AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್ ಖಾನ್ 3ನೇ ಪತ್ನಿ ಬೆಂಗಳೂರಿನ ಗೌರಿ ಯಾರು? ಸ್ವಾತಂತ್ರ್ಯ ಹೋರಾಟದೊಂದಿಗೆ ಅವರಿಗಿದೆ ಸಂಬಂಧ

Aamir Khan and Gauri Spratt: ಆಮಿರ್ ಖಾನ್ ಪತ್ನಿ ಗೌರಿ ಸ್ಪ್ರಾಟ್ ಅಸಲಿಗೆ ಬೆಂಗಳೂರಿನವರು. ಯಾರು ಈ ಗೌರಿ ಎಂಬ ಕುತೂಹಲ ಹಲವರಿಗೆ ಇತ್ತು. ಈ ಹಿಂದೆ ಎರಡು ಬಾರಿ ಆಮಿರ್ ಖಾನ್ ಚಿತ್ರರಂಗಕ್ಕೆ ಸಂಬಂಧಿಸಿದವರನ್ನೇ ವಿವಾಹವಾಗಿದ್ದರು. ಆದರೆ ಗೌರಿ ಚಿತ್ರರಂಗದೊಂದಿಗೆ ಸಂಬಂಧಿಸಿದವರಲ್ಲ. ಅಷ್ಟಕ್ಕೂ ಯಾರು ಈ ಗೌರಿ ಸ್ಪ್ರಾಟ್? ಅವರ ಕುಟುಂಬಕ್ಕೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಇರುವ ಸಂಬಂಧವೇನು?

ಆಮಿರ್ ಖಾನ್ 3ನೇ ಪತ್ನಿ ಬೆಂಗಳೂರಿನ ಗೌರಿ ಯಾರು? ಸ್ವಾತಂತ್ರ್ಯ ಹೋರಾಟದೊಂದಿಗೆ ಅವರಿಗಿದೆ ಸಂಬಂಧ
Aamir Gauri1
ಮಂಜುನಾಥ ಸಿ.
|

Updated on:Jul 05, 2026 | 4:01 PM

Share

ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ (Aamir Khan) ಇಂದು (ಜೂನ್ 5) ಗೌರಿ ಸ್ಪ್ರಾಟ್ ಅವರನ್ನು ಮುಂಬೈನ ತಮ್ಮ ನಿವಾಸದಲ್ಲಿ ವಿವಾಹವಾಗಿದ್ದಾರೆ. ಗೌರಿ ಸ್ಪ್ರಾಟ್ ಅಸಲಿಗೆ ಬೆಂಗಳೂರಿನವರು. ಆಮಿರ್ ಖಾನ್ ಹಾಗೂ ಗೌರಿ ಜೊತೆ-ಜೊತೆಯಾಗಿ ಓಡಾಡಲು ಆರಂಭಿಸಿದಾಗಿನಿಂದಲೂ ಯಾರು ಈ ಗೌರಿ ಎಂಬ ಕುತೂಹಲ ಹಲವರಿಗೆ ಇತ್ತು. ಈ ಹಿಂದೆ ಎರಡು ಬಾರಿ ಆಮಿರ್ ಖಾನ್ ಚಿತ್ರರಂಗಕ್ಕೆ ಸಂಬಂಧಿಸಿದವರನ್ನೇ ವಿವಾಹವಾಗಿದ್ದರು. ಆದರೆ ಗೌರಿ ಚಿತ್ರರಂಗದೊಂದಿಗೆ ಸಂಬಂಧಿಸಿದವರಲ್ಲ. ಅಷ್ಟಕ್ಕೂ ಯಾರು ಈ ಗೌರಿ ಸ್ಪ್ರಾಟ್?

