AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸದಂತೆ ಎಸೆಯುವ ಕಲ್ಲಂಗಡಿ ಬೀಜವೇ ಪೌಷ್ಟಿಕ ಸ್ನ್ಯಾಕ್! ಸೇವಿಸುವ ಸರಿಯಾದ ವಿಧಾನ ತಿಳಿಯಿರಿ

ಕಲ್ಲಂಗಡಿ ಹಣ್ಣು ತಿಂದ ಬಳಿಕ ಬೀಜಗಳನ್ನು ಎಸೆಯುವ ಬದಲು ಅವುಗಳನ್ನು ಆಹಾರದಲ್ಲಿ ಬಳಸಬಹುದು. ಕಲ್ಲಂಗಡಿ ಬೀಜಗಳಲ್ಲಿ ಪ್ರೋಟೀನ್, ಮೆಗ್ನೀಷಿಯಂ, ಜಿಂಕ್, ಕಬ್ಬಿಣ ಹಾಗೂ ಆರೋಗ್ಯಕರ ಕೊಬ್ಬುಗಳಿವೆ. ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಬೀಜಗಳನ್ನು ಒಣಗಿಸಿ ಲಘುವಾಗಿ ಹುರಿದು ಸ್ನ್ಯಾಕ್ ಅಥವಾ ಸಲಾಡ್‌ಗೆ ಸೇರಿಸಬಹುದು. ಆದರೆ ಇದರ ಸೇವನೆಯಿಂದ ಸಿಗುವ ಪ್ರಯೋಜನ ಮತ್ತು ಯಾರಿಗೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಸದಂತೆ ಎಸೆಯುವ ಕಲ್ಲಂಗಡಿ ಬೀಜವೇ ಪೌಷ್ಟಿಕ ಸ್ನ್ಯಾಕ್! ಸೇವಿಸುವ ಸರಿಯಾದ ವಿಧಾನ ತಿಳಿಯಿರಿ
Watermelon Seeds BenefitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 10, 2026 | 7:52 PM

Share

ಕಲ್ಲಂಗಡಿ ಹಣ್ಣು ತಿಂದ ಬಳಿಕ ಅದರ ಬೀಜಗಳನ್ನು ಸಾಮಾನ್ಯವಾಗಿ ಎಸೆದುಬಿಡುತ್ತೇವೆ. ಆದರೆ ಇದೇ ಕಲ್ಲಂಗಡಿ ಬೀಜಗಳಲ್ಲಿ (Watermelon Seeds) ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಮೆಗ್ನೀಷಿಯಂ, ಜಿಂಕ್, ಕಬ್ಬಿಣ, ತಾಮ್ರ ಸೇರಿದಂತೆ ಹಲವು ಪೋಷಕಾಂಶಗಳು ಇರುತ್ತವೆ. ಸರಿಯಾದ ಪ್ರಮಾಣದಲ್ಲಿ ಆಹಾರದ ಭಾಗವಾಗಿ ಸೇವಿಸಿದರೆ, ಇವು ದೇಹಕ್ಕೆ ಕೆಲವು ಪ್ರಮುಖ ಪೌಷ್ಟಿಕಾಂಶಗಳನ್ನು ಒದಗಿಸಬಹುದು. ಹಾಗಾದರೆ ಕಲ್ಲಂಗಡಿ ಬೀಜಗಳನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ಸಿಗಬಹುದು ಮತ್ತು ಯಾರಿಗೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪೋಷಕಾಂಶಗಳ ಉತ್ತಮ ಮೂಲ

ಕಲ್ಲಂಗಡಿ ಬೀಜಗಳಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ಮೆಗ್ನೀಷಿಯಂ, ಜಿಂಕ್, ಕಬ್ಬಿಣ, ತಾಮ್ರ ಮತ್ತು ಪೊಟ್ಯಾಸಿಯಂ ಸೇರಿದಂತೆ ಹಲವು ಪೋಷಕಾಂಶಗಳಿವೆ. ವಿಶೇಷವಾಗಿ ಹುರಿದ ಅಥವಾ ಒಣಗಿಸಿದ ಬೀಜಗಳನ್ನು ಸಣ್ಣ ಪ್ರಮಾಣದಲ್ಲಿ ಸ್ನ್ಯಾಕ್ ಆಗಿ ಸೇವಿಸಬಹುದು. ಆದರೆ ಇವುಗಳಲ್ಲಿ ಕ್ಯಾಲೊರಿಗಳೂ ಇರುತ್ತವೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದು ಸೂಕ್ತವಲ್ಲ.

ಹೃದಯದ ಆರೋಗ್ಯಕ್ಕೆ ಹೇಗೆ ಸಹಕಾರಿ?

ಬೀಜಗಳಲ್ಲಿರುವ ಅಪರ್ಯಾಪ್ತ ಕೊಬ್ಬಿನಾಮ್ಲಗಳು ಒಟ್ಟಾರೆ ಹೃದಯ ಸ್ನೇಹಿ ಆಹಾರದ ಭಾಗವಾಗಬಹುದು. ಇದರಲ್ಲಿರುವ ಮೆಗ್ನೀಷಿಯಂ ಕೂಡ ದೇಹದ ಸಾಮಾನ್ಯ ಸ್ನಾಯು ಮತ್ತು ನರಗಳ ಕಾರ್ಯ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಅಗತ್ಯವಾದ ಖನಿಜವಾಗಿದೆ. ಆದರೆ ಕಲ್ಲಂಗಡಿ ಬೀಜಗಳು ಕೊಲೆಸ್ಟ್ರಾಲ್ ಅಥವಾ ರಕ್ತದೊತ್ತಡವನ್ನು ನೇರವಾಗಿ ಕಡಿಮೆ ಮಾಡುತ್ತವೆ ಎಂದು ಹೇಳಲು ಸಾಕಷ್ಟು ಪುರಾವೆಗಳಿಲ್ಲ.

