ವಿಜಯ್​ಗಿಲ್ಲ ಡಯಟ್, ಫಿಟ್ನೆಸ್​ ಗೀಳು; ಕಾರಣ ತಿಳಿಸಿದ ನಟ

ಎಲ್ಲಾ ಹೀರೋಗಳು ಜಿಮ್​ನಲ್ಲಿ ವರ್ಕೌಟ್ ಮಾಡುತ್ತಾರೆ, ಫಿಟ್ ಆಗಿ ಇರುತ್ತಾರೆ. ಅದಕ್ಕೆ ಪೂರಕವಾದ ಆಹಾರ ಸೇವನೆ ಮಾಡುತ್ತಾರೆ. ಆದರೆ, ವಿಜಯ್ ಹಾಗಲ್ಲ. ಅವರು ಸದಾ ಟೇಸ್ಟಿ ಫುಡ್​ಗಳನ್ನು ತಿನ್ನಲು ಬಯಸುತ್ತಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ವಿಜಯ್​ಗಿಲ್ಲ ಡಯಟ್, ಫಿಟ್ನೆಸ್​ ಗೀಳು; ಕಾರಣ ತಿಳಿಸಿದ ನಟ
ವಿಜಯ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Sep 25, 2024 | 8:10 AM

ವಿಜಯ್ ಸೇತುಪತಿ ಅವರಿಗೆ ಒಟಿಟಿ ಹಾಗೂ ಸಿನಿಮಾ ಲೋಕದಲ್ಲಿ ಬೇಡಿಕೆ ಇದೆ. ಇತ್ತೀಚೆಗೆ ಅವರು ನಟಿಸಿದ್ದ ‘ಮಹರಾಜ’ ಸಿನಿಮಾ ಮೆಚ್ಚುಗೆಯ ಮಹಾಪೂರ ಪಡೆಯಿತು. ‘ಫರ್ಜಿ’ ಸೀರಿಸ್ ಹಾಗೂ ‘ಹ್ಯಾಪಿ ನ್ಯೂ ಇಯರ್’ ಸಿನಿಮಾಗಳನ್ನು ಮಾಡಿ ಅವರು ಗಮನ ಸೆಳೆದರು. ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡುವಾಗ ಅವರು ಹೆಚ್ಚು ಗಮನ ನೀಡುವುದಿಲ್ಲ. ಅವರು ‘ವಿಕ್ರಮ್’ ಸಿನಿಮಾದಲ್ಲಿ ದೊಡ್ಡ ಹೊಟ್ಟೆ ಬಿಟ್ಟು ಕಾಣಿಸಿಕೊಂಡಿದ್ದರು. ಅವರು ಸಾಮಾನ್ಯ ಹೀರೋ ಅಂತಲ್ಲ. ಅವರು ಹಾಯಾಗಿ ತಿಂದುಂಡುಕೊಂಡಿರುತ್ತಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದರು.

ಎಲ್ಲಾ ಹೀರೋಗಳು ಜಿಮ್​ನಲ್ಲಿ ವರ್ಕೌಟ್ ಮಾಡುತ್ತಾರೆ. ಅದಕ್ಕೆ ಪೂರಕವಾದ ಆಹಾರ ಸೇವನೆ ಮಾಡುತ್ತಾರೆ. ಆದರೆ, ವಿಜಯ್ ಹಾಗಲ್ಲ. ‘ಡಯಟ್ ಕಾನ್ಸೆಪ್ಟ್​ನಲ್ಲಿ ನಾನು ನಂಬಿಕೆ ಇಟ್ಟಿಲ್ಲ. ನಾನು ಯಾವಾಗಲೂ ರುಚಿಕರ ಆಹಾರ ತಿನ್ನಲು ಇಷ್ಟಪಡುತ್ತೇನೆ. ನಾನು ಟೇಸ್ಟಿ ಆಹಾರ ತಿಂದಿಲ್ಲ ಎಂದರೆ ಜೀವನ ರುಚಿಕರ ಅಲ್ಲ ಎನಿಸುತ್ತದೆ’ ಎಂದಿದ್ದಾರೆ ವಿಜಯ್. ಈ ಮೂಲಕ ಫಿಟ್ನೆಸ್​ಗಿಂತ ರುಚಿಕರ ಆಹಾರ ತುಂಬಾನೇ ಮುಖ್ಯ ಎಂದಿದ್ದಾರೆ.

‘ನಾನು ಸಿಕ್ಸ್ ಪ್ಯಾಕ್​ ಬಗ್ಗೆ ನಂಬಿಕೆ ಇಟ್ಟವನಲ್ಲ. ನಾನು ಸಾಮಾನ್ಯ ವ್ಯಕ್ತಿ. ನಾನು ಫಿಟ್ ಆಗಿರಬೇಕು ಎಂದುಕೊಳ್ಳುತ್ತೇನೆ. ಒಂದು ವಾರ ಜಿಮ್, ಯೋಗ ಮಾಡುತ್ತೇನೆ. ನಂತರ ಬಿಟ್ಟುಬಿಡುತ್ತೇನೆ. ಇದನ್ನು ಸಾಕಷ್ಟು ಬಾರಿ ಮಾಡಿದ್ದೇನೆ’ ಎಂದು ವಿಜಯ್ ಹೇಳಿಕೊಂಡಿದ್ದರು.

ಇದನ್ನೂ ಓದಿ: ನೆಟ್​ಫ್ಲಿಕ್ಸ್​ನಲ್ಲಿ ದಾಖಲೆ ಬರೆದ ವಿಜಯ್ ಸೇತುಪತಿಯ ‘ಮಹಾರಾಜ’

‘ಅಭಿಮಾನಿಗಳು ಹೇಳುವ ಕಮೆಂಟ್ ಕೇಳಿ ಇನ್ನೂ ದಪ್ಪ ಆಗಲು ಸಾಧ್ಯವಿಲ್ಲ ಎಂದುಕೊಳ್ಳುತ್ತೇನೆ. ವರ್ಕೌಟ್ ಮಾಡಬೇಕು ಎಂದುಕೊಳ್ಳುತ್ತೇನೆ. ಆದರೆ, ಶೂಟ್ ಸಂದರ್ಭದಲ್ಲಿ ಕೆಲಸದ ಒತ್ತಡದಿಂದ ನೈಟ್​ ವರ್ಕೌಟ್ ಮಾಡೋದು ಮಿಸ್ ಆಗುತ್ತದೆ. ನಾನು ಸೆನ್ಸಿಟಿವ್ ವ್ಯಕ್ತಿ. ಬೇಗ ನೋವಾಗುತ್ತದೆ. ಈ ಕಾರಣದಿಂದ ವರ್ಕೌಟ್ ಕೆಲವು ಬಾರಿ ಮಿಸ್ ಆದರೆ ನಂತರ ಅದನ್ನು ಮಾಡಲೇಬಾರದು ಎಂದುಕೊಳ್ಳುತ್ತೇನೆ’ ಎಂದಿದ್ದರು ಅವರು.

ಈ ಹೇಳಿಕೆಯನ್ನು ವಿಜಯ್ ಫ್ಯಾನ್ಸ್ ಹಾಗೂ ಆಹಾರ ಪ್ರಿಯರು ಖುಷಿಯಿಂದ ಸ್ವೀಕರಿಸಿದ್ದರು. ತಾವೂ ಅವರಂತೆ ಇರಬೇಕು ಎಂದು ಬಯಸಿದ್ದಾರೆ. ಸದ್ಯ ಅವರು ‘ವಿದುತಲೈ ಪಾರ್ಟ್​ 2’, ‘ಗಾಂಧಿ ಟಾಕ್ಸ್’ ಮೊದಲಾದ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:01 am, Wed, 25 September 24