ಮತ್ತು ಗುರಿಗಳನ್ನು ಬೆನ್ನು ಹತ್ತುತ್ತಾ ಇರುತ್ತೇವೆ ಮತ್ತು ಕೆಲವೊಮ್ಮೆ ಬದುಕುವುದನ್ನು ಮರೆತುಬಿಡುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

‘ರಾತ್ರಿ ನಾವು ಹೊರಗೆ ಹೋಗಿ ಒಟ್ಟಾಗಿ ಸಮಯ ಕಳೆದೆವು. ನಿಮ್ಮ ಅಮ್ಮ ಮತ್ತು ಅಪ್ಪನೊಂದಿಗೆ ಸಮಯ ಕಳೆಯಲು ಮರೆಯಬೇಡಿ. ಅವರನ್ನು ಹೊರಗೆ ಕರೆದುಕೊಂಡು ಹೋಗಿ. ಅವರಿಗೆ ಅಪ್ಪುಗೆ ಮತ್ತು ಮುತ್ತು ನೀಡಿ. ನೀವು ಅವರನ್ನು ಪ್ರೀತಿಸುತ್ತೀರಿ ಎಂದು ಹೇಳಿ’ ಎಂದು ವಿಜಯ್ ಪೋಸ್ಟ್​ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

ಇದನ್ನೂ ಓದಿ: ವಿಜಯ್ ದೇವರಕೊಂಡಗೆ ಪ್ರೀತಿಯಿಂದ ವಿಜ್ಜು ಎಂದು ಕರೆದು ಬರ್ತ್​ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ

ವಿಜಯ್ ದೇವರಕೊಂಡ ಅವರು ‘ಕಿಂಗ್​ಡಮ್’ ಸಿನಿಮಾ ರಿಲೀಸ್​ಗಾಗಿ ಕಾಯುತ್ತಿದ್ದಾರೆ. ಮೇ 30ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರದ ರಿಲೀಸ್ ದಿನಾಂಕ ಈಗ ಸಿನಿಮಾ ಜುಲೈ 4ಕ್ಕೆ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:55 am, Sat, 17 May 25

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?