Health Care: ಆರೋಗ್ಯಕ್ಕೆ ಮೊಸರು ಒಳ್ಳೆಯದಾ ಅಥವಾ ಮಜ್ಜಿಗೆ ಉತ್ತಮವಾ?

Curd vs Buttermilk: ಆಯುರ್ವೇದದ ಪ್ರಕಾರ ಮೊಸರು ಮಧ್ಯಾಹ್ನದ ಮೊದಲು ತಿಂದರೆ ತುಂಬಾ ಪ್ರಯೋಜನಕಾರಿ. ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವುದು ಬಿಪಿಗೆ ಕಾರಣವಾಗಬಹುದು. ಮಜ್ಜಿಗೆಯನ್ನು ಯಾವುದೇ ಸಮಯದಲ್ಲಿ ಬೇಕಾದರೂ ಕುಡಿಯಬಹುದು.

Health Care: ಆರೋಗ್ಯಕ್ಕೆ ಮೊಸರು ಒಳ್ಳೆಯದಾ ಅಥವಾ ಮಜ್ಜಿಗೆ ಉತ್ತಮವಾ?
ಮೊಸರು- ಮಜ್ಜಿಗೆ
Follow us
ಸುಷ್ಮಾ ಚಕ್ರೆ
|

Updated on: Feb 02, 2023 | 4:06 PM

ಆರೋಗ್ಯಕ್ಕೆ ಹಾಲು (Milk), ಮೊಸರು (Curd), ತುಪ್ಪ (Ghee), ಬೆಣ್ಣೆ ಎಲ್ಲವೂ ಒಂದಲ್ಲ ಒಂದು ರೀತಿಯಿಂದ ಉತ್ತಮವಾದ ಮೂಲಗಳಾಗಿವೆ. ಆದರೆ, ಮೊಸರು ಮತ್ತು ಮಜ್ಜಿಗೆಯಲ್ಲಿ (Buttermilk) ನಮ್ಮ ದೇಹಕ್ಕೆ ಯಾವುದು ಒಳ್ಳೆಯದು? ಎಂದು ನೋಡುವುದಾದರೆ ಅವರೆಡರ ನಡುವಿನ ವ್ಯತ್ಯಾಸ ಮತ್ತು ಉಪಯೋಗಗಳ ಬಗ್ಗೆ ಮಾಹಿತಿ ಇಲ್ಲಿದೆ.

ಆಯುರ್ವೇದದ ಪ್ರಕಾರ ಮೊಸರು ಮಧ್ಯಾಹ್ನದ ಮೊದಲು ತಿಂದರೆ ತುಂಬಾ ಪ್ರಯೋಜನಕಾರಿ. ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವುದು ಬಿಪಿಗೆ ಕಾರಣವಾಗಬಹುದು. ಆದ್ದರಿಂದ, ಅದರ ಬದಲಾಗಿ ಬೆಳಗಿನ ಉಪಾಹಾರದ ನಂತರ ಮೊಸರನ್ನು ಸೇವಿಸಿ. ಅನೇಕ ಜನರು ರಾತ್ರಿ ಮೊಸರು ತಿನ್ನುತ್ತಾರೆ ಇದು ತಪ್ಪು. ಮೊಸರು ತಣ್ಣಗಿರುತ್ತದೆ, ಆದ್ದರಿಂದ ಇದನ್ನು ರಾತ್ರಿಯಲ್ಲಿ ಸೇವಿಸುವುದರಿಂದ ಕೆಮ್ಮು, ಶೀತ ಮತ್ತು ಶ್ವಾಸಕೋಶದ ಕಾಯಿಲೆಗಳ ಜೊತೆಗೆ ಕೀಲು ನೋವು ಉಂಟಾಗುತ್ತದೆ. ತಿನ್ನುವ ಮೊದಲು ಮೊಸರನ್ನು ಎಂದಿಗೂ ಬಿಸಿ ಮಾಡಬಾರದು. ಆಯುರ್ವೇದದ ಪ್ರಕಾರ, ಮೊಸರಿಗೆ ಸಕ್ಕರೆ ಸೇರಿಸಿ ತಿಂದರೆ, ಅದು ನಮಗೆ ದಿನಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.

ಮಜ್ಜಿಗೆಯನ್ನು ಯಾವುದೇ ಸಮಯದಲ್ಲಿ ಬೇಕಾದರೂ ಕುಡಿಯಬಹುದು. ಊಟದ ನಂತರ ನೀವು ಅದನ್ನು ಕುಡಿಯಬಹುದು. ಆದರೆ, ಸಂಜೆ ಅಥವಾ ರಾತ್ರಿಯಲ್ಲಿ ಇದನ್ನು ಸೇವಿಸುವ ಮೊದಲು ಹವಾಮಾನ ಮತ್ತು ಸ್ಥಳದ ಬಗ್ಗೆ ಗಮನ ಹರಿಸುವುದು ಮುಖ್ಯ. ಹೊಟ್ಟೆಯ ಸಮಸ್ಯೆಗಳಿದ್ದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯಿರಿ.

