ಅಲ್ಲು ಅರ್ಜುನ್ ಬೆಂಗಳೂರಿಗೆ ಬರಲಿಲ್ಲ ಏಕೆ? ವಿತರಕ ಕೊಟ್ಟರು ಕಾರಣ

Allu Arjun: ‘ಪುಷ್ಪ 2’ ಸಿನಿಮಾದ ಪ್ರಚಾರವನ್ನು ಬಿಹಾರದ ಪಾಟ್ನಾ, ಚೆನ್ನೈ, ಮುಂಬೈ, ಕೇರಳದ ಕೊಚ್ಚಿ, ಹೈದರಾಬಾದ್​ಗಳಲ್ಲಿ ಅದ್ಧೂರಿಯಾಗಿ ಮಾಡಲಾಯ್ತು, ಆದರೆ ಅಲ್ಲು ಅರ್ಜುನ್ ಬೆಂಗಳೂರಿಗೆ ಮಾತ್ರ ಬರಲಿಲ್ಲ. ಅದಕ್ಕೆ ಕಾರಣ ಏನೆಂದು ವಿತರಕ ಲಕ್ಷ್ಮಿಕಾಂತ್ ವಿವರಿಸಿದ್ದಾರೆ.

ಅಲ್ಲು ಅರ್ಜುನ್ ಬೆಂಗಳೂರಿಗೆ ಬರಲಿಲ್ಲ ಏಕೆ? ವಿತರಕ ಕೊಟ್ಟರು ಕಾರಣ
Pushpa 2
Follow us
ಮಂಜುನಾಥ ಸಿ.
|

Updated on: Dec 04, 2024 | 12:42 PM

‘ಪುಷ್ಪ 2’ ನಾಳೆ (ಡಿಸೆಂಬರ್ 05) ಬಿಡುಗಡೆ ಆಗುತ್ತಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಇಂದು (ಡಿಸೆಂಬರ್ 04) ರ ರಾತ್ರಿಯೇ ಮೊದಲ ಶೋ ಪ್ರದರ್ಶನಗೊಳ್ಳಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ಮಾಡಿದೆ. ಬಿಹಾರದ ಪಟ್ನಾನಲ್ಲಿ ಬಲು ಜೋರಾಗಿ ಪ್ರೀ ರಿಲೀಸ್ ಇವೆಂಟ್ ಮಾಡಿದ್ದರು. ಆ ನಂತರ ಚೆನ್ನೈ, ಕೇರಳದ ಕೊಚ್ಚಿ, ಮುಂಬೈ ಕೊನೆಗೆ ಹೈದರಾಬಾದ್​ನಲ್ಲಿಯೂ ಭಾರಿ ದೊಡ್ಡ ಪ್ರಚಾರದ ಇವೆಂಟ್​ಗಳನ್ನು ಚಿತ್ರತಂಡ ಮಾಡಿತ್ತು. ಮೊದಲು ಇವೆಂಟ್ ಘೋಷಣೆಯಾದಾಗ ಬೆಂಗಳೂರಿನಲ್ಲಿಯೂ ಕಾರ್ಯಕ್ರಮ ಮಾಡುವುದಾಗಿ ಹೇಳಲಾಗಿತ್ತು. ಆದರೆ ಬೆಂಗಳೂರಿಗೆ ಬರಲೇ ಇಲ್ಲ ಅಲ್ಲು ಅರ್ಜುನ್.

‘ಪುಷ್ಪ 2’ ಚಿತ್ರತಂಡ ಬೆಂಗಳೂರಿಗೆ ಬರದೇ ಇರುವುದು ಇಲ್ಲಿನ ಅಲ್ಲು ಅರ್ಜುನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಉದ್ದೇಶಪೂರ್ವಕವಾಗಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಬೆಂಗಳೂರಿಗೆ ಬಂದಿಲ್ಲ ಎಂಬ ಆರೋಪಗಳೂ ಸಹ ಕೇಳಿ ಬಂದಿತ್ತು. ‘ಪುಷ್ಪ 2’ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಖರೀದಿ ಮಾಡಿರುವ ವಿತರಕ ಲಕ್ಷ್ಮಿಕಾಂತ್ ಮಾತನಾಡಿದ್ದು, ಅಲ್ಲು ಅರ್ಜುನ್ ಕರ್ನಾಟಕಕ್ಕೆ ಏಕೆ ಬರಲಿಲ್ಲ ಎಂದು ವಿವರಣೆ ನೀಡಿದ್ದಾರೆ.

ಅಲ್ಲು ಅರ್ಜುನ್ ಬೆಂಗಳೂರಿಗೆ ಬರುವ ಯೋಜನೆ ಇತ್ತಂತೆ ಆದರೆ ಇಲ್ಲಿ ವಿಪರೀತ ಮಳೆ ಇದ್ದ ಕಾರಣ ಅವರು ಬರಲಿಲ್ಲವಂತೆ. ಆದರೆ ‘ಪುಷ್ಪ 2’ ಸಿನಿಮಾದ ಸಕ್ಸಸ್ ಮೀಟ್ ಬೆಂಗಳೂರಿನಲ್ಲಿಯೇ ಆಯೋಜಿಸಿ ಆ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸುಕುಮಾರ್ ಚಿತ್ರತಂಡದ ಇತರೆ ಸದಸ್ಯರು ಬರುವಂತೆ ಮಾಡುವುದಾಗಿ ಲಕ್ಷ್ಮಿಕಾಂತ್ ಹೇಳಿದ್ದಾರೆ.

ಇದನ್ನೂ ಓದಿ:‘ಪುಷ್ಪ 2’ ಯಾವ ನಗರದಲ್ಲಿ ಟಿಕೆಟ್ ದರ ಎಷ್ಟಿದೆ? ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?

ಬೆಂಗಳೂರಿನಲ್ಲಿ ‘ಪುಷ್ಪ 2’ ಸಿನಿಮಾದ ಟಿಕೆಟ್ ದರ ಹೆಚ್ಚಳ ಆಗಿರುವ ಬಗ್ಗೆ ಮಾತನಾಡಿರುವ ಲಕ್ಷ್ಮಿಕಾಂತ್, ‘ಟಿಕೆಟ್ ರೇಟ್ ಹೆಚ್ಚಳಕ್ಕೆ ನಮಗೆ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಫಿಲಂ ಚೇಂಬರ್ ಏನು ನಿರ್ಣಯ ತೆಗೆದುಕೊಳ್ಳುವುದೋ ಅದಕ್ಕೆ ನಾವು ಬದ್ಧವಾಗಿರುತ್ತೇವೆ’ ಎಂದಿದ್ದಾರೆ.

‘ಪುಷ್ಪ 2’ ಸಿನಿಮಾ ಬೆಂಗಳೂರಿನಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಭಾರತದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಟಿಕೆಟ್ ದರ ಹೆಚ್ಚಾಗಿದೆ. ಕೆಲವು ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾದ ಟಿಕೆಟ್ ದರ 1200 ರ ವರೆಗೂ ಮಾರಾಟ ಆಗುತ್ತಿವೆ. ಐಮ್ಯಾಕ್ಸ್ ಟಿಕೆಟ್​ಗಳು 1500 ರೂಪಾಯಿಗೆ ಮಾರಾಟವಾಗುತ್ತಿವೆ. ಒಟ್ಟಾರೆ ‘ಪುಷ್ಪ 2’ ಸಿನಿಮಾ ಬೆಂಗಳೂರಿನಲ್ಲಿ ಭಾರಿ ಕಮಾಯಿಯನ್ನೇ ಮಾಡಿಕೊಡಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