ಇದನ್ನೂ ಓದಿ: ಕಪ್ಪು ಎಳ್ಳು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಸಹಕಾರಿ ಎಂಬುದು ಸತ್ಯವೋ, ಸುಳ್ಳೋ ತಿಳಿದುಕೊಳ್ಳಿ

ಚರ್ಮ ಮತ್ತು ಕೂದಲಿಗೆ ಪೋಷಣೆ ನೀಡುತ್ತದೆ

ಕಲ್ಲಂಗಡಿ ಬೀಜಗಳಲ್ಲಿರುವ ಪ್ರೋಟೀನ್, ಜಿಂಕ್, ಮೆಗ್ನೀಷಿಯಂ ಮತ್ತು ಆರೋಗ್ಯಕರ ಕೊಬ್ಬುಗಳು ಸಮತೋಲಿತ ಆಹಾರದ ಭಾಗವಾಗಿ ಚರ್ಮ ಮತ್ತು ಕೂದಲಿನ ಸಾಮಾನ್ಯ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬಹುದು. ಆದರೆ ಬೀಜಗಳನ್ನು ತಿಂದರೆ ಮೊಡವೆ, ಕೂದಲು ಉದುರುವಿಕೆ ಅಥವಾ ಸುಕ್ಕುಗಳು ಖಚಿತವಾಗಿ ಕಡಿಮೆಯಾಗುತ್ತವೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

ರಕ್ತದಲ್ಲಿನ ಸಕ್ಕರೆ ಮತ್ತು ಜೀರ್ಣಕ್ರಿಯೆ

ಕಲ್ಲಂಗಡಿ ಬೀಜಗಳಲ್ಲಿ ಪ್ರೋಟೀನ್, ಕೊಬ್ಬು ಮತ್ತು ಕೆಲವು ಪ್ರಮಾಣದ ಪೈಬರ್ ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಬಹುದು. ಇದನ್ನು ಮಧುಮೇಹ ಇರುವವರು ಕೂಡ ತಮ್ಮ ಒಟ್ಟಾರೆ ಆಹಾರ ಯೋಜನೆಯ ಭಾಗವಾಗಿ ಸೇವಿಸಬಹುದು. ಆದರೆ ಇದು ಮಧುಮೇಹದ ಔಷಧಿ ಅಥವಾ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಪರ್ಯಾಯವಲ್ಲ. ಪ್ರಮಾಣದ ಬಗ್ಗೆ ಗಮನ ಅಗತ್ಯ.

ಕಲ್ಲಂಗಡಿ ಬೀಜಗಳನ್ನು ಹೇಗೆ ಸೇವನೆ ಮಾಡಬೇಕು?

ಬೀಜಗಳನ್ನು ಚೆನ್ನಾಗಿ ತೊಳೆದು ಒಣಗಿಸಿ, ಲಘುವಾಗಿ ಹುರಿದು ಸೇವಿಸಬಹುದು. ಹೆಚ್ಚು ಉಪ್ಪು ಅಥವಾ ಮಸಾಲೆ ಸೇರಿಸುವುದನ್ನು ತಪ್ಪಿಸುವುದು ಉತ್ತಮ. ಇವುಗಳನ್ನು ಸಲಾಡ್, ಓಟ್ಸ್, ಮೊಸರು, ಸ್ನ್ಯಾಕ್ಸ್ ಅಥವಾ ಇತರ ಆಹಾರಗಳ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಸೇರಿಸಿ ತಿನ್ನಬಹುದು.

ಯಾರು ಎಚ್ಚರಿಕೆ ವಹಿಸಬೇಕು?

ಯಾವುದೇ ಬೀಜ ಅಥವಾ ಆಹಾರವನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ಬೀಜಗಳಿಗೆ ಅಲರ್ಜಿ ಇರುವವರು ದೂರವಿರಬೇಕು. ಮಧುಮೇಹ, ಮೂತ್ರಪಿಂಡದ ಕಾಯಿಲೆ ಅಥವಾ ವಿಶೇಷ ಆಹಾರ ನಿರ್ಬಂಧ ಹೊಂದಿರುವವರು ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೊದಲು ವೈದ್ಯರು ಅಥವಾ ಡಯಟಿಷಿಯನ್ ಸಲಹೆ ಪಡೆಯುವುದು ಉತ್ತಮ. ಒಟ್ಟಿನಲ್ಲಿ, ಕಲ್ಲಂಗಡಿ ಬೀಜಗಳನ್ನು ಪ್ರೋಟೀನ್, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ನೀಡುವ ಪೌಷ್ಟಿಕ ಬೀಜವಾಗಿ, ಸಮತೋಲಿತ ಆಹಾರದ ಭಾಗವಾಗಿ ಮಿತವಾಗಿ ಸೇವಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