ಇದನ್ನೂ ಓದಿ: Buttermilk Side Effects: ದಿನವೂ ಮಜ್ಜಿಗೆ ಕುಡಿಯುತ್ತೀರಾ?; ಇದರ ಅಡ್ಡ ಪರಿಣಾಮಗಳ ಬಗ್ಗೆಯೂ ತಿಳಿದಿರಲಿ!

ನೀವು ತೂಕ ಹೆಚ್ಚಿಸಿಕೊಳ್ಳಬೇಕು ಎಂದಾದರೆ ಮೊಸರನ್ನು ಹೆಚ್ಚು ಸೇವಿಸಿ. ಇದರಲ್ಲಿ ಕೊಬ್ಬಿನ ಅಂಶಗಳು ಇರುವುದರಿಂದ ತೂಕ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಒಂದುವೇಳೆ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮಜ್ಜಿಗೆಯನ್ನು ಹೆಚ್ಚಾಗಿ ಸೇವಿಸಿ. ಇದು ದೇಹದ ನಿರ್ಜಲೀಕರಣವನ್ನು ಕಡಿಮೆ ಮಾಡಿ, ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

ಮಜ್ಜಿಗೆ ಎಲ್ಲಾ 3 ದೇಹ ಪ್ರಕಾರಗಳಿಗೆ ಮತ್ತು ಎಲ್ಲಾ ಋತುಗಳಿಗೆ ಸೂಕ್ತವಾಗಿದೆ. ಮಜ್ಜಿಗೆ ಮೊಸರಿಗಿಂತ ತುಂಬಾ ಆರೋಗ್ಯಕರವಾಗಿದೆ. ಮೊಸರು ಕೊಬ್ಬು, ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವಾತ ಅಸಮತೋಲನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ ಮೊಸರನ್ನು ತಪ್ಪಿಸಬೇಕು.

ಇದನ್ನೂ ಓದಿ: Curd: ಚಳಿಗಾಲದಲ್ಲಿ ಮೊಸರು ತಿನ್ನಲು ಸರಿಯಾದ ಮಾರ್ಗ ಯಾವುದು? ಹೇಗೆ ತಿಂದರೆ ಹೆಚ್ಚು ಲಾಭ

ಯಾರು ಮೊಸರನ್ನು ಸೇವಿಸಬಾರದು?: – ಸ್ಥೂಲಕಾಯತೆ, ಕಫ, ರಕ್ತಸ್ರಾವ, ಉರಿಯೂತ, ಹೆಚ್ಚಿದ ಬಿಗಿತ ಮತ್ತು ಸಂಧಿವಾತ ಇರುವವರು ಮೊಸರನ್ನು ತ್ಯಜಿಸಬೇಕು.

– ರಾತ್ರಿಯಲ್ಲಿ ಮೊಸರು ಸೇವನೆ ಒಳ್ಳೆಯದಲ್ಲ. ಏಕೆಂದರೆ ಇದು ಶೀತ, ಕೆಮ್ಮು, ಸೈನಸ್ ಅನ್ನು ಪ್ರಚೋದಿಸುತ್ತದೆ.

– ಮೊಸರನ್ನು ಬಿಸಿ ಮಾಡುವುದನ್ನು ತಪ್ಪಿಸಿ. ಏಕೆಂದರೆ ಇದು ಎಲ್ಲಾ ಉಪಯುಕ್ತ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.

– ಚರ್ಮದ ಅಸ್ವಸ್ಥತೆಗಳು, ತಲೆನೋವು, ನಿದ್ರೆ ಸಮಸ್ಯೆ ಮತ್ತು ಜೀರ್ಣಕಾರಿ ಅಸ್ವಸ್ಥತೆಗಳಿರುವವರಿಗೆ ಮೊಸರು ಸೂಕ್ತವಲ್ಲ.

ಮೊಸರಿಗೆ ಮಜ್ಜಿಗೆ ಅತ್ಯುತ್ತಮ ಪರ್ಯಾಯ ಎಂದು ಪರಿಗಣಿಸಲಾಗಿದೆ. ಮಜ್ಜಿಗೆಯ ಕೆಲವು ಪ್ರಯೋಜನಗಳೆಂದರೆ…

– ಮಜ್ಜಿಗೆ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ರೋಗಗಳಿಗೆ ಚಿಕಿತ್ಸೆ ನೀಡುತ್ತದೆ.

– ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಎಲ್ಲಾ ರೀತಿಯ ದೇಹಗಳಿಗೆ ಸೂಕ್ತವಾಗಿದೆ.

– ಉರಿಯೂತ, ಜೀರ್ಣಕಾರಿ ಅಸ್ವಸ್ಥತೆಗಳು, ಜಠರಗರುಳಿನ ಅಸ್ವಸ್ಥತೆಗಳು, ಹಸಿವಿನ ಕೊರತೆ, ರಕ್ತಹೀನತೆಯನ್ನು ನಿವಾರಿಸಲು ಇದು ಉಪಯುಕ್ತವಾಗಿದೆ.

– ಚಳಿಗಾಲದಲ್ಲೂ ಇದು ಅಜೀರ್ಣದ ಚಿಕಿತ್ಸೆಗೆ ಪ್ರಯೋಜನಕಾರಿ. ಮಲಬದ್ಧತೆಯನ್ನು ನಿವಾರಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು