ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು ನಟಿಸ್ತಾರಾ? ಈ ಸುದ್ದಿ ಹಬ್ಬಲು ಕಾರಣ ಇಲ್ಲಿದೆ..

ಸಿಂಬು ನಟನೆಯ ಸಿನಿಮಾದ ಹಾಡಿನ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ. ಅದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಬಯೋಪಿಕ್ ಬಗ್ಗೆ ಸಿಂಬು ಫ್ಯಾನ್ಸ್ ಮಾತನಾಡಲು ಆರಂಭಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಜೀವನದ ಕಥೆಯಲ್ಲಿ ಸಿನಿಮಾದಲ್ಲಿ ನೋಡಲು ಅಭಿಮಾನಿಗಳಿಗೆ ಖಂಡಿತಾ ಆಸೆ ಇದೆ.

ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು ನಟಿಸ್ತಾರಾ? ಈ ಸುದ್ದಿ ಹಬ್ಬಲು ಕಾರಣ ಇಲ್ಲಿದೆ..
Virat Kohli, Simbu

Updated on: May 02, 2025 | 9:20 PM

ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ (Virat Kohli) ಸಾಧನೆ ಅಪಾರ. ಅವರಿಗೆ ಅವರೇ ಸಾಠಿ. ಮೈದಾನದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ಅಬ್ಬರಿಸುವುದನ್ನು ನೋಡುವುದೇ ಹಬ್ಬ. ಇನ್ನು, ಅವರ ರಿಯಲ್ ಲೈಫ್​ನಲ್ಲೂ ಅನೇಕ ಇಂಟರೆಸ್ಟಿಂಗ್ ಘಟನೆಗಳು ಇವೆ. ಅವುಗಳ ಬಗ್ಗೆ ತಿಳಿಯಲು ಅಭಿಮಾನಿಗಳಿಗೆ ಬಯಕೆ ಇದೆ. ಹಾಗಾಗಿ ವಿರಾಟ್‌ ಕೊಹ್ಲಿ ಬಯೋಪಿಕ್ (Virat Kohli Biopic) ಬರಬೇಕು ಎಂಬುದು ಎಲ್ಲರ ಆಸೆ. ಈ ಸಂದರ್ಭದಲ್ಲಿ ಇನ್ನೊಂದು ಸುದ್ದಿ ಹರಿದಾಡುತ್ತಿದೆ. ವಿರಾಟ್ ಕೊಹ್ಲಿ ಬಯೋಪಿಕ್​ನಲ್ಲಿ ಕಾಲಿವುಡ್ ನಟ ಸಿಂಬು (Simbu) ನಟಿಸಬಹುದೇ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ ಆಗಿದ್ದೇನು ಎಂಬ ಬಗ್ಗೆ ಇಲ್ಲಿದೆ ವಿವರ..

ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಆರ್‌ಸಿಬಿ ಚಾಟ್‌ ಶೋನಲ್ಲಿ ತಮ್ಮ ಇಷ್ಟದ ಸಾಂಗ್ ಬಗ್ಗೆ ಹೇಳಿದರು. ತಾವು ಸದ್ಯಕ್ಕೆ ಮತ್ತೆ ಮತ್ತೆ ಕೇಳುತ್ತಿರುವ ಸಾಂಗ್ ಯಾವುದು ಎಂಬುದನ್ನು ಅವರು ಬಹಿರಂಗಪಡಿಸಿದರು. ತಮಿಳಿನ ‘ಪತ್ತು ತಲ’ ಸಿನಿಮಾದ ‘ನೀ ಸಿಂಗಮ್ ಧಾನ್..’ ಹಾಡನ್ನು ಕೊಹ್ಲಿ ಅವರು ರಿಪೀಟ್ ಮೋಡ್​ನಲ್ಲಿ ಕೇಳುತ್ತಿದ್ದಾರೆ. ಇದು ಸಿಂಬು ನಟನೆಯ ಸಿನಿಮಾದ ಹಾಡು.

