AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಪಿ, ಹೃದ್ರೋಗ ಇರುವವರು ಹವಾಮಾನ ಬದಲಾಗುತ್ತಿರುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬುದಕ್ಕೆ ಕಾರಣವೇನು?

ಹವಾಮಾನ ಬದಲಾವಣೆಯು ರಕ್ತದೊತ್ತಡ ಮತ್ತು ಹೃದಯ ರೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹವಾಮಾನದಲ್ಲಿನ ಏರಿಳಿತಗಳು ರಕ್ತದೊತ್ತಡ ಮತ್ತು ಹೃದಯ ರೋಗಿಗಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಹಾಗಾಗಿ ಈ ರೀತಿ ಆಗುವುದಕ್ಕೆ ಕಾರಣವೇನು? ಲಕ್ಷಣಗಳು ಹೇಗಿರುತ್ತವೆ ಮತ್ತು ಅದನ್ನು ತಡೆಗಟ್ಟಲು ಸರಿಯಾದ ಮಾರ್ಗಗಳೇನು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ವಿಷಯವಾಗಿ ಡಾ. ಅಜಿತ್ ಜೈನ್ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದು ಮತ್ತಷ್ಟು ತಿಳಿಯಲು ಈ ಸ್ಟೋರಿ ಓದಿ.

ಬಿಪಿ, ಹೃದ್ರೋಗ ಇರುವವರು ಹವಾಮಾನ ಬದಲಾಗುತ್ತಿರುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬುದಕ್ಕೆ ಕಾರಣವೇನು?
Bp And Heart PatientsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Feb 15, 2026 | 4:36 PM

Share

ಇತ್ತೀಚಿನ ದಿನಗಳಲ್ಲಿ, ಹವಾಮಾನ ಪದೇ ಪದೇ ಬದಲಾಗುತ್ತಿದೆ. ಕೆಲವೊಮ್ಮೆ ಶೀತ, ಆರ್ದ್ರತೆ ಮತ್ತೆ ಕೆಲವೊಮ್ಮೆ ಬೆಚ್ಚಗಿನ ವಾತಾವರಣ. ಈ ರೀತಿಯ ಏರಿಳಿತಗಳು ದೇಹದ ಸಾಮಾನ್ಯ ಸಮತೋಲನವನ್ನು ಅಡ್ಡಿಪಡಿಸಬಹುದು, ಅಷ್ಟು ಮಾತ್ರವಲ್ಲ ರಕ್ತದೊತ್ತಡ (BP) ಮತ್ತು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಇರುವವರಿಗೆ ಇದರಿಂದ ಆಗುವ ಅಪಾಯ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ, ರೋಗಿಗಳಿಗೆ ತಲೆನೋವು, ತಲೆತಿರುಗುವಿಕೆ, ಹಠಾತ್ ಆಯಾಸ, ಆತಂಕ, ಎದೆಯಲ್ಲಿ ಭಾರ, ಉಸಿರಾಟದ ತೊಂದರೆ, ಅತಿಯಾದ ಬೆವರುವುದು ಅಥವಾ ಅನಿಯಮಿತ ಹೃದಯ ಬಡಿತ ಕಂಡುಬರುವುದು ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಅನುಭವಕ್ಕೆ ಬರಬಹುದು. ಕೆಲವರಲ್ಲಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಂಡುಬರುತ್ತದೆ. ಹಾಗಾಗಿ ಲಕ್ಷಣಗಳನ್ನು ಸರಿಯಾಗಿ ಗುರುತಿಸಿ ಅವುಗಳನ್ನು ತಡೆಗಟ್ಟಬೇಕು.

ಲಕ್ಷಣಗಳು ಹೇಗಿರುತ್ತವೆ?

ಸಾಮಾನ್ಯವಾಗಿ ಇದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರಬಹುದು. ಕೆಲವರಲ್ಲಿ ಹಸಿವು ಕಡಿಮೆಯಾಗುವುದು, ದೇಹ ದೌರ್ಬಲ್ಯ ಮತ್ತು ಕೆಲಸದಲ್ಲಿ ಆಸಕ್ತಿಯ ಕೊರತೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇನ್ನು ಕೆಲವರಲ್ಲಿ, ಎದ್ದ ತಕ್ಷಣ ಭಾರವಾದ ಭಾವನೆ ಅಥವಾ ದಿನವಿಡೀ ಆಲಸ್ಯ ಅನುಭವಕ್ಕೆ ಬರಬಹುದು. ಈ ಲಕ್ಷಣಗಳು ದೇಹ ಬದಲಾಗುತ್ತಿರುವ ಪರಿಸರ ಅಥವಾ ಹವಾಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತವೆ. ಅಂತಹ ಸಂದರ್ಭಗಳಲ್ಲಿ, ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದು ಹಾನಿಕಾರಕವಾಗಬಹುದು. ಹಾಗಾಗಿ ಸಮಯಕ್ಕೆ ಸರಿಯಾಗಿ ಜಾಗೃತೆ ವಹಿಸುವುದು ಬಹಳ ಮುಖ್ಯವಾಗುತ್ತದೆ.