ಬೆಂಗಳೂರಿನಲ್ಲಿ ಜನಿಸಿದ ಗೌರಿ ಸ್ಪ್ರ್ಯಾಟ್ ಅವರು ಬಹುಮುಖ ಪ್ರತಿಭೆಯುಳ್ಳ ಉದ್ಯಮಿ. ಫ್ಯಾಷನ್, ಸ್ಟೈಲಿಂಗ್ ಮತ್ತು ಉದ್ಯಮಶೀಲತೆಯಲ್ಲಿ ಇವರು ದೀರ್ಘಕಾಲದ ಅನುಭವವನ್ನು ಹೊಂದಿದ್ದಾರೆ. ಗೌರಿ ಅವರ ಕುಟುಂಬಕ್ಕೆ ಸ್ವಾತಂತ್ರ್ಯ ಹೋರಾಟದೊಂದಿಗೆ ಲಿಂಕ್ ಇದೆ. ಗೌರಿ ಅವರ ತಾತ ಫಿಲಿಫ್ ಸ್ಪಾರ್ಟ್, ಮೂಲತಃ ಇಂಗ್ಲೆಂಡ್​​ನವರಾದರೂ ಸಹ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಕೊಡುಗೆ ನೀಡಿದವರು. ಬರಹಗಾರರು, ಕಮ್ಯೂನಿಸ್ಟ್ ಚಿಂತಕರು ಆಗಿದ್ದ ಫಿಲಿಫ್, 1920 ರಲ್ಲಿ ಭಾರತಕ್ಕೆ ಬಂದು ಇಲ್ಲಿಯೇ ನೆಲೆಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ಗೌರಿ ಅವರ ತಂದೆ ರಾಬರ್ಟ್ ಸ್ಪಾರ್ಟ್, ಉದ್ಯಮಿ ಆಗಿದ್ದರು. ತಾಯಿ ರೀಟಾ ಸ್ಪಾರ್ಟ್ ಸಹ ಉದ್ಯಮಿ ಆಗಿದ್ದರು.

ಗೌರಿ ಸ್ಪಾರ್ಟ್ ಅವರು ಊಟಿಯ ಪ್ರತಿಷ್ಠಿತ ಬ್ಲೂ ಮೌಂಟೇನ್ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. 2004ರಲ್ಲಿ ಲಂಡನ್‌ನ ಯೂನಿವರ್ಸಿಟಿ ಆಫ್ ದಿ ಆರ್ಟ್ಸ್‌ನಿಂದ ‘ಫ್ಯಾಷನ್, ಸ್ಟೈಲಿಂಗ್ ಮತ್ತು ಫೋಟೋಗ್ರಫಿ’ ವಿಷಯದಲ್ಲಿ ಫೌಂಡೇಶನ್ ಡಿಗ್ರಿ ಪಡೆದುಕೊಂಡರು. ತಮ್ಮ ತಾಯಿ ರೀಟಾ ಸ್ಪ್ರ್ಯಾಟ್ ಅವರಿಂದ ಸ್ಫೂರ್ತಿ ಪಡೆದ ಗೌರಿ, ಬೆಂಗಳೂರಿನ ಮ್ಯಾಗ್ರತ್ ರಸ್ತೆಯಲ್ಲಿ ‘ಸ್ಪ್ರ್ಯಾಟ್ ಹೇರ್ ಸ್ಟುಡಿಯೋ’ವನ್ನು ತಮ್ಮ ಸಹೋದರಿ ಶೌನಾ ಅವರೊಂದಿಗೆ ನಡೆಸುತ್ತಿದ್ದರು. ನಂತರ ಈ ಸ್ಟುಡಿಯೋವನ್ನು ‘ಬಿ ಬ್ಲಂಟ್’ ನೆಟ್‌ವರ್ಕ್‌ಗೆ ಮಾರಾಟ ಮಾಡಿದರು. ಪ್ರಸ್ತುತ ಅವರು ಮುಂಬೈನಲ್ಲಿ ಬಿ ಬ್ಲಂಟ್ ಫ್ರಾಂಚೈಸಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:ಸರಳವಾಗಿ ನಡೆದ ಆಮಿರ್ ಖಾನ್ ಮೂರನೇ ಮದುವೆ, ಅತಿಥಿಗಳು ಯಾರ್ಯಾರು?