ಇದನ್ನೂ ಓದಿ
ಈಡೇರಲೇ ಇಲ್ಲ ಮುತ್ತಪ್ಪ ರೈ ಬಯೋಪಿಕ್ ಆಸೆ: ವಿವರಿಸಿದ ರವಿ ಶ್ರೀವತ್ಸ
ಸೌರವ್ ಗಂಗೂಲಿ ಜೀವನ ಆಧರಿಸಿದ ಸಿನಿಮಾಕ್ಕೆ ಕೊನೆಗೂ ಸಿಕ್ಕ ನಾಯಕ
ಬಹುನಿರೀಕ್ಷಿತ ಕ್ರಿಕೆಟಿಗನ ಬಯೋಪಿಕ್ ಘೋಷಣೆ, ಯಾರು ಆ ಆಟಗಾರ
ಬರಲಿದೆ ರಜನಿಕಾಂತ್ ಬಯೋಪಿಕ್; ಬಾಲಿವುಡ್ ನಿರ್ಮಾಪಕನ ಬಂಡವಾಳ

‘ನೀ ಸಿಂಗಮ್ ಧಾನ್’ ಎಂದರೆ ‘ನೀನು ನಿಜಕ್ಕೂ ಸಿಂಹ’ ಎಂದು ಅರ್ಥ. ವಿರಾಟ್ ಕೊಹ್ಲಿ ಅವರು ಈ ಹಾಡಿನ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಸಿಂಬು ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ‘ವಿರಾಟ್ ಕೊಹ್ಲಿ ನೀವು ನಿಜವಾಗಿಯೂ ಸಿಂಹ’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಇದರ ಬೆನ್ನಲ್ಲೇ ಕೊಹ್ಲಿ ಬಯೋಪಿಕ್ ಬಗ್ಗೆ ಜನರು ಮಾತನಾಡಲು ಆರಂಭಿಸಿದ್ದಾರೆ.

ಮೈದಾನದಲ್ಲಿ ಪ್ರಾಕ್ಟೀಸ್ ಮಾಡುವಾಗ, ವಿಮಾನದಲ್ಲಿ ಪ್ರಯಾಣಿಸುವಾಗ, ಏರ್​ಪೋರ್ಟ್​ನಲ್ಲಿ ಕಾಯುತ್ತಿರುವಾಗ ವಿರಾಟ್ ಕೊಹ್ಲಿ ಇದೇ ಹಾಡನ್ನು ಮತ್ತೆ ಮತ್ತೆ ಕೇಳುತ್ತಿದಾರೆ. ಹಾಗಾಗಿ ಅವರ ಬಯೋಪಿಕ್​ನಲ್ಲಿ ನಟಿಸಲು ಸಿಂಬು ಸೂಕ್ತ ಎಂದು ಫ್ಯಾನ್ಸ್ ಅಭಿಪ್ರಾಯ ತಿಳಿಸುತ್ತಿದ್ದಾರೆ. ಅನೇಕ ವಿಚಾರಗಳಲ್ಲಿ ಕೊಹ್ಲಿ ಮತ್ತು ಸಿಂಬು ನಡುವೆ ಸಾಮ್ಯತೆ ಇದೆ ಎಂದು ಕೂಡ ಜನರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಮೆಚ್ಚುಗೆ ಪಡೆದ ಸಿಂಬು ಲುಕ್​; ‘ಥಗ್​ ಲೈಫ್​’ ಪೋಸ್ಟರ್​ ನೋಡಿ ಹೊಗಳಿದ ಫ್ಯಾನ್ಸ್​

ಕಾಲಿವುಡ್​ನಲ್ಲಿ ಸಿಂಬು ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರು ಸಾಕಷ್ಟು ಅನುಭವ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಬಯೋಪಿಕ್​ನಲ್ಲಿ ಸಿಂಬು ನಟಿಸಬೇಕು ಎಂದು ಫ್ಯಾನ್ಸ್ ಹೇಳಲು ಶುರು ಮಾಡಿರುವುದರಿಂದ ಈ ಬಗ್ಗೆ ಸಿಂಬು ಅವರು ಮುಂದಿನ ಮಾತುಕಥೆ ಮಾಡುತ್ತಾರಾ ಎಂಬ ಕೌತುಕ ಮೂಡಿದೆ. ಸದ್ಯ ಅವರು ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.