ಹವಾಮಾನ ಬದಲಾವಣೆ ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿರುವವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಅಜಿತ್ ಜೈನ್ ಹೇಳುವ ಪ್ರಕಾರ್, ಹವಾಮಾನದಲ್ಲಿನ ಬದಲಾವಣೆಯಾದಾಗ, ದೇಹವು ತನ್ನನ್ನು ತಾನು ಹೊಂದಿಸಿಕೊಳ್ಳಲು ಶ್ರಮಿಸಬೇಕಾಗುತ್ತದೆ. ಶೀತ, ಶಾಖ ಮತ್ತು ತೇವಾಂಶದಲ್ಲಿನ ಹಠಾತ್ ಬದಲಾವಣೆಗಳು ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಬಹುದು. ತಾಪಮಾನದಲ್ಲಿನ ವ್ಯತ್ಯಾಸಗಳು ರಕ್ತದೊತ್ತಡ ಅಸಮತೋಲನಕ್ಕೆ ಕಾರಣವಾಗಬಹುದು, ಇದು ಅಧಿಕ ಅಥವಾ ಕಡಿಮೆ ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇನ್ನು, ಆರ್ದ್ರತೆಯಲ್ಲಿ, ದೇಹದಾದ್ಯಂತ ಆಮ್ಲಜನಕವನ್ನು ತಲುಪಿಸಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ, ಇದು ಆಯಾಸ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಅದೇ ರೀತಿ, ಅತಿಯಾದ ಬೆವರುವಿಕೆಯು ದೇಹದಲ್ಲಿ ನೀರು ಮತ್ತು ಅಗತ್ಯ ಖನಿಜಗಳ ಕೊರತೆಯನ್ನು ಉಂಟುಮಾಡಬಹುದು, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಹವಾಮಾನದಲ್ಲಿನ ಬದಲಾವಣೆಗಳು ದೈನಂದಿನ ದಿನಚರಿ, ಆಹಾರ ಮತ್ತು ನಿದ್ರೆಯ ಮೇಲೂ ಪರಿಣಾಮ ಬೀರುತ್ತವೆ ಮತ್ತು ಕಾಲಾನಂತರದಲ್ಲಿ ಈ ಅಭ್ಯಾಸಗಳು ಹೃದಯ ಸಂಬಂಧಿತ ಸಮಸ್ಯೆಗಳನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಹೈಬಿಪಿ ಇರುವವರಿಗೆ ತಲೆಯ ಹಿಂಭಾಗದಲ್ಲಿ ನೋವು ಕಂಡುಬರುತ್ತದೆಯೇ?

ಹೇಗೆ ರಕ್ಷಿಸಿಕೊಳ್ಳಬಹುದು?

ಬದಲಾಗುತ್ತಿರುವ ಹವಾಮಾನದಲ್ಲಿ, ಜನರು ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ನಿರ್ಜಲೀಕರಣವನ್ನು ತಪ್ಪಿಸಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಊಟವನ್ನು ಸೇವನೆ ಮಾಡಿ. ಹವಾಮಾನಕ್ಕೆ ಅನುಗುಣವಾಗಿ ಉಡುಗೆ ತೊಡಿ. ಇದರಿಂದ ಶೀತ ಅಥವಾ ಶಾಖವನ್ನು ತಪ್ಪಿಸಬಹುದು. ಪ್ರತಿದಿನ ಲಘು ವ್ಯಾಯಾಮ ಮಾಡಿ, ಆದರೆ ದಣಿವು ಹೆಚ್ಚಿದ್ದಾಗ ವಿಶ್ರಾಂತಿ ಪಡೆಯಿರಿ. ಒತ್ತಡದಿಂದ ದೂರವಿರಲು ಮತ್ತು ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಪ್ರಯತ್ನಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ
ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ
ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP
ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP
ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ
ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ
ಮೀನ ರಾಶಿಯವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮೀನ ರಾಶಿಯವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ?
ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ?
ಮಕರ ರಾಶಿಯ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಪಾಕ್ ಸೇನಾ ಮುಖ್ಯಸ್ಥರ ಬಳಿ ಐಡಿ ಕೇಳಿದ ಮ್ಯೂನಿಕ್ ಭದ್ರತಾ ಸಿಬ್ಬಂದಿ
ಪಾಕ್ ಸೇನಾ ಮುಖ್ಯಸ್ಥರ ಬಳಿ ಐಡಿ ಕೇಳಿದ ಮ್ಯೂನಿಕ್ ಭದ್ರತಾ ಸಿಬ್ಬಂದಿ
ಕೊನೆಗೂ ಯುರೋಪಿಯನ್ ತಂಡದ ವಿರುದ್ಧ ಗೆದ್ದ ಇಂಗ್ಲೆಂಡ್
ಕೊನೆಗೂ ಯುರೋಪಿಯನ್ ತಂಡದ ವಿರುದ್ಧ ಗೆದ್ದ ಇಂಗ್ಲೆಂಡ್
Video: ಬುರ್ಖಾ ಧರಿಸಿ ಕನ್ವರ್ ಯಾತ್ರೆ ಕೈಗೊಂಡ ತಮನ್ನಾ
Video: ಬುರ್ಖಾ ಧರಿಸಿ ಕನ್ವರ್ ಯಾತ್ರೆ ಕೈಗೊಂಡ ತಮನ್ನಾ
ಮಕ್ಕಳು ಬೀಚ್​​ನಲ್ಲಿ ಆಟವಾಡುತ್ತಿದ್ದಾಗ ಬಂದೇ ಬಿಡ್ತು ಭಯಾನಕ ಅಲೆ
ಮಕ್ಕಳು ಬೀಚ್​​ನಲ್ಲಿ ಆಟವಾಡುತ್ತಿದ್ದಾಗ ಬಂದೇ ಬಿಡ್ತು ಭಯಾನಕ ಅಲೆ