2005 ರಿಂದ 2010 ರವರೆಗೆ ‘ಮಾರ್ಮಲೇಡ್’ ಸಂಸ್ಥೆಯ ಪಾಲುದಾರರಾಗಿದ್ದರು. ನಂತರ ‘3’C ಟೆಕ್ಸ್ ಪ್ರೈವೇಟ್ ಲಿಮಿಟೆಡ್’ನಲ್ಲಿ ನಿರ್ದೇಶಕಿಯಾಗಿ ಮತ್ತು ಡಿಸೈನ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ‘ದಿ ಲೆದರ್ ಬ್ಯೂಟಿಕ್’ನಲ್ಲಿ ಕನ್ಸಲ್ಟಿಂಗ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ‘ಆಮಿರ್ ಖಾನ್ ಪ್ರೊಡಕ್ಷನ್ಸ್’ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದು, ಚಲನಚಿತ್ರ ಮತ್ತು ಪ್ರಚಾರದ ಕಾರ್ಯಕ್ರಮಗಳಲ್ಲಿ ತಮ್ಮ ಸೃಜನಶೀಲತೆ ಮತ್ತು ವ್ಯವಸ್ಥಾಪನಾ ಕೌಶಲವನ್ನು ಬಳಸುತ್ತಿದ್ದಾರೆ.

ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರು ಕಳೆದ 25 ವರ್ಷಗಳಿಂದ ಪರಸ್ಪರ ಪರಿಚಯವಿದ್ದವರು. 25 ವರ್ಷಗಳ ಹಿಂದೆಯೇ ಇವರು ಸ್ನೇಹಿತರಾಗಿದ್ದರು. ಆದರೆ ಗೌರಿ ಶಿಕ್ಷಣಕ್ಕಾಗಿ ಲಂಡನ್​​ಗೆ ಹೋದರು, ಆಮಿರ್ ಖಾನ್ ಸಿನಿಮಾಗಳಲ್ಲಿ ಬ್ಯುಸಿ ಆದರು. ಒಬ್ಬರನ್ನೊಬ್ಬರು ಮರೆತೆ ಹೋಗಿದ್ದರು. ಆದರೆ ಇತ್ತೀಚೆಗೆ ಆಮಿರ್ ಖಾನ್ ಅವರ ಸಂಬಂಧಿ ನುಜಹತ್ ಖಾನ್ ಅವರಿಂದ ಈ ಇಬ್ಬರು ಮತ್ತೆ ಸಂಪರ್ಕಕ್ಕೆ ಬಂದರು. ಬಳಿಕ ಹಳೆಯ ಸ್ನೇಹ ಮತ್ತೆ ಚಿಗುರಿತು. ಇಬ್ಬರೂ ಮತ್ತೆ ಸ್ನೇಹಿತರಾದರು. ಈಗ ಮದುವೆಯಾಗಿ ಗಂಡ-ಹೆಂಡತಿ ಆಗಿದ್ದಾರೆ. ಅಂದಹಾಗೆ ಗೌರಿಗೆ ಈ ಹಿಂದೆಯೇ ಮದುವೆಯಾಗಿ ವಿಚ್ಛೇದನ ಸಹ ಆಗಿದೆ. ಹಿಂದಿನ ಮದುವೆಯಿಂದ ಗೌರಿ ಅವರಿಗೆ ಒಬ್ಬ ಮಗ ಸಹ ಇದ್ದಾನೆ. ಇನ್ನು ಆಮಿರ್ ಖಾನ್​​ಗೆ ಇದು ಮೂರನೇ ಮದುವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Sun, 5 July 26

Follow Us
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